Breaking News

ಹುಡಗಿ ನೋಡಲು ನನ್ನನ್ನು ಕರೆಯದೇ ಮದುವೆ ಫಿಕ್ಸ ಮಾಡಿದ್ರು..

ಬೆಳಗಾವಿ- ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಮೊದಲು ಅಲಾರವಾಡ ಗ್ರಾಮದಲ್ಲಿ ಭೂಮಿ ಗುರುತಿಸಲಾಗಿತ್ತು ಆದರೆ ಹಲಗಾ ಗ್ರಾಮದ ಭೂಮಿ ಗುರುತಿಸುವಾಗ ನನ್ನನ್ನು ಕರೆದಿಲ್ಲ  ಮನೆಯ ಯಜಮಾನನ್ನು ಕರೆಯದೇ ಹುಡಗಿ ನೋಡಿ ಮದುವೆ ಫಿಕ್ಸ ಮಾಡಿದ್ದು ಯಾವ ನ್ಯಾಯ ಎಂದು ಶಾಸಕ ಸಂಜಯ ಪಾಟೀಲ ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು

ಜಿಲ್ಲಾಧಿಕಾರಿ ಎನ್ ಜಯರಾಂ ಸಂಸದ ಸುರೇಶ ಅಂಗಡಿ,ಶಾಸಕ ಸಂಜಯ ಪಾಟೀಲ ಅವರು ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಜಮೀನು ನೀಡಿರುವ ರೈತರ ಜೊತೆ ಸಭೆ ನಡೆಸಿದರು ಸಭೆಯಲ್ಲಿ ಭಾಗವಹಿಸಿದ ರೈತರು ನಮ್ಮ ಜಮೀನು ಫಲವತ್ತಾಗಿದೆ ಹಲಗಾ ಗ್ರಾಮದ ರೈತರು ಈಗಾಗಲೇ ಸುವರ್ಣ ವಿಧಾನ ಸೌಧ ನಿರ್ಮಿಸಲು ಭೂಮಿ ನೀಡಿದ್ದಾರೆ ಸಂಸ್ಕರಣಾ ಘಟಕಕ್ಕೆ ನಮ್ಮ ಜಮೀನು ಏಕೆ ? ಎಂದು ಅಳಲು ತೋಡಿಕೊಂಡ ರೈತರು ದಯವಿಟ್ಟು ನಮ್ಮ ಜಮೀನು ಕಸಿದುಕೊಳ್ಳಬೇಡಿ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು

ಜಿಲ್ಲಾಧಿಕಾರಿ ಎನ್ ಜಯರಾಂ ಮಾತನಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ಈಗಾಗಲೇ ಹಲಗಾ ಗ್ರಾಮದ ಜಮೀನು ಭೂಸ್ವಾದೀನ ಪಡಿಸಿಕೊಳ್ಖಲಾಗಿದೆ ಈಗ ಮತ್ತೇ ಹುಡಗಿ ನೋಡುವ ಪ್ರಶ್ನೆಯೇ ಇಲ್ಲ ಹುಡಗಿ ನೋಡಿ ಮದುವೆಯೂ ಆಗಿ ಹೋಗಿದೆ ಎಂದು ಸಂಜಯ ಪಾಟೀಲರ ಪ್ರಶ್ನೆಗೆ ಪ್ರತ್ಯುತ್ತರ ನೀಡಿದರು

ಇದಕ್ಕೆ ಸಮಾಧಾನಗೊಳ್ಳದ ಶಾಸಕ ಸಂಜಯ ಪಾಟೀಲ ಅಲಾರವಾಡ ಗ್ರಾಮಕ್ಕೆ ಭೇಟಿ ಕೊಡಬೇಕು ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು ಅಲಾರವಾಡ ಗ್ರಾಮದ ಜಮೀನು ಯೋಗ್ಯವೇ ಅಥವಾ ಹಲಗಾ ಗ್ರಾಮದ ಜಮೀನು ಯೋಗ್ಯ ವೇ ಅನ್ನೋದನ್ನು ಮರು ಪರಶೀಲನೆ ಮಾಡಬೇಕು ಎಂದು ಶಾಸಕ ಸಂಜಯ ಪಾಟೀಲ ಸಭೆಯಲ್ಲಿ ಒತ್ತಾಯಿಸಿದರು

ಸಂಸದ ಸುರೇಶ ಅಂಗಡಿ ಮಾತನಾಡಿ ಹಲಗಾ ಗ್ರಾಮದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸುವ ಪ್ರಕ್ರಿಯೇ ಎಂಟು ವರ್ಷದ ಹಿಂದೇಯೇ ಆರಂಭವಾಗಿದೆ ಸರ್ಕಾರ ಭೂಸ್ವಾಧೀನ ಪಡಿಸಿಕೊಂಡು ನಂತರ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ತೀರ್ಪು ಬಂದಿರುವಾಗ ಏನೂ ಮಾಡಲು ಸಾಧ್ಯವಿಲ್ಲ ಜಮೀನು ನೀಡಿದ ರೈತರಿಗೆ ಯೋಗ್ಯ ಪರಿಹಾರ ಕೊಡಿ ಎಂದು ಅಂಗಡಿ ಸಭೆಯಲ್ಲಿ ಒತ್ತಾಯಿಸಿದರು

ಹಲಗಾ ಗ್ರಾಮದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲು ನನ್ನ ವಿರೋಧ ಇದೆ ಅಧಿಕಾರ ಇರೋವರೆಗೆ ರೈತರ ಪರವಾಗಿ ಬ್ಯಾಟಿಂಗ್ ಮಾಡುತ್ತೇನೆ ಎಂದು ಶಾಸಕ ಸಂಜಯ ಪಾಟೀಲ ಹೇಳಿದಾಗ ಈಗ ಸದ್ಯಕ್ಕೆ ಗೇಮ್ ಮುಗಿದಿದೆ ಬ್ಯಾಟಿಂಗ್ ಮಾಡಿ ಏನೂ ಉಪಯೋಗವಿಲ್ಲ ಬ್ಯಾಟೀಂಗ್ ಮಾಡಿದ್ರೂ ಸೋಲ್ತೀರಾ ಎಂದು ಜಿಲ್ಲಾಧಿಕಾರಿ ಜಯರಾಮ್ ಶಾಸಕ ಸಂಜಯ ಪಾಟೀಲರಿಗೆ ಟಾಂಗ್ ನೀಡಿದ್ರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಜಲಮಂಡಳಿಯ ಪ್ರಸನ್ನಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

 

Check Also

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …

Leave a Reply

Your email address will not be published. Required fields are marked *