ಸಂಜಯ ಪಾಟೀಲ,ಸುರೇಶ ಅಂಗಡಿ ನಡುವೆ ವಾಗ್ವಾದ

ಬೆಳಗಾವಿ- ಹಲಗಾ ಗ್ರಾಮದಲ್ಲಿ ಕೇವಲ ಎರಡು ಎಕರೆ ಜಮೀನು ಇದೆ ಇತ್ತಿಚಿಗಷ್ಟೇ ಪೈಪ್ ಲೈನ್ ಮಾಡಿದ್ದೇನೆ ಇದರ ಮೇಲೆಯೇ ನನ್ನ ಜೀವನ ದಯವಿಟ್ಟು ನನ್ನ ಜಮೀನು ಕಸಿದುಕೊಳ್ಳಬೇಡಿ ಎಂದು ಹಲಗಾ ಗ್ರಾಮದ ರೈತನೊಬ್ಬ ಶಾಸಕ ಸಂಜಯ ಪಾಟೀಲ ಹಾಗು ಸಂಜಯ ಪಾಟೀರನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ ಘಟನೆ ನಡೆದಿದೆ

ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಹಲಗಾ ಗ್ರಾಮದಲ್ಲಿ 19 ಎಕರೆ ರೈತರ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ ಈ ಕುರಿತು ಜಿಲ್ಲಾಧಿಕಾರಿಗಳ ಸಭೆ ಮುಗಿದ ಬಳಿಕ ಹಲಗಾ ಗ್ರಾಮದ ರೈತ ಅಣ್ಣಪ್ಪಾ ಹುಡೇಧ ಹಾಗು ಶಿವಕುಮಾರ ಬೆಲ್ಲದ ದಯವಿಟ್ಟು ನಮ್ಮ ಜಮೀನು ಕಸಿದುಕೊಳ್ಳಬೇಡಿ ನಮಗೆ ವಿಷ ಕೊಡಿ ಎಂದು ಕಣ್ಣೀರು ಸುರಿಸಿದರು

ನಂತರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸಂಸದ ಸುರೇಶ ಅಂಗಡಿ ಹಾಗು ಸಂಜಯ ಪಾಟೀಲರ ನಡುವೆ ಮಾತಿನ ಚಕಮಕಿ ನಡೆಯಿತು ಸಂಸದರು ರೈತರ ಪರವಾಗಿ ನಿಲ್ಲುತ್ತಿಲ್ಕ ಚುನಾವಣೆ ಸಮೀಪ ಬಂದಂತೆ ಸಂಜಯ ಪಾಟೀಲ ಕೆಟ್ಟವನು ಎಂದು ಬಿಂಬಿಸಲಾಗುತ್ತಿದೆ ರೈತರಿಗೆ ಅನ್ಯಾಯವಾದಾಗ ಪ್ರತಿಭಟಿಸುವದನ್ನು ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಸಂಜಯ ಪಾಟೀಲ ಸಂಸದ ಸುರೇಶ ಅಂಗಡಿ ಅವರನ್ನು ತರಾಟೆಗೆ ತೆಗೆದುಕೊಂಡರು

ಇದೇ ಸಂಧರ್ಭದಲ್ಲಿ ಶಾಸಕ ಸಂಜಯ ಪಾಟೀಲ ಕೆಲವು ಮಾದ್ಯಮ ಪ್ರತಿನಿಧಿಗಳಿಗೆ ಏರಿದ ಧ್ವನಿಯಲ್ಲಿ ಮಾತನಾಡಿ ಮಾದ್ಯಮಗಳು ಕವಟಗಿಮಠ ಅವರ ವಿಷಯವನ್ನು ದಿನವಿಡೀ ತೋರಿಸಿದ್ದೀರಿ ರೈತರ ಸಮಸ್ಯೆ ಬಗ್ಗೆ ಯಾಕೆ? ತೋರಿಸಿಲ್ಲ ಎಂದು ಮಾದ್ಯಮಗಳ ವಿರುದ್ಧವೂ ಶಾಸಕ ಸಂಜಯ ಪಾಟೀಲ ಹರಿಹಾಯ್ದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *