ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ
ಸಭೆಯಲ್ಲಿ ಹಲಗಾ ಗ್ರಾಮದ ಬಳಿಯ ರೈತರ ಭೂ ಸ್ವಾಧೀನ ವಿಚಾರ ಪ್ರಸ್ತಾಪವಾಯಿತು ಹಲಗಾ ಗ್ರಾಮದ ರೈತರು ಭೂಸ್ವಾಧೀನ ವಿರೋಧಿಸಿ ಪಾಲಿಕೆಯ ಹೊರಗೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಕಾಕಿದರೆ ಪಾಲಿಕೆ ಸಭೆಯಲ್ಲಿ ಶಾಸಕ ಸಂಜಯ ಪಾಟೀಲ ರೈತರ ಪರವಾಗಿ ವಾದ ಮಂಡಿಸಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
೧೯ ಎಕರೆ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಸಭೆಯಲ್ಲಿ ಶಾಸಕ ಸಂಜಯ್ ಪಾಟೀಲ್ ವಿರೋಧ ವ್ಯೆಕ್ತಪಡಿಸಿದರು STP ಪ್ಲ್ಯಾಂಟ್ ಆಗುವದಕ್ಕೆ ನನ್ನ ವಿರೋಧವಿಲ್ಲ ಆದರೆ ಸ್ಥಳ ಬದಲಾಗಲಿ ರೈತರ ಫಲವತ್ತಾದ ಭೂಮಿ ಉಳಿಸಲು ನಿರ್ಣಯ ಕೈಗೊಳ್ಳಬೇಕೆಂದು ಮನವಿ. ಮಾಡಿಕೊಂಡರು ಬೆಳಗಾವಿ ಗ್ರಾಮೀಣ ಕ್ಷೇತ್ರದ ರೈತರು ಸುವರ್ಣ ಸೌಧ ನಿರ್ಮಿಸಲು ಭೂಮಿ ಕೊಟ್ಟಿದ್ದಾರೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಭೂಮಿ ಕೊಟ್ಟಿದ್ದಾರೆ ಈಗ STP ಪ್ಲ್ಯಾಂಟ್ ನಿರ್ಮಿಸಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲಗಾ ಗ್ರಾಮದ ರೈತರ ಜಮೀನು ಏಕೆ ತಗೊಳ್ತೀರಾ ? ಎಂದು ಪ್ರಶ್ನಿಸಿದ ಸಂಜಯ ಪಾಟೀಲ ಅಲಾರವಾಡ ಗ್ರಾಮದ ಜಮೀನು ಕೈಬಿಡಲು ಕಾರಣ ಏನು ಎಂದು ಪಾಲಿಕೆ ಸಭೆಯಲ್ಲಿ ಪ್ರಶ್ನೆಗಳ ಸುರಿಮಳೆ ಗೈದರು
ಶಾಸಕರಮನವಿಗೆ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ್ ಉತ್ತರ ನೀಡುತ್ತ
೨೦೧೩ರಲ್ಲಿ ಈ ಭೂಮಿಯನ್ನ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ.
ಕಾನೂನು ಬದ್ದವಾಗಿ ಭೂ ಸ್ವಾಧೀನ ಮಾಡಿ ಭೂಮಿ ವಶಕ್ಕೆ ಪಡೆಯಲಾಗಿದೆ.
ಉಚ್ಚ ನ್ಯಾಯಾಲಯದ ಆದೇಶದಂತೆ ಘಟಕ ಪ್ರಾರಂಭಕ್ಕೆ ಅನುಮತಿ ನೀಡಿದೆ. ತಾಂತ್ರಿಕ ವರದಿಯಲ್ಲೂ ಈ ಜಾಗ ಘಟಕ ಸ್ಥಾಪನೆಗೆ ಸೂಕ್ತ ಅಂತಾ ಹೇಳಿದೆ.
ಈ ಘಟಕ ಸ್ಥಾಪನೆ ಅನಿವಾರ್ಯ ವಾಗಿದೆ ಇದನ್ನ ಎಲ್ಲರೂ ಒಪ್ಪಿಕೊಳ್ಳಬೇಕು ಘಟಕ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಿಕೊಂಡರು
ಇದಾದ ಬಳಿಕ ಪಂಡರಿ ಪರಬ,ರಮೇಶ ಸೊಂಟಕ್ಕಿ ಮತ್ತು ಕಿರಣ ಸೈನಾಯಕ ಅವರು ಮಾತನಾಡಿ ಬೆಳಗಾವಿಯಲ್ಲಿ STP ಪ್ಲ್ಯಾಂಟ್ ಆಗಬೇಕು ಜೊತೆಗೆ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಶಾಸಕ ಸಂಜಯ ಪಾಟೀಲರು ಗಮನ ಸೆಳೆಯುವ ಸೂಚನೆಯ ಮೂಲಕ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ ಈ ವಿಷಯದ ಬಗ್ಗೆ ನಗರ ಸೇವಕರಿಗೆ ಸಂಪೂರ್ಣ ಮಾಹಿತಿ ಇಲ್ಲ ಅದಕ್ಕಾಗಿ ಮುಂದಿನ ಸಭೆಯಲ್ಲಿ ಈ ವಿಷಯ ಚರ್ಚೆ ಮಾಡಬೇಕು ಎಂದು ಹೇಳಿದರು
ನಂತರ ಮದ್ಯಪ್ರವೇಶಿಸಿ ಮಾತನಾಡಿದ ಶಾಸಕ ಸೇಠ ಹಲಗಾ ದಲ್ಲಿ STP ಪ್ಲ್ಯಾಂಟ್ ನಿರ್ಮಿಸುವ ನಿರ್ಣಯ ಮತ್ತು ಭೂಸ್ವಾಧೀನ ಮಾಡಿಕೊಂಡ ಪ್ರಕ್ರಿಯೆ 2011 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ನಡೆದುಹೋಗಿದೆ ಎಂದು ಸಂಜಯ ಪಾಟೀಲರಿಗೆ ಟಾಂಗ್ ನೀಡಿದ್ರು
ಚರ್ಚೆ ಮುಗಿದ ಬಳಿಕ ಮೇಯರ್ ಸಂಜೋತಾ ಬಾಂಧೇಕರ ಅವರು ಹಲಗಾ ರೈತರ ಭೂಸ್ವಾಧೀನ ವಿಷಯ ಮತ್ತು STP ಪ್ಲ್ಯಾಂಟ್ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆ ಮಾಡೋಣ ಎಂದು ರೂಲಿಂಗ್ ಕೊಟ್ಟು ಚರ್ಚೆಗೆ ತೆರೆ ಎಳೆದರು
ಹಲಗಾದಲ್ಲಿ ನಿರ್ಮಿಸಲಾಗುತ್ತಿರುವ ಕೊಳಚೆ ನೀರು ಸಂಸ್ಕರಣಾ ಘಟಕ ವಿರೋಧಿಸಿ ನೂರಾರು ಜನ ರೈತರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿದ ಹಿನ್ನಲೆಯಲ್ಲಿ ಬೆಳಿಗ್ಗೆ 11-00 ಘಂಟೆಗೆ ಆರಂಭವಾಗಬೇಕಿದ್ದ ಪಾಲಿಕೆ ಸಭೆ ಮಧ್ಯಾಹ್ನ 1-15 ಕ್ಕೆ ಎರಡು ತಾಸು ತಡವಾಗಿ ಆರಂಭವಾಯಿತು