ಬೆಳಗಾವಿ-ನಾಡು, ನುಡಿ ಜಲದ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಬೇಕಿದ್ದ ಬೆಳಗಾವಿ ಬಿಜೆಪಿ ಶಾಸಕ ಸಂಜಯ ಪಾಟೀಲ್ ಮರಾಠಿ ಪ್ರೇಮ್ ಪ್ರದರ್ಶಿಸಿದ್ದಾರೆ. ಬೆಳಗಾವಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕ ಪಾಟೀಲ್ ಮರಾಠಿಯಲ್ಲಿ ಮಾತನಾಡಿದ್ದು, ಶಾಸಕರ ಓಟ್ ಬ್ಯಾಂಕ್ ರಾಜಕಾರಣ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ರಾಜ್ಯದಲ್ಲಿ ೨೦೧೮ ವಿಧಾನಸಭೆ ಚುನಾವಣೆಗೆ ಎಲ್ಲ ಜನಪ್ರತಿನಿಧಿಗಳೂ ತಾಲೀಮ ನಡೆಸಿದ್ದಾರೆ. ಆದ್ರೆ ಕುರ್ಚಿಗಾಗಿ ಬೆಳಗಾವಿ ಶಾಸಕರೊಬ್ಬ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ. ಅತ್ತ ರಾಜ್ಯ ಸರ್ಕಾರ ಕನ್ನಡ ಪ್ರೀತಿ ತೋರಿಸಿದರೆ ಇತ್ತ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ರಿಂದ ಕನ್ನಡಕ್ಕೆ ಅವಮಾನ ಮಾಡಿದ ಘಟನೆ ಇಂದು ನಡೆಯಿತು. ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಾಗಿಯಾದ ಶಾಸಕ ಸಂಜಯ ಪಾಟೀಲ್ ಸಭೆಯಲ್ಲಿ ಮರಾಠಿಯಲ್ಲಿ ಮಾತನಾಡಿದ್ರು. ಮರಾಠಿ ಓಟ್ ಬ್ಯಾಂಕ್ ಗಾಗಿ ಶಾಸಕರಿಂದ ಮರಾಠಿ ಪ್ರೇಮವನ್ನು ತೋರಿಸಿದರು. ಇತ್ತ ಚುನಾವಣೆ ಹತ್ತಿರವಾಗುತ್ತಿದ್ದಂತೆ
ವರಸೆ ಬದಲಿಸಿದ ಶಾಸಕ ಸಂಜಯ ಪಾಟೀಲ ಪಾಲಿಕೆ ಪರಿಷತ್ ಸಭೆಯಲ್ಲಿ ನೂತನ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಅವರಿಗೆ ಮರಾಠಿ ಭಾಷೆಯಲ್ಲಿ ಅಭಿನಂದನೆ ಸಲ್ಲಿಸಿದ್ರು.
ಇನ್ನು ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ ಪ್ರಾಭಲ್ಯವಿದೇ.. ಆದ್ರು ಪಾಲಿಕೆ ಅಧಿಕಾರಿಗಳೂ ಕನ್ನಡ ಗಟ್ಟಿಗೊಳಿಸುವ ಕೆಲಸ ಮಾಡುತ್ತಲೆ ಇದ್ದು ಪಾಲಿಕೆಯಲ್ಲಿ ನಾಡಗೀತೆಯನ್ನು ಕಡ್ಡಾಯ ಗೊಳಿಸಿದೆ . ಆದ್ರೆ ಚುನಾವಣೆ ಸಮೀಪಿಸುತ್ತಿದ್ದಂತೆ ಶಾಸಕ ಸಂಜಯ ಪಾಟೀಲ್ ಮರಾಠಿ ಭಾಷೆಯಲ್ಲಿ ಮಾತನಾಡುವ ಮೂಲಕ ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಆದ್ರೆ ಶಾಸಕರ ಮರಾಠಿ ಪ್ರೇಮ್ ಇತ್ತ ಕನ್ನಡಪರ ಸಂಘಟನೆಗಳು ಖಂಡಿಸಿವೆ.
ಒಟ್ಟ್ನಲ್ಲಿ ಬೆಳಗಾವಿ ಪಾಲಿಕೆಯಲ್ಲಿ ನಾಡು, ನುಡಿಗೆ ಅವಮಾನ ಮಾಡಿದ ಶಾಸಕ ಸಂಜಯ ಪಾಟೀಲ್ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನಾದ್ರು ಗಡಿಯಲ್ಲಿ ಭಾಷಾ ರಾಜಕಾರಣ ಮಾಡುವ ಜನಪ್ರತಿನಿಧಿಗಳಿಗೆ ಜನರೇ ಪಾಠ ಕಲಿಸಬೇಕಿದೆ.