ಬೆಳಗಾವಿ- ಇತ್ತೀಚಿಗೆ ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷತ್ತ ಭಜರಂಗದಳ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ಟಿಪ್ಪು ಜಯಂತಿ ವಿರೋಧಿಸಿ ಆಯೋಜಿಸಿದ ರ್ಯಾಲಿಯಲ್ಲಿ ಶಾಸಕ ಸಂಜಯ ಪಾಟೀಲ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನಿಂದಿಸಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿಯಲ್ಲಿ ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ಸೋ ಮೋಟೋ ಕೇಸ್ ದಾಖಲಾಗಿದೆ
ಶಾಸಕ ಸಂಜಯ ಪಾಟೀಲ ಹಾಗು ಭಜರಂಗದಳದ ಸ್ವರೂಪ ಕಾಲಕುಂದ್ರಿ ಅವರ ವಿರುದ್ಧ ಸೋ ಮೋಟೋ ಕೇಸ್ ದಾಖಲಿಸಲಾಗಿದೆ ಎಂದು ನಗರ ಪೋಲೀಸ್ ಆಯುಕ್ತ ಕೃಷ್ಣಭಟ್ ತಿಳಿಸಿದ್ದಾರೆ
ಶಾಸಕ ಸಂಜಯ ಪಾಟೀಲ ಅವರು ಹಿಂದೂ ಸಂಘಟನೆಗಳ ರ್ಯಾಲಿ ಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಪಶಕಿಸ್ಥಾನಕ್ಕೆ ಕಳುಹಿಸಬೇಕು ಎಂದು ಹೇಳಿದ ಅವರ ಸಂಪೂರ್ಣ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೋಲೀಸರು ಅವರ ವಿರುದ್ಧ ಕಲಂ 143 ,163 A 188 ಸೇರಿದಂತೆ ವಿವಿಧ ಕಲಂ ಅಡಿಯಲ್ಲಿ ಶಾಸಕ ಸಂಜಯ ಪಾಟೀಲ ಮತ್ತು ಭಜರಂಗ ದಳದ ಸ್ವರೂಪ ಕಾಲಕುಂದ್ರಿ ವಿರುದ್ಧ ಸೋ ಮೋಟೋ ಕೇಸ್ ದಾಖಲಿಸಲಾಗಿದೆ
ಸೋಮೋಟೋ ಕೇಸ್ ದಾಖಲಿಸಿರುವ ವಿಷಯವನ್ನು ಪತ್ರ ಮುಖೇನ ವಿಧಾನಸಭೆಯ ಸಭಾಪತಿ ಗಳ ಗಮನಕ್ಕೆ ತರಲಾಗಿದೆ ಎಂದು ನಗರ ಪೋಲೀಸ್ ಆಯುಕ್ತರು ತಿಳಿದಿದರು
ಸಂಸದರನ್ನು ಕೈಬಿಟ್ಟ ಜಿಲ್ಲಾಡಳಿತ
ಟಿಪ್ಪು ಜಯಂತಿಯ ಆ ಮಂತ್ರಣ ಪತ್ರಿಕೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಸಂಸದ ಸುರೇಶ ಅಂಗಡಿ ಅವರ ಹೆಸರನ್ನು ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಿಂದ ತೆಯಲಾಗಿದ್ದು ಹೊಸ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗಿದೆ