ಬೆಳಗಾವಿ- ಬೆಳಗಾವಿ ನಗರದಲ್ಲಿ ಸಂಗ್ರಹ ವಾಗುವ ಕಸವನ್ನು ಸಮೀಪದ ತುರಮರಿ ಗ್ರಾಮದಲ್ಲಿ ಡಂಪ್ ಮಾಡಲಾಗುತ್ತಿದೆ ಇಲ್ಲಿರುವ ತ್ಯಾಜ್ಯ ಘಟಕದಿಂದ ಿಲ್ಲಿಯ ಜನ ತತ್ತರಿಸಿ ಹೋಗಿದ್ದಾರೆ ಈ ಕಚರಾ ಡಿಪೋ ಸ್ಥಳಾಂತರ ಮಾಡುವ ಕುರಿತು ಸರ್ಕಾರದ ಗಮನ ಸೆಳೆಯಲು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಶಾಸಕ ಸಂಜಯ ಪಾಟೀಲ ನಿರ್ಧರಿಸಿ ಸಭಾಪತಿಗಳಿ ಅರ್ಜಿ ಸಲ್ಲಿಸಿದ್ದರು
ಮಂಗಳವಾರ ಬೆಳಿಗ್ಗೆ 11 ಘಂಟೆಗೆ ನಡೆದ ಶೂನ್ಯ ವೇಳೆಯಲ್ಲಿ ಸಂಜಯ ಪಾಟೀಲರ ಪ್ರಶ್ನೆ ಪ್ರಾಸ್ತಾಪವಾಯಿತು ಆದರೆ ಈ ವಿಷಯದ ಕುರಿತು ಮಾತನಾಡಲು ಶಾಸಕ ಸಂಜಯ ಪಾಟೀಲ ಮಾತ್ರ ಸದನದಲ್ಲಿ ಹಾಜರಿರಲಿಲ್ಲ ಹೀಗಾಗಿ ತುರಮರಿ ಗ್ರಾಮದ ಕಸದ ಪ್ರಶ್ನೆ ಕಸದ ಬುಟ್ಟಿಗೆ ಹೋದಂತಾಯಿತು
ಮಧ್ಯಾಹ್ನದ ವೇಳೆಗೆ ಶಾಸಕ ಸಂಜಯ ಪಾಟೀಲ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಮಾದ್ಯಮ ಮಿತ್ರರನ್ನು ಭೇಟಿಯಾದರು ಈ ಸಂಧರ್ಭದಲ್ಲಿ ಶೂನ್ಯ ವೇಳೆಯ ಪ್ರಶ್ನೆಯ ವಿಷಯ ಪ್ರಸ್ತಾಪಿಸಿದ ಸಂಧರ್ಭದಲ್ಲಿ ಇದಕ್ಕೆ ಉತ್ತರಿಸಿದ ಶಾಸಕ ಸಂಜಯ ಪಾಟೀಲ ತಮ್ಮ ಮತಕ್ಷೇತ್ರದಲ್ಲಿ ತುರ್ತಾಗಿ ಕೆಲಸ ಬಂದ ಕಾರಣ ಅಲ್ಲಿಗೆ ಹೋಗಿ ಬರುವಷ್ಟರಲ್ಲಿ ಶೂನ್ಯ ವೇಳೆಯ ಸಮಯ ಮುಗಿದಿತ್ತು ತುರಮರಿ ಕಚರಾ ಡಿಪೋದಿಂದ ಗ್ರಾಮದ ಜನ ತತ್ತರಿಸಿ ಹೋಗಿದ್ದಾರೆ ಮಂತ್ರಿಗಳಿಗೆ ಅಧಿಕಾರಿಗಳಿಗೆ ಒಂದೆರಡು ದಿನ ಇದೇ ಗ್ರಾಮದಲ್ಲಿ ವಾಸ್ತವ್ಯ ಮಾಡುವಂತೆ ಒತ್ತಾಯ ಮಾಡಲಿದ್ದೆ ಆದರೆ ಬ್ಯಾಡ್ ಲಕ್ ನಾನು ಸದನಕ್ಕೆ ಬರುವಷ್ಟರಲ್ಲಿ ಶೂನ್ಯ ವೇಳೆ ಮುಗಿದಿತ್ತು ಎಂದು ಸಂಜಯ ಪಾಟೀಲ ವಿಷಾಧ ವ್ಯಕ್ತ ಪಡಿಸಿದರು