ಬೆಳಗಾವಿ- ರಾಜ್ಯದಲ್ಲಿ ಶಾಧಿ ಭಾಗ್ಯ ಯೋಜನೆಯಲ್ಲಿ ೨೮ ಸಾವಿರ ಅರ್ಜಿಗಳು ಬಾಕಿ ಇವೆ ಅದಕ್ಕಾಗಿ ಕೂಡಲೇ ೧೦೦ ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದ್ದು ಅನುದಾನ ನೀಡುವದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಅಲ್ಪಸಂಖ್ಯಾತ,ಹಿಂದುಳಿದ,ಹಜ್ ಇಲಾಖೆಯ ಕಾರ್ಯದರ್ಶಿ ಮಹ್ಮದ ಮೋಹಸೀನ ತಿಳಿಸಿದ್ದಾರೆ
ಬೆಳಗಾವಿ:ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ, ಹಜ್ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸೀನ್ ಇಲಾಖೆಗಳ ಪ್ರಗತಿ ಪರಿಶೀಲನೆ ಇಂದು ಡಿಸಿ ಕಚೇರಿ ಸಭಾಂಗಣದಲ್ಲಿ ನಡೆಸಿದರು. ಜಿಲ್ಲಾಧಿಕಾರಿ ಎನ್. ಜಯರಾಮ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿ ಎನ್ ಜಯರಾಂ ಮಾತನಾಡಿ ಜಲ್ಲೆಯಲ್ಲಿ ಒಬ್ಬ ಫಲಾನುಭವಿ ಎರಡೆರಡು ಮದುವೆಯಾಗಿ ಎರಡು ಮಕ್ಕಳಾದರೂ ಶಾಧಿ ಭಾಗ್ಯದ ಹಣ ಬಂದಿಲ್ಲ ಎಂದಾಗ ಕಾರ್ಯದರ್ಶಿ ಮೋಹಸೀನ್ ಅದಕ್ಕಾಗಿ ನೂರು ಕೋಟಿ ಅನುದಾನ ಕೇಳಿದ್ದೇವೆ ಇನ್ನು ಮುಂದೆ ಶಾಧಿ ಭಾಗ್ಯ ಯೋಜನೆಗೆ ಬಿಪಿಎಲ್ ಕುಟುಂಬಗಳಿಗೆ ಮಾತ್ರ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು
ರಾಜ್ಯದಲ್ಲಿ ೪೦೦ ಹಾಸ್ಟೇಲ್ ಗಳನ್ನು ನಿರ್ಮಿಸುವ ಯೋಜನೆ ಇದೆ ಅದಕ್ಕೆ ೧೨೦೦ ಕೋಟಿ ಅನುದಾನ ಬೇಕಾಗುತ್ತದೆ ಬೇರೆ ಬೇರೆ ಇಲಾಖೆಗಳ ಸಹಯೋಗದಲ್ಲಿ ಹಾಸ್ಟೇಲ್ ನಿರ್ಮಿಸುವ ಚಿಂತನೆ ನಡೆದಿದೆ ಎಂದರು