ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಅವರ ರಾಜಕೀಯ ನಿವೃತ್ತಿಯ ಘೋಷಣೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿರುವ ವಿಷಯ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವಲಯದಲ್ಲಿ ತಳಮಳವನ್ನುಂಟು ಮಾಡಿದೆ
ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಎಸ್ ಎಂ ಕೃಷ್ಣ ಅವರಿಗೆ ಬೆಂಬಲ ಸೂಚಿಸಿದ್ದು ಪ್ರಸಂಗ ಬಂದರೆ ಅವರೂ ರಾಜಿನಾಮೆ ನೀಡಲು ಸಿದ್ಧವಿರುವದಾಗಿ ಗುಡಗಿದ ಪರಿಣಾಮ ಕಾಂಗ್ರೆಸ್ ಪಕ್ಷದ ನಾಯಕರನ್ನೇ ನಡುಗಿಸಿದೆ
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ನಾಯಕರು ಬಹಿರಂಗವಾಗಿ ಎಸ್ ಎಂ ಕೃಷ್ಣಾ ಅವರಿಗೆ ಬೆಂಬಲ ಸೂಚಿಸಿದ್ದಾರೆ ಪ್ರಕಾಶ ಹುಕ್ಕೇರಿ ಶಾಸಕ ಸೇಠ ಸೇರುದಂತೆ ಹಲವಾರು ಜನ ಕಾಂಗ್ರೆಸ್ ನಾಯಕರು ಎಸ್ ಎಂ ಪರವಾಗಿ ಬ್ಯಾಟಿಂಗ್ ಮಾಡಿದರೆ ಉಳಿದವರು ಹೈಕಮಾಂಡ ಸೂಚನೆಯನ್ನು ಪಾಲಿಸುತ್ತಿದ್ದಾರೆ
ಎಸ್ ಎಂ ರಾಜಿನಾಮೆಯಿಂದಾಗಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಎರಡು ಹೋಳಾಗುವ ಹೊಸ್ತಿಲಲ್ಲಿದೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮೂಡಿರುವ ಹಿನ್ನಲೆಯಲ್ಲಿ ಜಿಲ್ಲೆಯ ಕೆಲವು ಕಾಂಗ್ರೆಸ್ ನಾಯಕರು ಎಸ್ ಎಂ ರಾಜಿನಾಮೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ
ಸಂಸದ ಪ್ರಕಾಶ. ಹುಕ್ಕೇರಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಎಸ್ ಎಂ ಕೃಷ್ಣಾ ನಮ್ಮ ನಾಯಕರು ಅವರನ್ನು ಪಕ್ಷಕ್ಕೆ ಮರಳಿ ತರುವ ಕೆಲಸವನ್ನು ನಾಯಕರು ಮಾಡಬೇಕು ಅವರನ್ನು ಕೆಡೆಗೆನಿಸುವ ಪರಿಸ್ಥಿತಿ ನಿರ್ಮಾಣವಾದರೆ ಅಂತಹ ಪ್ರಸಂಗ ಎದುರಾದರೆ ತಾವೂ ರಾಜಿನಾಮೆ ನೀಡಲು ಸಿದ್ಧ ಎಂದು ಮೀಸೆ ಮಾವ ಅವಾಜ್ ಹಾಕಿದ್ದಾರೆ
ಪರಿಸ್ಥಿತಿ ಹೀಗೆ ಮುಂದುವರೆದರೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಪರ ವಿರೋಧ ನಿಲುವಿನಿಂದಾಗಿ ಪಕ್ಷ ಎರಡು ಹೋಳಾಗಿ ಪಕ್ಷದಲ್ಲಿ ಆಂತರಿಕ ಕಚ್ಚಾಟ ಶುರುವಾಗುವ ಎಲ್ಲ ಲಕ್ಷಣಗಳು ಕಂಡು ಬಂದಿವೆ