ಕಾಗವಾಡ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ ಸ್ಪರ್ದೆ
-ಬೆಳಗಾವಿ-ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಮರಳಿ ಶಿಖಾರಿಪೂರ ಕ್ಷೇತ್ರದಿಂದ ಸ್ಪರ್ದಿಸಲು ನಿರ್ಧರಿಸಿದ್ದು ನಾನೇಕೆ ಮರಳಿ ಕಾಗವಾಡ ಕ್ಷೇತ್ರದಿಂದ ಸ್ಪರ್ದೆ ಮಾಡಬಾರದು ಎನ್ನುವದು ಸಂಸದ ಪ್ರಕಾಶ ಹುಕ್ಜೇರಿ ಅವರ ಪ್ರಶ್ನೆ
ಜಿಲ್ಲಾಧಿಕಾರಿಗಳ ಕಚೇರು ಬಳಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಈ ಬಾರಿ ಕಾಗವಾಡ ಅಥವಾ ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯೆಕ್ತಪಡಿಸಿದರು
ಆದರೆ ಈಗ ಸದ್ಯಕ್ಕೆ ನಾನು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಹಾಗು ತಮ್ಮ ಮಗ ಗಣೇಶ ಸದಲಗಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯ ತಯಾರಿ ನಡೆದಿದ್ದೇವೆ ಕಾಲ ಬಂದಾಗ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಪ್ರಕಾಶ ಹುಕ್ಕೇರಿ ತಿಳಿಸಿದರು
ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದು ವೇದ ಗಂಗಾ ಮತ್ತು ದೂಧ ಗಂಗಾ ನದಿಯಿಂದ ಕೃಷ್ಣಾ ನದಿಗೆ ಹೆಚ್ಚುವರಿಯಾಗಿ ಮೂರು ಟಿ ಎಂಸಿ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಜಲ ಸಂಪನ್ಮೂಲ ಇಲಾಖೆಗೆ ಪತ್ರ ಬರೆದಿರುವದಾಗಿ ಪ್ರಕಾಶ ಹುಕ್ಕೇರಿ ತಿಳಿಸಿದರು
ಮಹಾರಾಷ್ಟ್ರ ದ ಸೊಲ್ಲಾಪುರ ಜತ್ತ ಅಕ್ಕಲಕೋಟ ಪ್ರದೇಶದ ಮೂರು ಬ್ಯಾರೇಜುಗಳಿಗೆ ಅಲಮಟ್ಟಿ ಡ್ಯಾಮ್ ನಿಂದ ಎರಡು ಟಿಎಂಸಿ ನೀರು ಬಿಡಲಾಗಿದೆ ಹೀಗಾಗಿ ಮಹಾರಾಷ್ಟ್ರ ಸರ್ಕಾರ ಈ ಬಾರಿ ಕೃಷ್ಣಾ ನದಿಗೆ ನೀರು ಬಿಡುತ್ತದೆ ಎಂದು ಪ್ರಕಾಶ ಹುಕ್ಕೇರಿ ವಿಶ್ವಾಸ ವ್ಯೆಕ್ತ ಪಡಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ