ಬೆಳಗಾವಿ- ಕಪಿಲೇಶ್ವರ ರಸ್ತೆಯಲ್ಲಿ ರೆಲ್ವೆ ಓವರ್ ಬ್ರಿಡ್ಜ ನಿರ್ಮಿಸುವಲ್ಲಿ ಯಶಸ್ವಿಯಾಗಿರುವ ಸಂಸದ ಸುರೇಶ ಅಂಗಡಿ,ಹಳೆಯ ಪಿಬಿ ರಸ್ತೆಯಲ್ಲಿ ಮತ್ತೊಂದು ಓವರ್ ಬ್ರಿಡ್ಜ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದಾರೆ
ಶನಿವಾರ ಕಾಡಾ ಕಚೇರಿಯಲ್ಲಿ ಪಾಲಿಕೆ, ಹೆಸ್ಕಾಂ ಹಾಗು ಜಲ ಮಂಡಳಿಯ ಅಧಿಕಾರಿಗಳ ಸಭೆ ನಡೆಸಿದ ಅವರು ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ರೆಲ್ವೆ ಮೇಲ್ಸೇತುವೆಯ ಕಾಮಗಾರಿಯನ್ನು ಆರು ತಿಂಗಳಲ್ಲಿ ಮುಗಿಸಬೇಕು ಎಂದು ಸುರೇಶ ಅಂಗಡಿ ಅಧಿಕಾರಿಗಳಿಗೆ ತಾಕೀತು ಮಾಡಿದರು
ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು ಹಳೆಯ ಪಿಬಿ ರಸ್ತೆಯಲ್ಲಿ ಕೆಲವರು ಬ್ರಿಡ್ಜ ಎತ್ತರ ಹೆಚ್ಚಿಸಬೇಕು ಇನ್ನು ಕೆಲವರು ಎತ್ತರ ಕಡಿಮೆ ಮಾಡಬೇಕು ಎಂದು ತಕರಾರು ಮಾಡುತ್ತಿದ್ದಾರೆ ಎಂದು ಗಮನ ಸೆಳೆದಾಗ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮಾಡಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾಮಗಾರಿ ಆರಂಭಿಸಿ ಎಂದು ಸುರೇಶ ಅಂಗಡಿ ಅಧಿಕಾರಿಗಳಿಗೆ ಸಲಹೆ ನೀಡಿದರು
ಹೆಸ್ಕಾಂ ಇಲಾಖೆಯ ಅಧಿಕಾರಿಗಳು ತ್ವರಿತಗತಿಯಲ್ಲಿ ವಿದ್ಯುತ್ ಪೋಲ್ ಗಳನ್ನು ತೆರವು ಮಾಡಬೇಕು,ಜಲ ಮಂಡಳಿಯ ಅಧಿಕಾರಿಗಳು ಬೇಗನೆ ನೀರಿನ ಪೈಪ್ ಗಳನ್ನು ಶಿಪ್ಟ ಮಾಡಬೇಕು ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿರುವ ಅತೀಕ್ರಮಣವನ್ನು ತೆರವು ಮಾಡಿ ಕಾಮಗಾರಿ ನಡೆಸಲು ಅನಕೂಲ ಮಾಡಿ ಕೊಡುವಂತೆ ಆದೇಶಿಸಲಾಯಿತು
ಸಭೆಯಲ್ಲಿ ಶಾಸಕ ಫಿರೋಜ್ ಸೇಠ,ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು