ಬೆಳಗಾವಿ- ಕನ್ನಡ ನೆಲ ಜಲ ಭಾಷೆ ಮತ್ತು ಸಂಸ್ಕೃತಿಗೆ ಧಕ್ಕೆ ಬಂದಾಗ ನಾವೆಲ್ಲರೂ ಪಕ್ಷಾತೀತವಾಗಿ ಕರ್ನಾಟಕ ಸರ್ಕಾರದ ಪರವಾಗಿದ್ದೇವೆ ನಾಡು ನುಡಿಯ ವಿಚಾರದಲ್ಲಿ ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕನ್ನಡ ಮತ್ತು ಮರಾಠಿ ಭಾಷಿಕರಲ್ಲಿ ಕೆಲವರು ಭಾಷಾ ವಿಷಯವನ್ನು ತಮ್ಮ ಬಂಡವಾಳವಾಗಿಸಿಕೊಂಡಿದ್ದಾರೆ ಆದರೆ ತಾವು ಯಾವಾಗಲೂ ನಾಡು ನುಡಿಯ ವಿಚಾರದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸುತ್ತಾ ಬಂದಿದ್ದೇವೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಹೋರಾಟ ಮಾಡಿದರೆ ಅಂತಹ ಹೋರಾಟಕ್ಕೆ ನಮ್ಮ ಬೆಂಬಲ ಇರೋದಿಲ್ಲ ಎಂದು ಸಂಸದ ಸುರೇಶ ಅಂಗಡಿ ತಮ್ಮ ನಿಲುವು ಸ್ಪಷ್ಟ ಪಡಿಸದೇ ಜಾರಿಕೊಂಡರು
ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡುತ್ತಿಲ್ಲ ಹೀಗಾಗಿ ಬಹಳಷ್ಟು ಯೋಜನೆಗಳ ಅನುಷ್ಠಾನಕ್ಕೆ ತೊಂದರೆ ಆಗುತ್ತಿದೆ ಸಂಸದರ ಮಾದರಿ ಗ್ರಾಮ ಯೋಜನೆಯ ವೈಫಲ್ಯಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಸಂಸದ ಅಂಗಡಿ ಆರೋಪಿಸಿದರು
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಯಡಿಯೂರಪ್ಪ ಅವರು ಪರಶಿಷ್ಟ ಜಾತಿ ಮತ್ತು ಪಂಗಡದವರಿಗೆ ದಾಖಲೆ ಪ್ರಮಾಣದಲ್ಲಿ ಅನುದಾನ ನೀಡಿದ್ದಾರೆ ಬೆಳಗಾವಿಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಒಂದು ಕೋಟಿ ಅನುದಾನ ನೀಡಿ ದಲಿತರ ಏಳಿಗೆಗೆ ಯಡಿಯೂರಪ್ಪ ಹಲವಾರು ಯೋಜನೆಗಳನ್ನು ರಾಜ್ಯದ ದಲಿತ ಸಮುದಾಯಕ್ಕೆ ನೀಡಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು
ಇದೇ ಜೂನ. 6 ರಂದು ಬೆಳಗಾವಿಗೆ ಬಿಎಸವೈ ಪ್ರವಾಸ. ಬೆಳಗಾವಿಯ ರಾಮನಗರದ ದಲಿತರ ಮನೆಗೆ ಭೇಟಿ ನೀಡುತ್ತಾರೆ ಬೆಳಗ್ಗೆ ಹನುಮಂತ ಕಾಗಲಕರ ಮನೆಗೆ ಭೇಟಿ.ನೀಡುವ ಅವರು ಮಧ್ಯಾಹ್ನ ಬೈಲಹೊಂಗಲದ ಸಂಗೊಳ್ಳಿ ಗ್ರಾಮದಲ್ಲಿ ದಲಿತರ ಮನೆಗೆ ಭೇಟಿ. ನೀಡುತ್ತಾರೆ
ಸಂಜೆ ಖಾನಾಪುರ ತಾಲೂಕಿಗೆ ಯಡಿಯೂರಪ್ಪ ಭೇಟಿಯಾಗಿ ಬೆಳಗಾವಿಗೆ ಮರಳುತ್ತಾರೆ
.