ಬೆಳಗಾವಿ- ಇಲ್ಲಿಯ ಶಾಸಕರು ಓಟ್ ಬ್ಯಾಂಕ್ ಗೊಸ್ಕರ ಬಾಂಗ್ಲಾ ದೇಶದ ದಿಂದ ಕೆಲವರನ್ನ ತಂದು ಬೆಳಗಾವಿಯಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಶಾಸಕ ಫಿರೋಜ್ ಶೇಠ್ ವಿರುದ್ಧ ಪರೋಕ್ಷವಾಗಿ ಬೆಳಗಾವಿ ಸಂಸದ ಸುರೇಶ ಅಂಗಡಿ ಗಂಭೀರವಾಗಿ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು ಹಿಂದು ಯುವಕ ಪರೇಶ ಮೆಸ್ತ ಕೊಲೆ ಪ್ರಕರಣ ವನ್ನು ಸಿಬಿಐಗೆ ವಹಿಸಲಾಗಿದೆ ಅದು ಸ್ವಾಗತಾರ್ಹವಾಗಿದೆ ಎಂದು ಹೇಳಿದ್ರು. ಇನ್ನ ಕಾಂಗ್ರೆಸ್ ನ ಕೈ ಗೊಂಬೆಯಾಗಿ ಜಿಲ್ಲೆಯ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಅಂಗಡಿ ಗಂಭೀರ ಆರೋಪ ಮಾಡಿದರು
ಸಿಎಂ ಕೈಯಲ್ಲಿ ಕರ್ನಾಟಕದ ಇಂಟಲಿಜೆನ್ಸ್ ಇದೆ ಹೀಗಾಗಿ ಅದರ ಬಗ್ಗೆ ಅನುಮಾನ ಇದೆ ಎಂದ ಅವರು
ಇತ್ತಿಗೆ ಹುಬ್ಬಳ್ಳಿಯ ಗಣೇಶಪೇಟ್ ನಲ್ಲಿ ಪಾಕಿಸ್ತಾನದ ಪಾಕಿಸ್ತಾನದ ಪರ ಘೋಷಣೆ ಕೋಗಿದವರಿಗೆ ರಕ್ಷಣೆ ನೀಡುವ ಅಧಿಕಾರಿಗಳು ಬೆಳಗಾವಿ ಐಜಿ ಕಚೇರಿಯಲ್ಲಿ ಸಿಪಿಐಯಾಗಿ ಕಾರ್ಯನಿರ್ವಹಿಸಲು ಬರುತ್ತಿದ್ದಾರೆ.
ಪಾಕಿಸ್ತಾನದ ಪರ ಘೋಷಣೆ ಕೂಗಿದವರಿಗೆ ಬೆಂಬಲ ನೀಡುವ ಪೊಲಿಸ್ ಅಧಿಕಾರಿಗಳು ಬೆಳೆಗಾವಿ ಜಿಲ್ಲೆಗೆ ಬೇಡ ಎಂದು ಒತ್ತಾಯಿಸಿದರು.
ವರ್ಗಾವಣೆ ರದ್ದು ಮಾಬೇಕು ಎಂದು ಬೆಳಗಾವಿ ಐಜಿಪಿ ಜೊತೆ ಮಾತನಾಡಿದ್ದೆನೆ ಎಂದರು. ಇನ್ನು ದೇಶದಲ್ಲಿ ಕೊಲೆ ದರೊಡೆ ಮಾಡುವ ಪಕ್ಷ ಯಾವುದಾದರೂ ಇದ್ರೆ ಅದು ಕಾಂಗ್ರೆಸ್ ಪಕ್ಷ . ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟರು ತುಂಬಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಎಲ್ಲ ಸಂಸದರು ಕೂಡಿಕೊಂಡು ಕೇಂದ್ರ ಗೃಹ ಸಚಿವರನ್ನ ಬೇಟಿ ಮಾಡಿ ಪರೇಶ ಕೊಲೆ ಪ್ರಕರಣ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಲಾಗುತ್ತದೆ ಎಂದರು.