ಬೆಳಗಾವಿ
ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡಕರಿ ಇದೇ ಮಾರ್ಚ 19 ರಂದು ಬೆಳಗಾವಿಗೆ ಆಗಮಿಸಲಿದ್ದು ಎರಡು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸದ ಸುರೇಶ ಅಂಗಡಿ ಹಲಗಾ-ಖಾನಾಪುರ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಹಾಗೂ ಖಾನಾಪುರ ಮತ್ತು ಗೋವಾ ಗಡಿವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಗೆ ಸಚಿವರು ದಿನಾಂಕ 19 ರಂದು ಸಂಜೆ 5 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ನಗರದಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಲಗಾ-ಖಾನಾಪುರ ಬÉೈಪಾಸ್ ರಸ್ತೆ ನಿರ್ಮಾಣ
ಮಾಡಲಾಗುತ್ತಿದೆ. ಒಟ್ಟು 30 ಕಿಲೋಮೀಟರ್‍ದ ಈ ಚತುಷ್ಪಥ ರಸ್ತೆಗೆ 856 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಅದರಂತೆ ಖಾನಾಪುರ ರಾಮನಗರ ಮಾರ್ಗವಾಗಿ ಗೋವಾ ಗಡಿವರೆಗಿನ 52 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದ್ದು ದ್ವಿಪಥ ರಸ್ತೆಗೆ ಸುಮಾರು 486.78 ಕೋಟಿ ರೂ ವೆಚ್ಚಮಾಡಲಾಗುತ್ತದೆ ಎಂದು ಸುರೇಶ ಅಂಗಡಿ ಹೇಳಿದರು.
ಇದಲ್ಲದೆ ಸವದತ್ತಿ ತಾಲೂಕಿನ ಯರಗಟ್ಟಿ-ಬಾಗಲಕೋಟೆ ರಾಜ್ಯ ಹೆದ್ದಾರಿಯನ್ನು ಹೈದರಾಬಾದ್‍ವರೆಗೆ ವಿಸ್ತರಿಸಿ ಇದನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಗುವದು. ಇದರ ಹೊರತಾಗಿ ಗೋಟೂರ-ಅಥಣಿ ರಾಜ್ಯ ಹೆದ್ದಾರಿಯನ್ನು ವಿಜಯಪುರದವರೆಗೆ ವಿಸ್ತರಿಸಿ ಅದನ್ನು ರಾಷ್ಟ್ರೀ ಯ ಹೆದ್ದಾರಿಯನ್ನಾಗಿ ಮಾಡಲು ಮಂಜೂರಾತಿ ದೊರೆತಿದೆ ಎಂದು ಹೇಳಿದರು.
ನಗರದಲ್ಲಿ ಹಳೆ ಪಿ ಬಿ ರಸ್ತೆಯ ಮೇಲೆ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲು ಸೇತುವೆ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಲಿದೆ. ಇದಲ್ಲದೆ ಗೋಗಟೆ ವೃತ್ತದಿಂದ ಬೋಗಾರ್‍ವೇಸ್‍ದವರೆಗೆ ರಸ್ತೆ ಅಗಲೀಕರಣ ಮಾಡುವ ಯೋಜನೆಯಿದ್ದು ಕ್ಯಾಂಪ್ ಪ್ರದೇಶದವರು ಇದಕ್ಕೆ ಸಹಕಾರ ನೀಡಿದರೆ ಅಗಲೀಕರಣ ಕಾರ್ಯ ಬೇಗ ಆರಂಭವಾಗಲಿದೆ ಎಂದರು.