ಬೆಳಗಾವಿ – ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುವ ಫಸಲ್ ಬಿಮಾ ಯೋಜನೆಯಡಿ ಬೈಲಹೊಂಗಲ್ ತಾಲ್ಲೂಕಿನ ರೈತರಿಗೆ 21 ಕೋಟಿ ರೂ. ಬೆಳೆ ಪರಿಹಾರ ಬಂದಿದೆ. ಒಟ್ಟು ಇಡೀ ಜಿಲ್ಲೆಗೆ 84 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ 64 ಕೋಟಿ 11 ಲಕ್ಷರೂ ವಿತರಣೆ ಮಾಡಲಾಗಿದೆ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದ್ದಾರೆ
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ಜಿಲ್ಲೆಯಲ್ಲಿ ಬೆಳೆ ಹಾನಿಯಾದ ರೈತರಿಗೆ ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಡಿಯಲ್ಲಿ ಬೆಳಗಾವಿ ಜಿಲ್ಲೆಯ ರೈತರಿಗೆ ಕೇಂದ್ರ ಸರ್ಕಾರ ಒಟ್ಟು 84 ಕೋಟಿ ಪರಿಹಾರ ಧನ ಬಿಡುಗಡೆ ಮಾಡಿದೆ ಎಂದು ಸುರೇಶ ಅಂಗಡಿ ತಿಳಿಸಿದರು
ಬೈಹೊಂಗಲ ತಾಲ್ಲೂಕಿನ ಗೊಬ್ಬರ ಸಮಸ್ಯೆಯನ್ನು ನಿವಾರಿಸಲು 900 ಟನ್ ಗೊಬ್ಬರವನ್ನು ಬಿಡುಗಡೆ ಮಾಡಿಸುತ್ತೇನೆ ಎಂದು ಸಂಸದ ಸುರೇಶ ಅಂಗಡಿ ಭರವಸೆ ನೀಡಿದರು
ಅಧಿಕಾರಕ್ಕಾಗಿ ನಂಬಿಕೆಗೆೆ ದ್ರೋಹಿ ಮಾಡುವ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿಕೊಳ್ಳಲಿ ಎಂದು ಸಂಸದ ಸುರೇಶ ಅಂಗಡಿ ಅವರು ಹೇಳಿದರು.
ಅಧಿಕಾರಕ್ಕೆ ಬಂದ ಕೇವಲ ೨೪ ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಸಿಎಂ ಕುಮಾರಸ್ವಾಮಿ ಅವರು, ಇಂದು ರೈತರ ಸಾಲಮನ್ನಾ ಮಾಡುವ ವಿಷಯದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ವಾರ ಕಳೆದರೂ ಸಾಲಮನ್ನಾ ವಿಷಯದ ಬಗ್ಗೆ ಮಾತಾನಾಡುತ್ತಿಲ್ಲ. ಕೇವಲ ಸುಳ್ಳು ಭರಸವೆಗಳನ್ನು ನೀಡಿ ಈಡೇರಿಸದ ದ್ರೋಹಿ ಕಾಂಗ್ರೆಸ್‌ನ ಸಂಸ್ಕೃತಿಗೆ ಸಿಎಂ ಕುಮಾರಸ್ವಾಮಿ ಹಾಗೂ ಅವರ ಪಕ್ಷದ ಮುಖಂಡರು ಹೊಂದಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದ ವ್ಯವಸ್ಥೆ ಇಡೀ ದೇಶದ ಜನರಿಗೆ ಗೊತ್ತಿದೆ. ಬ್ರಿಟಿಷ್ ಕಂಪನಿಯನ್ನು ನಂಬಬಹುದು. ಆದರೆ ಕಾಂಗ್ರೆಸ್ ಪಕ್ಷವನ್ನು ನಂಬಲು ಆಗುವದಿಲ್ಲ. ಈ ಹಿಂದೆ ಅನೇಕರಿಗೆ ಬೆಂಬಲ ನೀಡಿ ವಾಪಸು ಪಡೆದುಕೊಂಡು ಸರ್ಕಾರಗಳನ್ನು ಉರಳಿಸಿರುವ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸಿರುವ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.