ಬೆಳಗಾವಿ-
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮತ್ತು ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಈಗ ಬೀಗರಾಗಿದ್ದು, ಸುರೇಶ ಅಂಗಡಿ ಪುತ್ರಿ ಶೃದ್ಧಾ ಜೊತೆಗೆ ಶೆಟ್ಟರ ಅವರ ಪುತ್ರ ಸಂಕಲ್ಪ ಇಬ್ಬರ ನಿಶ್ಛಿತಾರ್ಥ ಕುಂದಾನಗರಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಶೃದ್ಧಾ ಮತ್ತು ಸಂಕಲ್ಪ ನಿಶ್ಚಿತಾರ್ಥಕ್ಕೆ ಮಾಜಿ ಸಿಎಂ ಬಿಎಸ್‌ವೈ, ಕೇಂದ್ರ ಸಚಿವ ಅನಂತಕುಮಾರ ಸೇರಿ ಗಣ್ಯಾತೀಗಣ್ಯರು ಸಾಕ್ಷಿಯಾದ್ರು.
ಉತ್ಕತರ ರ್ನಾಟಕ ಪ್ರಭಾವಿ ರಾಜಕೀಯ ಮುಖಂಡರು ಈಗ ಬೀಗರಾಗಿದ್ದಾರೆ. ಬೆಳಗಾವಿ ಸಂಸದ ಸುರೇಶ ಅಂಗಡಿ ಮತ್ತು ಹುಬ್ಬಳ್ಳಿ-ಧಾರವಾಡ ಪ್ರಭಾವಿ ರಾಜಕಾರಣಿ ಮತ್ತು ಮಾಜಿ ಸಿಎಂ ಜಗದೀಶ ಶೆಟ್ಟರ ಅವರೇ ಈಗ ಸಂಬಂಧಿಕರಾಗಿದ್ದಾರೆ. ಅಂಗಡಿ ಅವರ ಪುತ್ರಿ ಶೃದ್ಧಾ ಮತ್ತು ಶೆಟ್ಟರ ಪುತ್ರ ಸಂಕಲ್ಪ ಇವರಿಬ್ಬರ ನಿಶ್ಛಿತಾರ್ಥ ಬೆಳಗಾವಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಕುಂದಾನಗರಿಯ ಸಾವಗಾಂವ್‌ದ ಅಂಗಡಿ ಕಾಲೇಜಿಲ್ಲಿ ಈ ನಿಶ್ಚಿತಾರ್ಥ ಸಮಾರಂಭವು ಅದ್ಧೂರಿ ನಡೆಯಿತು. ಲಿಂಗಾಯತ ಧರ್ಮದ ಸಂಪ್ರದಾಯದಂತೆ ಮಧ್ಯಾಹ್ನ 12 ಗಂಟೆಗೆ ಶೃದ್ಧಾ ಮತ್ತು ಸಂಕಲ್ಪ ಪೋಷಕರು, ಗುರು ಹಿರಿಯರು, ಪ್ರಭಾವಿ ರಾಜಕಾರಣಿಗಳು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಪರಸ್ಪರ ರಿಂಗ್ ಹಾಕುವ ಮೂಲಕ ಹೊಸ ಬಂಧನಕ್ಕೆ ಒಳಗಾದರು. ಈ ಇಬ್ಬರು ಜೋಡಿಗಳಿಗೆ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಆರ್ಶಿವಧಿಸಿ, ಶುಭ ಕೋರಿದ್ರು.
ಇನ್ನು ಶೆಟ್ಟರ ಮತ್ತು ಅಂಗಡಿ ಕುಟುಂಬದ ನಿಶ್ಚಿತಾರ್ಥ ಸಮಾರಂಭ ಅಂದ್ರೆ ಅಲ್ಲಿ ಗಣ್ಯರ ದಂಡೆ ಹರಿದು ಬಂದಿತ್ತು. ವಿಧಾನ ಪರಿಷತ್ ಸಭಾಪತಿ ಡಿ.ಎಸ್. ಶಂಕರ ಮೂರ್ತಿ, ಕೇಂದ್ರ ಸಚಿವ ರಮೇಶ ಜಿಗಜಣಗಿ, ಪ್ರಹ್ಲಾದ ಜ್ಯೋಶಿ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ಉಮೇಶ ಕತ್ತಿ, ಲಕ್ಷ್ಮಣ ಸವದಿ, ಸಿ.ಟಿ. ರವಿ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಸೇರಿ ಹಲವಾರು ಗಣ್ಯರು, ಹಿರಿಯ ಸರ್ಕಾರಿ ಅಧಿಕಾರಿಗಳು, ವಿವಿಧ ಮಠಾಧೀಶರು ನವ ವಧು-ವರರಿಗೆ ಆಶಿರ್ವಾದ ಮಾಡಿದ್ರು. ಶೆಟ್ಟರ ಮತ್ತು ಅಂಗಡಿ ಕುಟುಂಬ ಬೀಗರು ಆಗುತ್ತಿರುವುದಕ್ಕೆ ಸಂಸದ ಅಂಗಡಿ ಸಂತಸ ವ್ಯಕ್ತಪಡಿಸಿದರು
ಒಟ್ಟ್ನಲ್ಲಿ ಬಿಜೆಪಿಯ ಪ್ರಭಾವಿ ರಾಜಕೀಯ ಮುಖಂಡರು ನೆಂಟರಾಗಿದ್ದು, ನಿಶ್ಛಿತಾರ್ಥಕ್ಕೆ ಬಂದಿದ್ದವರು ಹೋಳಿಗೆ, ತರಹೇವಾರಿ ಸಿಹಿ ಹಾಗೂ ಉತ್ತರ ಕರ್ನಾಟಕ ಭೋಜನ ಸವಿದ್ರು.