ಬೆಳಗಾವಿ- ಬೆಳಗಾವಿಯ ಸಾಂಬ್ರಾ ವಿಮಾಣ ನಿಲ್ಧಾಣದ ಅಭೀವೃದ್ಧ ಕಾಮಗಾರಿ ಭರದಿಂದ ನಡೆದಿದೆ ಮಾರ್ಚ ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ.ಇನ್ನೆರಡು ದಿನದಲ್ಲಿ ಕಾಮಗಾರಿಯನ್ನು ಪರಶೀಲಿಸಿ ಕಾಮಗಾರಿಯ ವೇಗವನ್ನು ಹೆಚ್ಚಿಸಿ ಕಾಲಮಿತಿಯಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಮುಗಿಸುವಂತೆ ವಿಮಾಣ ಯಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವದು ಎಂದು ಸಂಸದ ಸುರೇಶ ಅಂಗಡಿ ಬೆಳಗಾವಿ ಸುದ್ಧೀ ಡಾಟ್ ಕಾಮ್ ಗೆ ತಿಳಿಸಿದ್ದಾರೆ
ಮಾರ್ಚ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಬೆಳಗಾವಿಯ ಸಂಬ್ರಾ ವಿಮಾಣ ನಿಲ್ಧಾಣದಲ್ಲಿ ಬೋಯಿಂಗ್ ವಿಮಾಣವನ್ನು ಲ್ಯಾಂಡಿಂಗ್ ಮಾಡಿಸುವದು ನಮ್ಮ ಗುರಿಯಾಗಿದೆ ಈ ಕುರಿತು ತಾವು ಮತ್ತು ಪ್ರಭಾಕರ ಕೋರೆ ಅವರು ಕೇಂದ್ರದ ವಿಮಾಣ ಯಾನ ಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇವೆ ಎಂದು ಸುರೇಶ ಅಂಗಡಿ ತಿಳಿಸಿದರು
ವಿದೇಶಗಳಿಗೆ ರಫ್ತು ಮಾಡಬಹುದಾದ ಗುಣಮಟ್ಟದ ತರಕಾರಿ ಹಣ್ಣು ಹಂಪಲ ಮತ್ತು ಹೂ ಗಳು ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯುತ್ತವೆ ಇಲ್ಲಿಯ ರೈತರು ಬ್ರಾಂಡೆಡ್ ಆಗಬೇಕು ಇಲ್ಲಿಯ ರೈತರು ಬೆಳೆದ ತರಕಾರಿ ಹಣ್ಣು ಹಂಪಲ ವಿದೇಶಗಳಿಗೆ ರಫ್ತಾಗಬೇಕು ರೈತರು ಆರ್ಥಿಕವಾಗಿ ಬಲಿಷ್ಠರಾಗಬೇಕು ಎನ್ನುವದು ನಮ್ಮ ಬಹುದಿನಗಳ ಕನಸಾಗಿದ್ದು ಈ ಕನಸು ನನಸಾಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸುರೇಶ ಅಂಗಡಿ ತಿಳಿಸಿದರು
ಬೆಳಗಾವಿಯಲ್ಲಿರುವ ಫೌಂಡ್ರಿ ಉದ್ಯಮ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಬೆಳಗಾವಿಯ ಉದ್ಯಮ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.ಬೆಳಗಾವಿಗೆ ಬೋಯಿಂಗ್ ಲ್ಯಾಂಡಿಂಗ್ ಆಗಲು ಆರಂಭವಾದಲ್ಲಿ ಉದ್ಯಮಿಗಳು ಬೆಳಗಾವಿಗೆ ಲ್ಯಾಂಡಿಂಗ್ ಆಗುತ್ತಾರೆ ಇಲ್ಲಿಯ ಉದ್ಯಮ ಕ್ಷೇತ್ರದ ಬೆಳವಣಿಗೆ ಹೊಂದಿ ಜಿಲ್ಲೆಯ ದುಡಿಯುವ ಕೈಗಳಿಗೆ ಉದ್ಯೋಗ ಸಿಗುತ್ತದೆ ಅದಕ್ಕಾಗಿ ಬೆಳಗಾವಿಯ ಸಾಂಬ್ರಾ ವಿಮಾಣ ನಿಲ್ಧಾಣವನ್ನು ಆದಷ್ಠು ಬೇಗನೆ ಅಭಿವೃದ್ಧಿ ಪಡಿಸುವ ಸಂಕಲ್ಪ ನಮ್ಮದಾಗಿದೆ ಎಂದು ಸುರೇಶ ಅಂಗಡಿ ಬೆಳಗಾವಿ ಸುದ್ಧ5 ಡಾಟ್ ಕಾಂ ಗೆ ತಿಳಿಸಿದ್ದಾರೆ