Breaking News

ನಾಗನೂರು ಶ್ರೀಗಳು ಹಿಂದೂ ಅಲ್ಲ ಅಂದ್ರೆ ಮಠವನ್ನು ಮಸೀದಿಯನ್ನಾಗಿ ಪರಿವರ್ತನೆ ಮಾಡಿಕೊಳ್ಳಲಿ- ಸುರೇಶ ಅಂಗಡಿ

ಬೆಳಗಾವಿ- ಬೆಳಗಾವಿಯ ಲಿಂಗಾಯತ ಸಮಾವೇಶದಲ್ಲಿ ಭಾಗವಹಿಸಿದ ಮಠಾಧೀಶರು ಕಾಂಗ್ರೆಸ್ ಪಕ್ಷದ ಒತ್ತಡ ಮತ್ತು ಆಮೀಷಗಳಿಗೆ ಒಳಗಾಗಿದ್ದು ಬೆಳಗಾವಿಯ ನಾಗನೂರು ಮಠದ ಶ್ರೀಗಳು ಹಿಂದು ಅಲ್ಲ ಅಂತ ಹೇಳಿಕೊಂಡಿದ್ದರೆ ಅವರು ಬೇಕಾದರೆ ಮಠವನ್ನು ಮಸೀದಿಯನ್ನಾಗಿ ಪರಿವರ್ತನೆ ಮಾಡಿಕೊಳ್ಳಲಿ ಎಂದು ಸಂಸದ ಸುರೇಶ ಅಂಗಡಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ

ನಾನು ಮೊದಲು ಭಾರತೀಯ ನಂತರ ನಾನು ಹಿಂದು ನನಗೆ ಲಿಂಗಧಾರಣೆ ಮಾಡಿದವರು ನಾಗನೂರು ಶ್ರೀಗಳು ಮೊನ್ನೆ ನಡೆದ ಲಿಂಗಾಯತರ ಸಮಾವೇಶದಲ್ಲಿ ಶ್ರೀಗಳು ಲಿಂಗಾಯತರು ಹಿಂದುಗಳಲ್ಲ ಎಂದು ಹೇಳಿದ್ದಲ್ಲಿ ಅವರು ಬೇಕಾದರೆ ಮಠವನ್ನು ಮಸೀದಿಯನ್ನಾಗಿ ಪರಿವರ್ತನೆ ಮಾಡಿಕೊಳ್ಳಲಿ ಎಂದು ಸಂಸದ ಸುರೇಶ ಅಂಗಡಿ ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ

ಮಹಾರಾಷ್ಟ್ರ ದಲ್ಲಿ ಏಕ ಮರಾಠಾ ಲಾಕ ಮರಾಠಾ ರಾಜಸ್ಥಾನದಲ್ಲಿ ಚಾಟ್ ಸಮಾಜದ ಹೋರಾಟ ಗುಜರಾತಿನಲ್ಲಿ ಪಟೇಲರ ಹೋರಾಟ, ಕರ್ನಾಟಕ ದಲ್ಲಿ ಲಿಂಗಾಯತರನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುವ ಮೂಲಕ ದೇಶವನ್ನು ಅಭದ್ರ ಸ್ಥಿತಿಗೆ ತರುವ ಕೆಲಸ ಮಾಡುತ್ತಿದೆ ಎಂದು ಸಂಸದ ಸುರೇಶ ಅಂಗಡಿ ಗಂಭೀರ ಆರೋಪ ಮಾಡಿದ್ದಾರೆ

ಬೆಳಗಾವಿಯಲ್ಲಿ ಸುದ್ಧಿಗೋಷ್ಠಿ ನಡೆಸಿದ ಸುರೇಶ ಅಂಗಡಿ ಬೆಳಗಾವಿಯಲ್ಲಿ ನಡೆದ ಲಿಂಗಾಯತರ ಸಮಾವೇಶ ಕಾಂಗ್ರೆಸ್ ಪಕ್ಷದ ಪ್ರಾಯೋಜಕತ್ವದಲ್ಲಿ ನಡೆದ ಸಮಾವೇಶ ಆಗಿದ್ದರಿಂದ ನಾನು ಆ ಸಮಾವೇಶದಲ್ಲಿ ಭಾಗವಹಿಸಿಲ್ಲ ಎಂದು ಹೇಳಿದ್ದಾರೆ

ಜಾತೀಯತೆಯನ್ನು ಹೋಗಲಾಡಿಸಲು ಬಸವಣ್ಣನವರು ಹೋರಾಡಿದರು ಆದರೆ ಕಾಂಗ್ರೆಸ್ ಒಂದು ಬಾರಿ ಧ್ವಜದ ವಿಷಯವನ್ನು ಇನ್ನೊಂದು ಬಾರಿ ಲಿಂಗಾಯತರ ವಿಷಯವನ್ನು ಪ್ರಸ್ತಾಪಿಸಿ ಗೊಂದಲ ಸೃಷ್ಠಿ ಮಾಡುತ್ತಿದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದಲ್ಲಿ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಅಂಗಡಿ ವಾಗ್ದಾಳಿ ನಡೆಸಿದರು

ಬೆಳಗಾವಿಯಲ್ಲಿ ನಡೆದ ಲಿಂಗಾಯತರ ಸಮಾವೇಶದಲ್ಲಿ ಭಾಗವಹಿಸಿದ್ದ ಎಲ್ಲರೂ ಕಾಂಗ್ರೆಸ್ ಟೋಪಿಯನ್ನು ಧರಿಸಿದ್ದರು ಇದೊಂದು ಪಕ್ಕಾ ಕಾಂಗ್ರೆಸ್ ಸಮಾವೇಶ ಆಗಿತ್ತು ಅದಕ್ಕಾಗಿ ನಾನು ಈ ಸಮಾವೇಶದಲ್ಲಿ ಭಾಗವಹಿಸಲಿಲ್ಲ ಎಂದು ಸ್ಪಷ್ಠ ಪಡಿಸಿದ ಅಂಗಡಿ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೋ ವೀರಶೈವರು ಬೇರೇಯೋ ಅಥವಾ ಲಿಂಗಾಯತರು ಬೇರೆಯೋ ಅನ್ನೋದರ ಬಗ್ಗೆ ಪ್ರಭುದ್ಧರು ಸೇರಿಕೊಂಡು ತೀರ್ಮಾಣ ಕೈಗೊಳ್ಳಲಿ ಈಬಗ್ಗೆ ಹೇಳಿಕೆ ನೀಡುವಷ್ಟು ಪ್ರಭುದ್ಧ ನಾನಲ್ಲ ಆದರೆ ಈ ವಿಚಾರದಲ್ಲಿ ಲಿಂಗಾಯತ ಸಂಘಟನೆಗಳು ತಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಿವೆ ಎಂದು ಸಂಸದ ಸುರೇಶ ಅಂಗಡಿ ಆರೋಪ ಮಾಡಿದರು

ರಾಜ್ಯದಲ್ಲಿ ಬರಗಾಲವಿದೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ ಈ ಬಗ್ಗೆ ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷ ಮಾತನಾಡುತ್ತಿಲ್ಲ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ಗದಲವನ್ನುಂಟು ಮಾಡುತ್ತಿದೆ ಎಂದು ಅಂಗಡಿ ಆರೋಪಿಸಿದರು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *