ಬೆಳಗಾವಿ- ಕಾಂಗ್ರೆಸ್ ಯುವರಾಜನಿಗೆ ಬಡತನ ಬಗ್ಗೆ ಗೊತ್ತೊಲ್ಲ. ಆದರೇ ರಾಹುಲ್ ನಿನ್ನೆ ಬರೆದುಕೊಟ್ಟ ಭಾಷಣ ಮಾಡಿದ್ದಾರೆ ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ರಾಹುಲ್ ಭಾಷಣ ಕುರಿತು ಅಪಹಾಸ್ಯ ಮಾಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸುರೇಶ ಅಂಗಡಿ. ರಾಹುಲ್ ಗಾಂಧಿ ಮನೆತನ ರಾಜಕೀಯ ಹಿನ್ನೆಲೆಯನ್ನು ಹೊಂದಿದೆ.ಅವರ ತಾತ,ಅಜ್ಜಿ ತಂದೆ ಎಲ್ಲರೂ ಪ್ರಧಾನಿ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದ ಅವರಿಗೆ ಬಡವರ ನೋವು ಅರ್ಥವಾಗುವದಿಲ್ಲ ಅವರು ಯಾರೋ ಬರೆದುಕೊಟ್ಟ ಭಾಷಣ ಓದಿ ಹೋಗಿದ್ದಾರೆ ಅವರ ಭಾಷಣ ಹಿಟ್ ಆ್ಯಂಡ್ ರನ್ ತರಹ ಎಂದು ಅಂಗಡಿ ಲೇವಡಿ ಮಾಡಿದ್ದಾರೆ
ಕೇಂದ್ರದ ನೋಟ್ ಬ್ಯಾನ್ ನಿರ್ಧಾರನ್ನು ದೇಶದ ಶೇ.೯೩ ರಷ್ಟು ಜನ ಸ್ವಾಗತಿಸಿದ್ದಾರೆ. ಆದರೆ ರಾಹುಲ್ ಗಾಂಧಿ ನೋಟ್ ಬ್ಯಾನ್ ಬಗ್ಗೆ ಟೀಕಿಸಿದ್ದು ಸರಿಯಲ್ಲ. ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ಬರ ಹಿನ್ನೆಲೆ ರಾಜ್ಯ ಸರ್ಕಾರ
ರೈತರ ಸಾಲಾ ಮನ್ನಾ ಕುರಿತು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ರಾಜ್ಯ ಸರ್ಕಾರ ಮೊದಲು ಅರ್ದದಷ್ಟು ರೈತರ ಸಾಲ ಮನ್ನಾ ಮಾಡಲಿ ನಂತರ ಅರ್ದದಷ್ಟು ಸಾಲವನ್ನು ಕೇಂದ್ರ ಮನ್ನಾ ಮಾಡುತ್ತದೆ ಎಂದು ಸುರೇಶ ಅಂಗಡಿ ಸಿಎಂ ಸಿದ್ಧರಾಮಯ್ಯಗೆ ಸವಾಲು ಹಾಕಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೊಟ್ಟಲ್ಲ ಎಂದು ಸಿಎಂ ಸಿದ್ಧರಾಮಯ್ಯ ಸುಳ್ಳು ಆರೋಪ ಮಾಡಿ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಂಗಡಿ ಆರೋಪಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ