ಬೆಳಗಾವಿ- ಅನ್ನ ದಾಸೋಹ ಅಕ್ಷರ ದಾಸೋಹಕ್ಕೆ ಹೆಸರಾಗರುವ ಬೆಳಗಾವಿ ಇಂದು ನಡೆದ ಲಿಂಗಾಯತ ರ್ಯಾಲಿಯಲ್ಲಿ ಮತ್ತೊಮ್ಮೆ ಅನ್ನ ದಾಸೋಹಕ್ಕೆ ಸಾಕ್ಷಿಯಾಗಿದೆ
ಇಂದು ನಡೆದ ಲಿಂಗಾಯತ ರ್ಯಾಲಿಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನ ಬಸವ ಭಕ್ತರು ಭಾಗವಹಿಸಿದ್ದರು ದೂರ ದೂರದ ಜಿಲ್ಲೆಗಳಿಂದ ಬೆಳಗಾವಿಗೆ ಆಗಮಿಸಿದ್ದ ಬಸವ ಭಕ್ತರಿಗೆ ಮೂರು ಸ್ಥಳಗಳಲ್ಲಿ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯೆವಸ್ಥೆ ಮಾಡಲಾಗಿತ್ತು
ಮಹಾರಾಷ್ಟ್ರ ಮತ್ತು ಹುಕ್ಕೇರಿ ಚಿಕ್ಕೋಡಿ ಪ್ರದೇಶದಿಂದ ಬರುವ ಭಕ್ತರಿಗೆ ನಾಗನೂರು ರುದ್ರಾಕ್ಷಿ ಮಠದಲ್ಲಿ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯೆವಸ್ಥೆ ಮಾಡಲಾಗಿತ್ತು ಇದರ ಜೊತೆಗೆ ಬಾಗಲಕೋಟೆ ವಿಜಯಪೂರ ಮತ್ತು ಅಥಣಿ ಭಾಗದಿಂದ ಬರುವ ಭಕ್ತರಿಗೆ ಸಾಂಬ್ರಾ ರಸ್ತೆಯಲ್ಲಿನ ಪೋತದಾರ ಶಾಲೆಯ ಬಳಿ ಉಟದ ವ್ಯೆವಸ್ಥೆಆಡಲಾಗಿತ್ತು
ಹುಬ್ಬಳ್ಳಿ ಧಾರವಾಡ ಗದಗ ಹಾವೇರಿ ದಾಣಗೇರೆ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಿಂದ ಬೆಳಗಾವಿಗೆ ಆಗಮಿಸಿದ ಸುಮಾರು ನಲವತ್ತು ಸಾವಿರಕ್ಕಿಂತಲೂ ಹೆಚ್ಚು ಭಕ್ತರಿಗೆ ಲಕ್ಷ್ಮೀ ಹೆಬ್ಬಾಳಕರ ಅವರು ಉಪಹಾರ ಮತ್ತು ಉಟದ ವ್ಯೆವಸ್ಥೆ ಮಾಡಿದ್ದರು ಲಕ್ಷ್ಮೀ ಪುತ್ರ ಮೃನಾಲ ಹೆಬ್ಬಾಳಕರ ಅವರು ತಮ್ಮ ಕಾರ್ಯಕರ್ತರ ಪಡೆಯೊಂದಿಗೆ ಉಟದ ವ್ಯೆವಸ್ಥೆಯನ್ನು ಅಚ್ವುಕಟ್ಟಾಗಿ ನಿಭಾಯಿಸಿ ಎಲ್ಲರ ಗಮನ ಸೆಳೆದರು