ಬೆಳಗಾವಿ-ವಾರದ ಹಿಂದೆ ಮಹಾಂತೇಶ್ ನಗರದ ನಿವಾಸಿ ಸಂತೋಷ ಪದ್ಮಣ್ಣವರ ಅವರ ಸಾವು ಸಹಜ ಸಾವು ಎಂದು ಎಲ್ಲರು ತಿಳಿದುಕೊಂಡಿದ್ದರು, ಆದ್ರೆ ವಾರದ ನಂತರ ಮೃತ ಸಂತೋಷ ಪದ್ಮಣ್ಣವರ ಅವರ ಮಗಳು ಇದು ಸಹಜ ಸಾವು ಅಲ್ಲ ಇದೊಂದು ಮರ್ಡರ್ ಎಂದು ಪೋಲೀಸರಿಗೆ ದೂರು ನೀಡಿದ ಬಳಿಕ,ಅಂತ್ಯಕ್ರಿಯೆ ಮಾಡಿದ್ದ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಸದಾಶಿವ ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಗಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಸಂತೋಷ ಪದ್ಮಣ್ಣವರ್ (47) ಉದ್ಯಮಿ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ.ಬೆಳಗಾವಿ ಎಸಿ ಶ್ರವಣ್ ಕುಮಾರ್, ಎಫ್ ಎಸ್ ಎಲ್ ತಂಡ ಹಾಗೂ ಪೊಲೀಸರ ಸಮ್ಮುಖದಲ್ಲಿ ಶವ ಪರೀಕ್ಷೆ ನಡೆಸಿದ್ದು,ಸ್ಮಶಾನದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಅಕ್ಟೋಬರ್ 9ರಂದು ಬೆಳಗ್ಗೆ ಮನೆಯಲ್ಲಿ ಮೃತಪಟ್ಟಿದ್ದ ಸಂತೋಷ.ಸಂತೋಷ ಸಾವಿನ ಬಗ್ಗೆ ಮಗಳು ಸಂಜನಾಗೆ ಅನುಮಾನ ಬಂದಿತ್ತು,ಮಾಳ ಮಾರುತಿ ಪೊಲೀಸರಿಗೆ,
ತಾಯಿ ಉಮಾ ಮೇಲೆ ಮಗಳು ಕೊಲೆ ಆರೋಪ ಮಾಡಿದ ಹಿನ್ನಲೆಯಲ್ಲಿಮಗಳ ಆರೋಪದ ಮೇಲೆ ಮನೆಗೆ ಬಂದು ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರು ಈಗ ಮಗಳ ದೂರನ್ನು ಆಧರಿಸಿ ತನಿಖೆ ಶುರು ಮಾಡಿದ್ದಾರೆ.
ಸಂತೋಷ ಪದ್ಮಣ್ಣವರ ಮೃತಪಟ್ಟ ದಿನ,
ಈ ವೇಳೆ ಇಬ್ಬರು ಅಪರಿಚಿತರು ಮನೆಯಿಂದ ಹೊರ ಹೋಗುವ ದೃಶ್ಯ ಸೆರೆಯಾಗಿತ್ತು.ಸದ್ಯ ತಾಯಿ ಉಮಾಳನ್ನ ಮನೆಯಲ್ಲಿ ವಿಚಾರಣೆ ನಡೆಸುತ್ತಿರುವ ಪೊಲೀಸರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.
ಬೆಳಗಾವಿಯಲ್ಲಿ ಪುತ್ರಿಯಿಂದಲೇ ತಂದೆ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ತಾಯಿ ವಿರುದ್ಧವೇ ಪುತ್ರಿ ದೂರು ದಾಖಲಿಸಿದ್ದಾಳೆ.ಅಕ್ಟೋಬರ್ 9 ರಂದು ತಂದೆ ಸಂತೋಷ ಪದ್ಮಣ್ಣನವರ ಸಾವು.ಹೃದಯಾಘಾತದಿಂದ ಸಂತೋಷ ಸಾವು ಎಂದು ಅಂತ್ಯಕ್ರಿಯೆ ಮಾಡಿದ್ದ ಕುಟುಂಬಸ್ಥರು.ಬೆಳಗಾವಿಯ ಮಹಾಂತೇಶ ನಗರದ ನಿವಾಸಿ ಸಂತೋಷ ಪದ್ಮಣ್ಣನ್ನವರ.ಸದಾಶಿವ ನಗರದ ರುದ್ರಭೂಮಿಯಲ್ಲಿ ಅಕ್ಟೋಬರ್ 10 ರಂದು ಅಂತ್ಯಕ್ರಿಯೆ ನಡೆಸಲಾಗಿತ್ತುಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಪುತ್ರಿ ಸಂಜನಾಗೆ ತಂದೆ ಸಾವಿನ ಬಗ್ಗೆ ಅನುಮಾನ ಬಂದಿತ್ತು.ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಗಳ ಪರಿಶೀಲನೆಗೆ ಪುತ್ರಿ ಸಂಜನಾ ಮುಂದಾಗಿದ್ದಳು.ಈ ವೇಳೆ
ಪುತ್ರಿಗೆ ಗದರಿಸಿ ಸ್ನಾನ ಮಾಡುವಂತೆ ತಾಯಿ ಉಮಾ ಸೂಚನೆ ನೀಡಿದ್ದಳು.ಸ್ನಾನ ಮಾಡಿ ವಾಪಸ್ ಬಂದು ನೋಡುವುದರಲ್ಲಿ ಸಿಸಿಟಿವಿ ದೃಶ್ಯಗಳು ಡಿಲೀಟ್ ಆಗಿದ್ದವು.ಇದರಿಂದಅನುಮಾನಗೊಂಡು ತಾಯಿ ವಿರುದ್ಧವೇ ಮಗಳು ಸಂಜನಾ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಂದೆಯ ಕೊಲೆಯಾಗಿದೆ ಎಂದು ದೂರು ಕೊಟ್ಟ ಹಿನ್ನಲೆಯಲ್ಲಿ ಮಾಳ ಮಾರುತಿ ಪೋಲೀಸರು ದೂರು ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.
ಅಕ್ಕ ಪಕ್ಕದ ಮನೆಯ ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಅಪರಿಚಿತರು ಮನೆ ಪ್ರವೇಶಿಸಿದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ,ಇದರ ಆಧಾರದ ಮೇಲೆ ನಿನ್ನೆ ರಾತ್ರಿ ಪತ್ನಿ ಉಮಾಳನ್ನ ತೀವ್ರ ವಿಚಾರಣೆಗೆ ಒಳ ಪಡೆಸಿರೋ ಪೊಲೀಸರುಸಂತೋಷ ಪದ್ಮಣ್ಣವರ ಮತ್ತು ಪತ್ನಿ ಮಧ್ಯೆ ಕೌಟುಂಬಿಕ ಕಲಹದ ವಿಚಾರವನ್ನು ತಿಳಿದುಕೊಂಡಿದ್ದಾರೆ.
ಸಂತೋಷ ಪದ್ಮಣ್ಣವರ ನೇತ್ರ ದಾನ ಮಾಡಿದ್ದರು.
ಅಸಹಜ ಸಾವು ಎಂದು ಸಾಭೀತು ಪಡಿಸಲು ಪತ್ನಿ ಊಮಾ ಲೇಕ್ಯುವ್ ಆಸ್ಪತ್ರೆಯಲ್ಲಿ ನೇತ್ರದಾನದ ಪ್ರತಿಕ್ರಿಯೆ ಮುಗಿಸಿ ನಂತರ ಪತಿ ಸಂತೋಷ ಪದ್ಮಣ್ಣವರ ಅಂತ್ಯಕ್ರಿಯೆ ಮಾಡಿಸಿದ್ದಳು.ಕೋರ್ಟ್ ಅನುಮತಿ ಪಡೆದು ಪೋಲೀಸರು ಇಂದು ಮೃತದೇಹವನ್ನ ಸ್ಮಶಾನದಿಂದ ಹೊರಗೆ ತೆಗೆದು ಶವ ಪರೀಕ್ಷೆ ಮಾಡಿದ್ದಾರೆ.
ಈ ಕುರಿತು ಮಾದ್ಯಮಗಳ ಜೊತೆ ಮಾತನಾಡಿ ಮಾಹಿತಿ ನೀಡಿದ ನಗರ ಪೋಲೀಸ್ ಆಯುಕ್ತರು,ಮಗಳು ತಾಯಿಯ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ಕೊಟ್ಟಿದ್ದರಿಂದ ತನಿಖೆ ಶುರು ಮಾಡಿದ್ದೇವೆ. ಮನೆಯ ಕೆಲಸದವರು ಇಬ್ಬರು,ಹಾಗೂ ಹೊರಗಿನ ಇಬ್ಬರು ಶಂಕಿತರನ್ನು ವಿಚಾರಣೆ ಮಾಡುತ್ತಿದ್ದೇವೆ. ಶವಪರೀಕ್ಷೆಯ ರಿಪೋರ್ಟ್ ಬಂದ ನಂತರ ಮುಂದಿನ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ