ಬೆಳಗಾವಿ- ರಾತ್ರಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಮೆರವಣಿಗೆ ಮುಗಿಸಿ ಬೆಳಗಿನ ಜಾವ ಮನಗೆ ಬಂದಿದ್ದ ಯುವಕನನ್ನು ಸೋದರ ಸಂಬಂದಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಶಹಾಪೂರಿನ ಹೊಸೂರ ಬಸವನಗಲ್ಲಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮಿಲಿಂದ್ ಚಂದ್ರಕಾಂತ ಜಾಧವ (28) ಹತ್ಯೆಯಾದ ದುರ್ದೈವಿಯಾಗಿದ್ದು ಈತನ ಕಾಕನ ಮಗ ಅಭಿಜೀತ್ ಜಾಧವ ಎಂಬಾತನೇ ಮಿಲಿಂದ್ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದ್ದು,ಪೋಲೀಸರು ಆರೋಪಿ ಅಭಿಜೀತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮರ್ಡರ್ ಗೆ ಆಸ್ತಿವಿವಾದವೇ ಕಾರಣ ಎಂದು ಹೇಳಲಾಗಿದ್ದು, ಬೇಕರಿ ಅಂಗಡಿಯ ಬಾಡಿಗೆ ಪಡೆಯುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿತ್ತು ಎಂದು ಹೇಳಲಾಗಿದೆ.ಶಹಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ