ಬೆಳಗಾವಿ: ಅನರ್ಹ ಶಾಸಕರು ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ವಿಚಾರದಲ್ಲಿ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವ ಮಾಜಿ ಸ್ಪೀಕರ್ ರಮೇಶ ಕುಮಾರ ಮಾನಸಿಕ ಅಸ್ವಸ್ಥ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಉಪಚುನಾವಣೆಯಲ್ಲಿ ಅನರ್ಹರು ಸೋಲಬೇಕು. ಈ ಮೂಲಕ ಸಂವಿಧಾನದ ಗೆಲುವು ಆಗಬೇಕು ಎಂಬ ಮಾಜಿ ಸ್ಪೀಕರ್ ರಮೇಶ ಕುಮಾರ್ ಹೇಳಿಕೆಗೆ ಗೋಕಾಕಿನಲ್ಲಿ ಪ್ರತಿಕ್ರಿಯಿಸಿದ ಅವರು, ರಮೇಶ ಕುಮಾರ್ ಅವರು ಮಾನಸಿಕ ಅಸ್ವಸ್ಥ ರೀತಿ ಮಾತನಾಡುತ್ತಿದ್ದಾರೆ. ರಮೇಶ ಕುಮಾರ್ ಎರಡು ನಾಲಿಗೆ, ಎರಡು ನಡೆ ಇರೋ ವ್ಯಕ್ತಿ. ಇವರನ್ನು ರಾಜ್ಯದ ಜನರು ನಂಬಲು ಸಾಧ್ಯವಿಲ್ಲ. ರಮೇಶ ಕುಮಾರ್ ಹೇಳಿಕೆಗಳು ಬಾಲಿಷ ರೀತಿಯಿಂಂದ ಕೂಡಿವೆ. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಶಾಸಕರ ರಾಜೀನಾಮೆ ಅಂಗೀಕಾರ ಮಾಡಬೇಕು ಹೇಳಿದೆ ಎಂದು ತಿರುಗೇಟು ನೀಡಿದ್ದಾರೆ.
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕುತಂತ್ರ ರಾಜಕಾರಣ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ. ರಾಜ್ಯದಲ್ಲಿ ಸ್ಥಿರ, ಅಭಿವೃದ್ಧಿ ಪರ ಸರ್ಕಾರ ರಚನೆಗೆ ಈ ಉಪಚುನಾವಣೆ ನಡೆಯುತ್ತಿದೆ ಎಂದರು.
ಅನರ್ಹ ಶಾಸಕರು ತಾಯಿಗಂಡರು ಎಂಬ ರಮೇಶ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೆಟ್ಟ ಪದ ಬಳಕೆ ಅವರ ಯೋಗ್ಯತೆ ತೋರಿಸುತ್ತದೆ.ಅವರು ಜನಪ್ರತಿನಿಧಿ ಆಗೋಕೆ ನಾಲಾಯಕ್. ಸ್ಪೀಕರ್ ಆಗಿದ್ದಾಗ ರಮೇಶ ಕುಮಾರ ಯಾರ ಪರ ಚಮಚಾಗಿರಿ ಮಾಡಿದ್ದಾರೆ ಎಂಬುದು ಗೊತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ಅವರು ಯಾರ ಚಮಚಾ ಎಂಬುದು ಗೊತ್ತಿದೆ. ರಮೇಶ ಕುಮಾರ ಮೊದಲು ಸರಿಯಾದ ಕನ್ನಡ ಕಲಿತುಕೊಳ್ಳಲಿ ಎಂದು ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಸಲಹೆ ನೀಡಿದರು