Breaking News

ಎಲ್ಲರನ್ನೂ ಪ್ರೀತಿಸಿದ, ಎಲ್ಲರ ಪ್ರೀತಿಗೆ ಪಾತ್ರರಾದ ಕೆ.ಎಸ್.ನಿಸಾರ್‌ ಅಹ್ಮದ್‌

ಎಲ್ಲರನ್ನೂ ಪ್ರೀತಿಸಿದ, ಎಲ್ಲರ ಪ್ರೀತಿಗೆ ಪಾತ್ರರಾದ ಕೆ.ಎಸ್.ನಿಸಾರ್‌ ಅಹ್ಮದ್‌

ಒಬ್ಬ ಕವಿ ಅಥವಾ ಬರಹಗಾರರಿಗೆ ಭಾವ, ಯೋಚನೆ, ಪಾರದರ್ಶಕತ್ವಕ್ಕೆ ಕನ್ನಡದಲ್ಲಿ ಅನೇಕ ಕವಿ ಬರಹಗಾರರು ಆಗಿ ಹೋಗಿದ್ದರೆ, ಇಂದು ನಮ್ಮ ಮಧ್ಯ ಅಂಥ ಹಿರಿಯರಲ್ಲಿ ಕೆಲವುಜನ ಮಾತ್ರ ಬದುಕಿದ್ದಾರೆ. ಅಂಥ ಕೆಲವರಲ್ಲಿ ನಿತ್ಯೋತ್ಸವದ ಹಾಡು ಹೇಳಿ ಬದುಕಿದ ಕೆ.ಎಸ್.‌ ನಿಸಾರ್‌ ಅಹ್ಮದ್ ಅವರು ತಮ್ಮ ಅಮೂಲ್ಯವಾದ ಸಾರಸ್ವತ ಶ್ರೀಮಂತಿಕೆಯನ್ನು ಕನ್ನಡತ್ವಕ್ಕೆ ನೀಡಿ ಶಾರೀರಕವಾಗಿ ಮರೆಯಾಗಿರುವುದು ತುಂಬಾ ನೋವಿನ ಸಂಗತಿ.

ಒಬ್ಬ ಬರಹಗಾರನಿಗೆ ಪಾಂಡಿತ್ಯ ಪ್ರದರ್ಶನದ ಬರವಣಿಗೆ ಮಾತ್ರ ಇದ್ದರೆ ಸಾಲದು. ಬರವಣಿಗೆಗೆ ಮೂಲ ದೃವ್ಯವಾದ ಮುನುಷ್ಯತ್ವದ ವ್ಯಕ್ತಿತ್ವ ಮುಖ್ಯ. ವ್ಯಕ್ತಿತ್ವದ ಸಡಲಿಕೆ ಇದ್ದರೆ ಬರವಣಿಗೆಯ ಸಡಲಿಕೆ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ಸಮಾಜವನ್ನು ಎಚ್ಚರಿಸಬಲ್ಲ, ಸಮುದಾಯವನ್ನು ಕೈಹಿಡಿಯಬಲ್ಲ, ಆದರ್ಶ ಸಮಾಜಕ್ಕೆ ಮಾದರಿಯಾಗಬಲ್ಲ ವ್ಯಕ್ತಿತ್ವ ಕವಿ- ಬರಹಗಾರನದ್ದು. ಜಾಗತಿಕ ಸಾಹಿತ್ಯದಲ್ಲಿ ಅದರಲ್ಲೂ ವಿಶೇಷವಾಗಿ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಇಂಥ ವ್ಯಕ್ತಿತ್ವಗಳ ದೊಡ್ಡದಾದ ಸಾಲವೇ ಇದೆ. ಇಂದು ಈ ಸಾಲು ಕರಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಾಲಿನ ಮೊದಲ ಪಂಕ್ತಿಯಲ್ಲಿ ಕಂಡುಬರವವರು ನಿತ್ಯೋತ್ಸವದ ಕವಿ ಕೆ.ಎಸ್.‌ ನಿಸಾರ್‌ ಅಹ್ಮದ್‌ ಅವರು. ಹಾಗಂತ ಹೊಂದಾಣಿಕೆ ಸ್ವಭಾವದವರಾಗಿರಲಿಲ್ಲ ಎನ್ನುವುದಕ್ಕೆ ʼಕುರಿಗಳು ಸಾರ್‌ ಕುರಿಗಳುʼ ಕವಿತೆ ಮೊದಲಗೊಂಡು ಅನೇಕ ಬರಹ ನಿದರ್ಶನ.

ಕವಿ ಬರಹಗಾರ ಬದುಕನ್ನು ಪ್ರೀತಿಸುವ ಸಂತನಿದ್ದಂತೆ. ಈ ಸಂತ ಮಾತ್ರ ಎಲ್ಲರ ಪ್ರೀತಿಗೆ ಪಾತ್ರರಾಗಿ ಎಲ್ಲರನ್ನೂ ಪ್ರೀತಿಸುವ ಸ್ವಭಾವ ಹೊಂದಿರುತ್ತಾನೆ. ಮನುಷ್ಯ ನಿರ್ಮಿತ ಗೋಡೆಗಳನ್ನು ಒಡೆಯಲು ಮುಂದಾಗಿರವ ಅನೇಕರಲ್ಲಿ ಗೋಡೆಗೆ ಅಂಟಿಕೊಂಡವರು, ಗೋಡೆಯ ಮೇಲೆ ನಿಂತ ಕೇಕೆ ಹಾಕುವವರು ಇರುವುದನ್ನು ತಳ್ಳಿಹಾಕುವಂತಿಲ್ಲ. ಈ ಹೇಳಿಕೆ ಕೆಲವರಿಗೆ ವ್ಯಂಗ್ಯ ಅನಿಸಿದರೂ ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ವಿ‍ಶ್ವಾಸದಿಂದ ಹೊರಗುಳಿಯುತ್ತಿರುವ ಬರಹಗಾರರ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ ಈ ಹೇಳಿಕೆ ಅನಿವಾರ್ಯತೆ ಪಡೆದುಕೊಂಡಿದೆ. ಕನ್ನಡತ್ವದ ಬಗ್ಗೆ ಅಪಾರ ಮಮಕಾರ ಹೊಂದಿದ್ದ ಕೆ.ಎಸ್.‌ ನಿಸಾರ್‌ ಅಹ್ಮದ್‌ ಅವರು ಈ ಗೋಡೆಗಳನ್ನು ದಾಟಿದವರು ಎನ್ನುವುದಕ್ಕೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣ ಹಾಗೂ ʼರಂಗೋಲಿ ಮತ್ತು ಮಗುʼ ದಂತಹ ಕವಿತೆಗಳು ಸಾಕ್ಷಿಕರಿಸುತ್ತವೆ. ಈ ಬಗೆಯ ಇರುವಿಕೆ ಮತ್ತು ಬರವಣಿಗೆಯಿಂದ ಅವರು ಎಲ್ಲರನ್ನೂ ಪ್ರೀತಿಸಿ, ಎಲ್ಲರ ಪ್ರೀತಿಗೆ ಪಾತ್ರರಾದವರು.

ಇಂಥ ಒಬ್ಬ ಅಪರೂಪ ವ್ಯಕ್ತಿತ್ವದ ಕವಿ ನಮ್ಮ ಮಧ್ಯ ಭೌತಿಕವಾಗಿ ಇರದೇ ಇರುವುದು ಸಾಂಸ್ಕೃತಿಕ ಶ್ರೀಮಂತಿಕೆಯ ಕೊರತೆ ಕಾಡುತ್ತದೆ.

– ಕೆ. ಎನ್.‌ ದೊಡ್ಡಮನಿ

****

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *