ಓಖಿ ಎಫೆಕ್ಟ ಬೆಳಗಾವಿಯಲ್ಲಿ ಶೀತಗಾಳಿ..ಗೋವಾದಲ್ಲಿ ಬಿರುಗಾಳಿ…!

ಬೆಳಗಾವಿ-ಸಮುದ್ರ ತೀರದಲ್ಲಿ ಚಂಡಮಾರುತ ಓಖಿ ಅಬ್ಬರ ಜೋರಾಗಿದೆ ಸುಮಾರು ,70 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು ಬೆಳಗಾವಿ ನಗರಕ್ಕೂ ಇದರ ಪರಿಣಾಮ ತಟ್ಟಿದೆ

ಮುಂಭೈ ಗೋವಾ, ಮಂಗಳೂರು ಸಮುದ್ರ ತೀರದಲ್ಲಿ ಓಖಿ ಚಂಡಮಾರುತದ ಅಬ್ಬರ ಜೋರಾಗಿದೆ ಸಮುದ್ರ ತೀರದಲ್ಲಿ ಹೈ ಅಲರ್ಟ ಘೋಷಿಸಲಾಗಿದ್ದು ಮೀನು ಹಿಡಿಯುವ ಹಡಗ ಗಳು ದೋಣಿಗಳು ಸಮುದ್ರಕ್ಕೆ ಇಳಿಯದಂತೆ ಲಂಗರ್ ಹಾಕಲಾಗಿದೆ ಚಂಡಮಾರುತ ಗೋವಾ ಕಡಲ ತೀರ ದಲ್ಲಿಯೂ ಬೀಸುತ್ತಿರುವದರಿಂದ ಇಲ್ಲಿಯ ಬೀಚ್ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ

ಗೋವಾ ಬೆಳಗಾವಿ ನಗರದಿಂದ ಕೇವಲ ನೂರು ಕಿ ಮೀ ಅಂತರದಲ್ಲಿ ಇರುವದರಿಂದ ಅದರ ಎಫೆಕ್ಟ ಬೆಳಗಾವಿ ನಗರದ ಮೇಲೇಯೂ ಬಿದ್ದಿದ್ದು ನಗರದಲ್ಲಿ ಬೆಳೆಗ್ಗೆಯಿಂದ ಸೂರ್ಯ ಮುಖ ತೋರಿಸಿಲ್ಲ ಮುಸುಕಿನ ವಾತಾವರಣದಲ್ಲಿ ಶೀತಗಾಳಿ ಬೀಸುತ್ತಿದೆ ನಗರದಲ್ಲಿ ಹನಿ ಮಳೆ ಉದುರುತ್ತಿದ್ದು ಸುಂಟರಗಾಳಿ ಬೀಸುತ್ತಿದೆ

ಬೆಳಗಾವಿಯಲ್ಲಿ ಇಂದು ಬೆಳಿಗ್ಗೆಯಿಂದ ಕ್ಲಾಯಿಮೇಟ್ ಚೇಂಜ್ ಆಗಿ ಸಾರ್ವಜನಿಕರ ಮೂಡ್ ಖರಾಬ್ ಆಗಿದೆ ಆಗಾಗ ಬೀಸುತ್ತಿರುವ ಬಿರುಗಾಳಿಯ ಭೂತಕ್ಕೆ ಬೆದರಿ ಜನ ಮನೆ ಬಾಗಿಲ ಜಡಿದು ಮನೆಯಲ್ಲೇ ಬೆಚ್ಚಗಿದ್ದಾರೆ
ವಯಸ್ಕರರು ಚಂಡಮಾರುತ ಎಲ್ಲಿ ಬಂದೈತಿ ಇಲ್ಲಿ ಹಿಂಗ್ಯಾಕ ಆಗೈತಿ ಥಂಡ್ಯಾಗ ಮಳಿ ಯಾಕ ಬರಾತೈತಿ ಅಂತ ಚಿಂತಾಗ್ರಸ್ಥರಾಗಿದ್ದಾರೆ
ಓಖಿ ಚಂಡ ಮಾರುತ ಕಡಲ ಕಿನಾರೆಯಲ್ಲಿ ಅಬ್ಬರಿಸಿ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಬೆಳಗಾವಿ ನಗರದ ಮೂಡ್ ಚೇಂಜ್ ಮಾಡಿದೆ

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *