ಬೆಳಗಾವಿ-
ಶ್ರೀಮಂತ ಪಾಟೀಲ ರಾಜಕಾರಣಕ್ಕ ಬರುವುದಕ್ಕೆ ಮೊದಲು. ರೈತರ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿವರು
ಶ್ರೀಮಂತ ಪಾಟೀಲ ರು ತಮ್ಮ ಸಕ್ಕರೆ ಕಾರ್ಖಾನೆ ವತಿಯಿಂದ ನೂರಾರು ರೈತರ ಅನುಕೂಲ ಆಗುವ ನಿಟ್ಟಿನಲ್ಲಿ ಸ್ವಂತ ಖರ್ಚಿನಲ್ಲಿ ಏತ ನೀರಾವರಿ ಯೋಜನೆ ರಸ್ತೆ ಸೇರಿದಂತೆ ಅಭಿವೃದ್ಧಿ ಮಾಡಿ ಕೊಟ್ಟಿದ್ದಾರೆ ಎಂದು ಕುಡಚಿ ಶಾಸಕ ಪಿ ರಾಜೀವ ಹೇಳಿದರು
ರಾಜಕಾರಣಕ್ಕೆ ಅವರು ಒಂದ ಕನಸು ಇಟ್ಟುಕೊಂಡು ಬಂದಿದ್ದು.ಜನರಿಗೆ ಒಳ್ಳೆಯ ಅನುಕೂಲ ಆಗುವ ನಿಟ್ಟಿನಲ್ಲಿ ಕನಸು ಇಟ್ಟುಕೊಂಡು ಬಂದಿದ್ದಾರೆ. ತಮ್ಮ ಸ್ವಾರ್ಥ ಕ್ಕೆ ಬಂದಿಲ್ಲ
ಅವರು ಪ್ರತಿವರ್ಷ ನಾಲ್ಕು – ಐದು ಕೋಟಿ ದಾನ ಕೊಡ್ತಾರೆ ಎಂದರು
ಯಡಿಯೂರಪ್ಪ ರನ್ನು ಮತ್ತು ಬಿಜೆಪಿ ಪಕ್ಷವನ್ನು ಒಪ್ಪಿಕೊಂಡಿದ್ದು ಒಂದೆ ಕಾರಣ. ಏತ ನೀರಾವರಿ , ರಸ್ತೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗಾಗಿ, ಬೇಡಿಕೆಗಾಗಿ ಪಕ್ಷ ಸೇರಿದ್ದಾರೆ
ಶ್ರೀಮಂತ ಪಾಟೀಲ್ ರ ಗೆಲವು ಕನಿಷ್ಟ40 ಸಾವಿರಕ್ಕು ಅಧಿಕ ಅಂತರದಿಂದ ಗೆಲವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯೆಕ್ತಪಡಿಸಿದರು
ಅನರ್ಹ ಶಾಸಕರು ಕುರಿ ಕೋಳಿ ಯಂತೆ ಮಾರಾಟ ಆಗಿದ್ದಾರೆ ಅಂತಾ ಸಿದ್ದರಾಮಯ್ಯ ಹೇಳಿಕೆಗೆ ಪಿ ರಾಜು ತಿರುಗೇಟು ನೀಡಿದ್ರು
ಮಾಜಿ ಸಿಎಂ ಕುಮಾರಸ್ವಾಮಿ ಎರಡು ಲಕ್ಷ ಕೋಟಿ ಬಜೆಟ್ ನಾಲ್ಕು ಜಿಲ್ಲೆಗೆ ಸೀಮಿತ ಮಾಡಿದ್ರಲ್ಲ…
ಇವರನ್ನು ಲೂಟಿಕೋರರು ಅನ್ನಬಹುದಾ?
ಇಂತಹ ಲೂಟಿ ಕೋರರ ವಿರುದ್ಧ ಸಿಡಿದೆದ್ದು ಅವರನ್ನು ಬಿಟ್ಟು ಬಂದಿದ್ದಾರೆ.
ನಿಜವಾದ ಸ್ವಾಭಿಮಾನಿ ಶಾಸಕರು ಅಂದ್ರೆ ಈ ೧೭ ಶಾಸಕರು.
ಕ್ಷೇತ್ರದ ಅಭಿವೃದ್ಧಿ ಗಾಗಿ ಪಕ್ಷದ ಬಿಟ್ಟು ಬಂದಿದ್ದಾರೆ.
ಹಿಂದಿನ ಲೂಟಿ ಕೋರರ ಸರ್ಕಾರದ ನಡವಳಿಕೆಯಿಂದ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ. ಇಡಿ ಕರ್ನಾಟಕ ಅವರನ್ನು ಗೌರವಿಸುತ್ತದೆ
ಮಾಜಿ ಸ್ಪೀಕರ್ ರಮೇಶ ಕುಮಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಡಚಿ ಶಾಸಕ ಪಿ ರಾಜೀವ್.
ಹಿಂದಿನ ಸರ್ಕಾರದಲ್ಲಿ ಶಾಸಕರು ಸಿಎಂ ಭೇಟಿ ಮಾಡಲು ಆಗುತ್ತಿರಲಿಲ್ಲ.
ಸಿಎಂ ಕುಮಾರ ಸ್ವಾಮಿ ರನ್ನ ಭೇಟಿ ಮಾಡಲು ಪೈ ಸ್ಟಾರ್ ಹೋಗಬೇಕಾ?ವಿಧಾನ ಸೌಧದಿಂದ ಆಡಳಿತ ನಿಯಂತ್ರಣ ಮಾಡಬೇಕೊ ತಾಜ್ ವೆಸ್ಟೇಂಡ್ ನಿಂದ ಆಗಬೇಕು ವಿಚಾರ ಮಾಡಿ ಎಂದು ಪಿ ರಾಜೀವ ಪ್ರಶ್ನಿಸಿದರು
ಶ್ರೀಮಂತ ಪಾಟೀಲ ಗೆ ಹಣ ಅವಶ್ಯಕತೆ ಇಲ್ಲ.
ಶ್ರೀಮಂತ ಪಾಟೀಲ ಬಗ್ಗೆ ಗೊತ್ತಿಲ್ಲ ಹೀಗಾಗಿ ಎನೇನೊ ಹೇಳಿರಬಹುದು.ಅನರ್ಹಗೊಳಿಸುವ ಕ್ರಮ ಇದೆಯಲ್ಲ ಅದೇ ತಪ್ಪು ಅಂತಾ ಮಾಜಿ ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸುದರು
ಇವೆರೆಲ್ಲ ಅನರ್ಹ ಶಾಸಕರಲ್ಲ ಸ್ವಾಭಿಮಾನಿ ಶಾಸಕರು.
೩೦ ಜನ ಶಾಸಕರನ್ನು ಬಿಟ್ಟು ೨೬ ಜನ ಶಾಸಕರು ನೋವು ಆಗುತ್ತಿತ್ತುಅದನ್ನು ವಿರೋಧಿಸಿ ಸಿಡಿದೆದ್ದು ಬಂದಿದ್ದಾರೆ.
ಇಡಿ ೧೭ ಜನ ಶಾಸಕರು ಇಡಿ ಕರ್ನಾಟಕದ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ
ಕಾಗಾವಾಡ ಕ್ಷೇತ್ರದ ನವಲಿಹಾಳ ಗ್ರಾಮದಲ್ಲಿ ಪ್ರಚಾರದಲ್ಲಿ ಕುಡಚಿ ಶಾಸಕ ಪಿ ರಾಜೀವ್ ಹೇಳಿದರು