ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರ ಸದ್ಯಕ್ಕೆ ಬಿಟೌನ್ ನಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ನಾಯಕಿಯಾಗಿ ನಟಿ ದೀಪಿಕಾ ಪಡುಕೋಣೆ ಅವರು ಫಿಕ್ಸ್ ಆಗಿದ್ದಾರಾದರೂ, ಇವರಿಗೆ ನಾಯಕನನ್ನು ಹುಡುಕುವಷ್ಟರಲ್ಲಿ ನಿರ್ದೇಶಕ ಬನ್ಸಾಲಿ ಅವರು ಸುಸ್ತಾಗಿ ಹೋಗಿದ್ದಾರೆ.
ಮೇವಾಡ ರಾಣಿ ‘ಪದ್ಮಾವತಿ’ಯ ಜೀವನದ ಕಥೆಯನ್ನಾಧರಿಸಿದ ಈ ಐತಿಹಾಸಿಕ ಚಿತ್ರದಲ್ಲಿ ಬಾಲಿವುಡ್-ಹಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ನಟಿ ದೀಪಿಕಾ ಪಡುಕೋಣೆ ಅವರು ರಾಣಿ ‘ಪದ್ಮಾವತಿ’ ಪಾತ್ರ ವಹಿಸಲಿದ್ದಾರೆ.
ಆದರೆ ‘ಪದ್ಮಾವತಿ’ ಗಂಡ ರಾಜ ರಾವಲ್ ರತನ್ ಸಿಂಗ್ ಪಾತ್ರ ವಹಿಸುವ ನಟನ ಆಯ್ಕೆಗಾಗಿ ಸಂಜಯ್ ಲೀಲಾ ಬನ್ಸಾಲಿ ಅವರು ಇಡೀ ಬಿಟೌನ್ ಸುತ್ತಾಡುತ್ತಿದ್ದಾರೆ. ಈ ಮೊದಲು ನಟ ವಿಕ್ಕಿ ಕೌಶಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರನ್ನು ಖುದ್ದು ದೀಪಿಕಾ ಅವರೇ ಬೇಡ ಎಂದರಂತೆ.
ತದನಂತರ ನಟ ಶಾಹೀದ್ ಕಪೂರ್ ಅವರನ್ನು ಆಯ್ಕೆ ಮಾಡಲಾಯಿತು. ಆದರೆ ಕೊನೆ ಕ್ಷಣದ ಕೆಲವು ಬದಲಾವಣೆಗಳಿಂದ ಅವರು ಈ ಚಿತ್ರತಂಡದಿಂದ ಹೊರಬಿದ್ದರು.
ಇದೀಗ ಬಾಲಿವುಡ್ ನ ಖ್ಯಾತ ನಟರಿಬ್ಬರ ಹೆಸರು ಕೇಳಿ ಬರುತ್ತಿದೆ. ಯಾರು ಆ ಇಬ್ಬರು ನಟರು ಎಂಬುದನ್ನು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ….
Check Also
ಲಕ್ಷ ರೂ ಸಾಲದಲ್ಲಿ, ಫಿಫ್ಟೀ ,ಗುಳುಂ, ಸಾವಿರಾರು ಮಹಿಳೆಯರು ಗರಂ….!!!!
ಮನೆಗೆ ಬಂದು ಒಂದು ಲಕ್ಷ ರೂ ಸಾಲ ಕೊಡ್ತಿವಿ ಅಂತಾ ಹೇಳಿದ್ರೆ ಯಾರಾದ್ರೂ ಬೇಡ ಅಂತಾರಾ…? ಮೈಕ್ರೋ ಫೈನಾನ್ಸ್ ಮೂಲಕ …