Breaking News

ಬೆಳಗಾವಿಯಲ್ಲಿ ಬಿಜೆಪಿ ವಿರುದ್ಧ ಸಚಿವ ಪರಮೇಶ್ವರ ವಾಗ್ದಾಳಿ

ಬೆಳಗಾವಿ- ಬೆಳಗಾವಿಯಲ್ಲಿ ಮುಜರಾಯಿ ಸಚಿವ ಪರಮೇಶ್ವರ ನಾಯಕ ವಿವಿಧ ವಿಚಾರಗಳ ಕುರಿತು ಪ್ರತಿಕ್ರಿಯೆ ವ್ಯೆಕ್ತಪಡಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ವಿಷಪ್ರಸಾದ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ,
ಅಧಿಕಾರಿಗಳಿಗೆ ಮಾನವೀಯತೆ ದೃಷ್ಟಿಯಿಂದ ಸ್ಪಂದಿಸಲು ಸೂಚಿಸಿದ್ದೇನೆ, ಪ್ರಕರಣದ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ, ಪೂರ್ಣ ಮಾಹಿತಿ ಕೈಗೆ ಸೇರಿದ ಬಳಿಕ ಸಿಎಂ ಜೊತೆ ಚರ್ಚಿಸಿ ತೀರ್ಮಾನ ತಗೋತಿವಿ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ, ಸಿಎಂ, ಡಿಸಿಎಂ ಗಮನಕ್ಕೆ ತಂದು ಸರ್ಕಾರ ಶಾಸ್ವತವಾದ ಪರಿಹಾರಕ್ಕಾಗಿ ನಿಲುವು ತಗೋತಿವಿ ಎಂದರು,

*ಚಿಂತಾಮಣಿ ತಾಲ್ಲೂಕಿನ ಗಂಗಮ ದೇವಸ್ಥಾನ ಪ್ರಕರಣ..*

ಅವರವರ ಮನೆಗಳಲ್ಲಿ ಪ್ರಸಾದ ಮಾಡಿಕೊಂಡು ಬಂದು ಹಂಚುವ ವಿಚಾರ ಗೊತ್ತಾಗಿದೆ, ಒಬ್ಬ ಮಹಿಳೆ ಕೇಸರಿ ಬಾತ್ ಅನ್ನ ಬಲವಂತವಾಗಿ ಕೊಡುತ್ತಿರುವ ಬಗ್ಗೆ ಮಾಹಿತಿಯಿದೆ,
ಇದರ ಬಗ್ಗೆ ನಮ್ಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ,
ಇವತ್ತು ಸಂಜೆಯೊಗೆ ನನ್ನ ಕೈಗೆ ಮಾಹಿತಿ ಕೈ ಸೇರಲಿದೆ,
ಅದನ್ನ ಆಧರಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ..

*ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ವಿಚಾರ.*

ಪ್ರೀಯಾಂಕಾ ಗಾಂಧಿ ರಾಜಕೀಯ ಪ್ರವೇಶ ಬಿಜೆಪಿಯವರಿಗೆ ಭಯ್ ಶುರುವಾಗಿದೆ, ದೇಶದ ಉದ್ದಗಲಕ್ಕೂ ಕಾಂಗ್ರೆಸ್ಸಿಗೆ ಒಳ್ಳೆಯ ವಾತಾವರಣ ಸೃಷ್ಟಿಯಾಗಿದೆ,
2019 ಲೋಕಸಭಾ ಚುನಾವಣೆಯಲ್ಲಿ ಯುಪಿಎ ಅಧಿಕಾರಕ್ಕೆ ಬರುತ್ತದೆ, ರಾಹುಲ್ ಗಾಂಧಿ, ಪ್ರೀಯಾಂಕಾ ಗಾಂಧಿ ಜೋಡಿ ಮೋಡಿ ಮಾಡಲಿದೆ, ಪ್ರೀಯಾಂಕಾ ಇಂದಿರಾ ಗಾಂಧಿ ಮೊಮ್ಮಗಳು…ಅವರ ತದ್ರೂಪಿ ಆಗಿದ್ದಾರೆ, ಮೋದಿ ಸರ್ಕಾರದ ಸುಳ್ಳು ಭರವಸೆ ನೀಡಿದ್ದಾರೆ, ಹೀಗಾಗಿ ಮೋದಿ ಸರ್ಕಾರದ ಮೇಲಿನ ಭರವಸೆ ಕಳೆದುಕೊಂಡಿದ್ದಾರೆ, ಎಂದು ಸಚಿವ ಪರಮೇಶ್ವರ ನಾಯಕ ಹೇಳಿದರು

*ಸಿ ಪೋರ್ ಸಮೀಕ್ಷೆ ವಿಚಾರ.*

ಒಂದು ತಿಂಗಳ ಹಿಂದೆ ಬಿಜೆಪಿ ಪರವಿತ್ತು.. ಈಗ ಅತಂತ್ರ ಸರ್ಕಾರ ಎಂದಿದೆ, ಮುಂದಿನ ಒಂದು ತಿಂಗಳಾದ ಮೇಲೆ ಯುಪಿಎ ಪರವಾಗಿ ಬರಲಿದೆ,

*ಸಿಎಂ ಯೋಗಿ ಆದಿತ್ಯನಾಥರ ರಾಮಮಂದಿರ ವಿಚಾರ ಹೇಳಿಕೆ.*

ಇಷ್ಟು ದಿನ ಯೋಗಿಆದಿತ್ಯನಾಥ ಮಲಗಿದ್ದರಾ..ಅವರಿಗೂ 2014ರಲ್ಲಿ ಬಿಜೆಪಿಗೆ ಪೂರ್ಣ ಬಹುತಮವಿತ್ತು, ಅವಾಗ್ಯಾಕೆ ಇವರಿಗೆ ರಾಮಮಂದಿರ ನೆನಪಾಗಲಿಲ್ಲ, ಚುನಾವಣೆ ಬಂದಾಗ ರಾಮಮಂದಿರ ನೆನಪಾಗುತ್ತಾ, ಬಿಜೆಪಿ ರಾಮಮಂದಿರ ಟ್ರಂಪ್ಕಾರ್ಡ್ ವರ್ಕೌಟ್ ಆಗಲ್ಲ, ಬಿಜೆಪಿಯವರು ಡೋಂಗಿಗಳು ಅಂತಾ ಜನರಿಗೆ ಗೊತ್ತಿದೆ, ಸಿದ್ದಗಂಗಾ ಶ್ರೀಗಳಿಗೆ ಭಾರತ ಸರ್ಕಾರ ಭಾರತ್ನ ರತ್ನ ಕೊಡಬೇಕಿತ್ತು,ಆದ್ರೆ ಭಾರತ ರತ್ನ ಕೊಡದೆ ಅಪಮಾನ ಮಾಡುತ್ತಿದೆ,ಬಿಜೆಪಿ ಅವರಿಗೆ ಆಪರೇಷನ್ ಆಗಿದೆ, ಅವರೇನು ಆಪರೇಷನ್ ಮಾಡುತ್ತಾರೆ,

ಪ್ರಭಲ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡಬೇಕು ಹೊರತು ಪದೇ ಪದೇ ಆಪರೇಷನ್ ಕಮಲ ಮಾಡಬಾರದು, ನಾವೇನು ರೆಸಾರ್ಟ್ ರಾಜಕಾರಣ ಮಾಡಿಲ್ಲ.ರೆಸಾರ್ಟ್ ಸಂಸ್ಕೃತಿ ಆರಂಭಿಸಿದ್ದು ಬಿಜೆಪಿಯವರು ಎಂದು ಸಚಿವ ಪರಮೇಶ್ವರ ವಾಗ್ದಾಳಿ.ಮಾಡಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *