ಬೆಳಗಾವಿ- ಗಡಿನಾಡ ಕನ್ನಡಿಗರ ಧ್ವನಿಯಾಗಿದ್ದ ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಬೆಳಗಾವಿ ಅಂದ್ರೆ ಪಂಚ ಪ್ರಾಣ,ಪಾಪು LLB ಕಲಿತಿದ್ದು ಬೆಳಗಾವಿಯ ಕೆ ಎಲ್ ಎಸ್ ಸಂಸ್ಥೆಯ ಲಾ ಕಾಲೇಜಿನಲ್ಲಿ
ಪಾಪು ಬೆಳಗಾವಿಯಲ್ಲಿ ಓದುತ್ತಿರುವಾಗಲೇ ಗಡಿನಾಡ ಕನ್ನಡಿಗರ ಪರವಾಗಿ ಹೋರಾಟದಲ್ಲಿ ಧುಮುಕಿ ಬೆಳಗಾವಿಯ ಧ್ವನಿಯಾಗಿ ಹೊರಹೊಮ್ಮಿದ್ದರು
ಗಡಿ ಗಟ್ಟಿ ಆಗಬೇಕಾದರೆ ನಿಪ್ಪಾಣಿ ಜಿಲ್ಲೆ ಆಗಲೇ ಬೇಕು ಎಂದು ಪ್ರತಿಪಾದಿಸುತ್ತ ಬಂದ ಪಾಟೀಲ ಪುಟ್ಟಪ್ಪ ನವರು ಗಡಿನಾಡ ಕುರಿತು ಅಪಾರ ಕಾಳಜಿ ಹೊಂದಿದ್ದರು.
ಗಡಿ ವಿವಾದದ ಬಗ್ಗೆ ಅಭ್ಯಾಸ ಮಾಡಿದ್ದ ಅವರು ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ಕಿತ್ತೂರಿನ ಅಭಿವೃದ್ಧಿಯ ಬಗ್ಗೆ ಸಮ್ಮೇಳನಗಳಲ್ಲಿ ಸಭೆ,ಸಮಾರಂಭಗಳಲ್ಲಿ ಕಿತ್ತೂರು ತಾಲ್ಲೂಕು ಆಗಲೇ ಬೇಕು ಎಂದು ಒತ್ತಾಯ ಮಾಡುತ್ತಲೇ ಬಂದಿದ್ದ ಪಾಟೀಲ ಪುಟ್ಟಪ್ಪ, 2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾದ್ಯಕ್ಷರಾಗಿದ್ದ ಪಾಟೀಲ ಪುಟ್ಟಪ್ಪ ಬೆಳಗಾವಿಯ ಸಮ್ಮೇಳನದಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಅವರನ್ನು ಕಿತ್ತೂರು ತಾಲ್ಲೂಕು ಘೋಷಣೆ ಮಾಡಿದ ಬಳಿಕವೇ ಸಮ್ಮೇಳನದಿಂದ ನಿರ್ಗಮಿಸಬೇಕು ಎಂದು ಪಾಪು ಹಠ ಹಿಡಿದಿದ್ದರಿಂದ ಎಸ್ ಎಂ ಕೃಷ್ಣ ರಾಣಿ ಕಿತ್ತೂರು ಚನ್ನಮ್ಮ ತಾಲ್ಲೂಕು ಎಂದು ಘೋಷಣೆ ಮಾಡಿದ್ದು ಸ್ಮರಣೀಯ
ಪಾಟೀಲ ಪುಟ್ಟಪ್ಪನವರ ಕನ್ನಡಪರ ಕಾಳಜಿ ನೋಡಿ ಮಹಾರಾಷ್ಟ್ರದ ಲೋಕಸತ್ತಾ ದಿನಪತ್ರಿಕೆ ,ಮಹಾರಾಷ್ಟ್ರಕ್ಕೊಬ್ಬ ಪಾಟೀಲ ಪುಟ್ಟಪ್ಪ ಬೇಕು ಎಂದು ಸಂಪಾದಕೀಯ ಬರೆದಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ ಪಾಪು ಅವರ ಕನ್ನಡ ಪ್ರೇಮವನ್ನು ಮರಾಠಿ ದಿನಪತ್ರಿಕೆಗಳೂ ಮೆಚ್ವಿಕೊಂಡಿದ್ದವು
ಬೆಳಗಾವಿಯ ಹಿರಿಯ ಸಾಹಿತಿ ಸರಜೂ ಕಾಟ್ಕರ್ ಅವರು ನಾನು ಪಾಟೀಲ ಪುಟ್ಟಪ್ಪ ಎಂಬ ಪಾಪು ಅವರ ಆತ್ಮಕಥೆಯನ್ನು ಎರಡು ಭಾಗಗಳಲ್ಲಿ ಬರೆದು ಪ್ರಕಟಿಸಿದ್ದಾರೆ .