ಬೆಳಗಾವಿ- ಸರ್ಕಾರದ ಯೋಜನೆಗಳ ಲಾಭ ಸಿಗದೇ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಜಿಲ್ಲೆಯ ಮೂರು ಗ್ರಾಮಗಳು ಇನ್ನುಮುಂದೆ ಸಮಸ್ಯೆಗಳಿಂದ ಮುಕ್ತಗೊಳ್ಳಲಿವೆ.
ಬೈಲಹೊಂಗಲ ತಾಲೂಕಿನ ಸಂಪಗಾಂವ್, ಹಣ್ಣೀಕೇರಿ ಹಾಗೂ ಕಿತ್ತೂರು ತಾಲೂಕಿನ ತಿಗಡಿ ಇನ್ನು ಮುಂದೆ ಸಮಸ್ಯೆ ಮುಕ್ತ ಗ್ರಾಮಗಳೆಂಬ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲಿವೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಈ ವಿನೂತನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಿದ್ದು, ಇಡೀ ಜಿಲ್ಲಾಡಳಿತವೇ ಏಪ್ರಿಲ್ ೨೩ ರಂದು ಸಂಪಗಾಂವಗೆ ಭೇಟಿ ನೀಡಿ ಮೂರು ಗ್ರಾಮಗಳಿಗೆ ಸರ್ಕಾರದ ಸಕಲ ಸೌಲಭ್ಯ ಕಲ್ಪಿಸಲಿವೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಸತೀಶ ಸಿಂಗ್.. ಮೂರು ಗ್ರಾಮಗಳಿಗೆ ಸೌಲಭ್ಯ ವಂಚಿತರಿಗೆ ಸರ್ಕಾರದ ಸಕಲ ಸೌಲಭ್ಯ ಕಲ್ಪಿಸಲಾಗುವುದು. ಅಲ್ಲದೇ ೪೮ ತಜ್ಞವೈಧ್ಯರ ತಂಡ ಮೂರು ಗ್ರಾಮಗಳ ನಿವಾಸಿಗಳಿಗೆ ಹೃದಯ ಹಾಗೂ ಕಣ್ಣು ಉಚಿತ ತಪಾಸಣೆ ನಡೆಸಲಿದ್ದಾರೆ. ಏ. ೨೩ ರಂದು ಬೆಳಗ್ಗೆ ೧೦ ಕ್ಕೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ. ಎಲ್ ನಾರಾಯನಸ್ವಾಮಿ ಉದ್ಘಾಟಿಸುವರು. ಡಿಸಿ ಜಯರಾಂ, ಎಸ್ಪಿ ಡಾ. ಬಿ.ಆರ್. ರವಿಕಾಂತೇಗೌಡ ಸೇರಿಂದೆ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರಿದ್ದಾರೆ ಎಂದರು.
ಮೂರು ಹಳ್ಳಿಗಳಲ್ಲಿ ಸೌಲಭ್ಯವಂಚಿತ ಆಗಿರುವ ಕುರಿತು ನಗರದ ಆರ್.ಎಲ್ ಲಾ ಕಾಲೇಜು ಮತ್ತು ಬಿ.ವಿ.ಬೆಲ್ಲದ ಲಾ ಕಾಲೇಜು ವರದಿ ನೀಡಿದ್ದು, ಮೂರು ಹಳ್ಳಿಗಳಲ್ಲಿ ಡ್ರೈವಿಂಗ್ ಲೈಸೆನ್ಸ್, ವಿದವಾ ವೇತನ, ವೃದ್ಧಾಪ್ಯ ವೃತನ, ರೇಷನ್ ಕಾರ್ಡ್ ಸೇರಿಂದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿರುವವರಿಗೆ ಸ್ಥಳದಲ್ಲೆ ಸವಲತ್ತು ಕಲ್ಪಿಸಲಾಗುವುದು.ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸತೀಶ್ ಸಿಂಗ್ ತಿಳಿಸಿದರು