.ಬೆ
ಬೆಳಗಾವಿ-ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡಿರುವ ಪೀರನವಾಡಿಯ,ಕ್ರಾಂತಿವೀರ ಸೊಂಗೊಳ್ಳಿ ರಾಯಣ್ಣನ ಮೂರ್ತಿ ವಿವಾದ ಈಗ ರಾಜ್ಯಮಟ್ಟದ ನ ಸೆಳೆದಿದೆ.
ಪೀರನವಾಡಿಯ ರಾಯಣ್ಣನ ಮೂರ್ತಿಯ ವಿವಾದವನ್ನು ಸೌಹಾರ್ದಯುತವಾಗಿ ಬಗೆ ಹರಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಟ್ವೀಟ್ ಮಾಡಿದ್ದಾರೆ. ಜೊತೆಗೆ ರಾಜ್ಯದ ಘಟಾನುಘಟಿಗಳು ಈ ವಿವಾದದ ಕುರಿತು ಟ್ವೀಟ್ ಮಾಡಿದ್ದು ಪೀರನವಾಡಿಯ ವಿವಾದ ಈಗ ರಾಜ್ಯಮಟ್ಟದಲ್ಲಿ ಧ್ವನಿ ಎತ್ತಿದೆ
ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಲು,ಅನುಮತಿ ನೀಡುವಂತೆ ಆಗ್ರಹಿಸಿ ನಾಳೆ ಸೋಮವಾರ ಹಾಲುಮತ ಸಮಾಜ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಪೀರನವಾಡಿಯ ಈ ವಿವಾದ ಸೋಶಿಯಲ್ ಮಿಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ್ದು ರಾಯಣ್ಣನ ಅಭಿಮಾನಿಗಳು ಪೀರನವಾಡಿಯಲ್ಲಿ ಕ್ರಾಂತಿಪುರುಷನ ಪ್ರತಿಷ್ಠಾಪನೆ ಮಾಡಲು ಸಮರ ಸಾರಿದ್ದು ನಿರಂತರವಾಗಿ ಹೋರಾಟ ಮಾಡುವ ಸಂಕಲ್ಪ ಮಾಡಿದೆ.