ಬೆಳಗಾವಿ- ಬೆಳಗಾವಿಯ ಪೀರನವಾಡಿಯಲ್ಲಿ ಮೂರ್ತಿ ವಿವಾದ ಸುಖಾಂತ್ಯಗೊಂಡಿದೆ.ರಾಜಿ ಸಂಧಾನದ ಸಭೆಯಲ್ಲಿ ನಿರ್ಧಾರವಾದಂತೆ,ಈ ಸರ್ಕಲ್ ಛತ್ರಪತಿ ಶಿವಾಜಿ ಮಹಾರಾಜ್ ಸರ್ಕಲ್ ಎಂದು ನಾಮ ಫಲಕ ಅಳವಡಿಸಲು ಶಿವಭಕ್ತರು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದಾರೆ.
ಬೆಳಗಾವಿಯ ಎಲ್ಲ ಶಿವಾಜಿ ಅಭಿಮಾನಿಗಳು ನಾಳೆ ನಡೆಯುವ ಫಲಕ ಅನಾವರಣ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ ಎನ್ನುವ ಸಂದೇಶಗಳು,ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪೀರನವಾಡಿ ಜಂಕ್ಷನ್ ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾನೆಯಾದ ಬಳಿಕ ADGP ಅಮರ ಕುಮಾರ್ ಪಾಂಡೆ ಅವರ ನೇತ್ರತ್ವದಲ್ಲಿ ಸಂಧಾನ ಸಭೆ ನಡೆದಿತ್ತು,ಈ ಸಭೆಯಲ್ಲಿ ಪೀರನವಾಡಿ ಜಂಕ್ಷನ್ ಗೆ ಛತ್ರಪತಿ ಶಿವಾಜಿ ಮಹಾರಾಜ್ ಸರ್ಕಲ್ ಎಂದು ಹೆಸರಿಡುವ ನಿರ್ಧಾರ ಆಗಿತ್ತು,ರಾಜಿ ಸಂಧಾನದ ಸಭೆಯ ನಿರ್ಣಯದಂತೆ ಶಿವಾಜಿ ಅಭಿಮಾನಿಗಳು ನಾಳೆ ಸರ್ಕಲ್ ನಲ್ಲಿ ನಾಮಫಲಕ ಅಳವಡಿಸಲು ಮುಂದಾಗಿದ್ದಾರೆ.
ಇದೇ ಸರ್ಕಲ್ ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯೂ ಪ್ರತಿಷ್ಠಾಪನೆ ಆಗಿದೆ,ಈ ಸರ್ಕಲ್ ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು ನಾಮಕರಣ ಮಾಡಬೇಕೆಂದು,ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.