ಬೆಳಗಾವಿ- 1924 ರಲ್ಲಿ ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧಿವೇಶನ ನಡೆಸಿದ ಐತಿಕಾಸಿಕ ನೆಲ ಬೆಳಗಾವಿಯಾಗಿದ್ದು ಇಲ್ಲಿಯ ರೆಲ್ವೆ ನಿಲ್ಧಾಣವನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದ್ದು ನಿಲ್ಧಾಣದ ಆಧುನೀಕರಣಕ್ಕೆ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ರೇಲ್ವೆ ಸಚಿವ ಪಿಯುಶ್ ಗೋಯಲ್ ಹೇಳಿದರು
ಬೆಳಗಾವಿಯ ಗೋಗಟೆ ಸರ್ಕಲ್ ಬಳಿಯ ರೇಲ್ವೆ ಮೇಲ್ಸೇತುವೆ ಕಾಮಗಾರಿಯ ಪರಶೀಲನೆ ಮಾಡಿ ರೆಲ್ವೆ ನಿಲ್ಧಾಣದಲ್ಲಿ ರೆಲ್ವೆ ಟಿಕೆಟ್ ಬುಕಿಂಗ್ ಆ್ಯಪ್ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ದೇಶದ ರೇಲ್ವೇ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ರೈಲ್ವೆ ನಿಲ್ಧಾಣಗಳ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಸದ್ಯಕ್ಕೆ ನಡೆಯುತ್ತರುವ ಕಾಮಗಾರಿಗಳಿಗೆ ವೇಗ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಿಯುಶ್ ಗೋಯಲ್ ತಿಳಿಸಿದ್ರು
ಬೆಳಗಾವಿಯ ರೈಲು ನಿಲ್ದಾಣ ವನ್ನು ಮೇಲ್ದರ್ಜೆಗೇರಿಸಿ ನಿಲ್ಧಾಣದ ಸುಂದರೀಕರಣ ಹಾಗು ಪ್ರಯಾಣಿಕರಿಗೆ ಹೆಚ್ಚಿನ ಸೌವಲತ್ತು ನೀಡುತ್ತೇವೆ ಬೆಳಗಾವಿಯಲ್ಲಿ ಎರಡು ಮೇಲ್ಸೇತುವೆ ಕಾಮಗಾರಿಗಳು ನಡೆಯುತ್ತಿದ್ದು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎರಡೂ ಸೇತುವೆಗಳನ್ನು ಸೇವೆಗೆ ಸಮರ್ಪಿಸಲು ಸೂಚಿಸಲಾಗಿದೆ ಈ ಕುರಿತು ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಲಾಗಿದೆ ಎಂದು ರೇಲ್ವೆ ಮಂತ್ರಿಗಳು ಹೇಳಿದರು
ನೈರುತ್ಯ ರೇಲ್ವೆ ವಲಯದಲ್ಲಿ ಪ್ರಯಾಣಿಕರ ಅನಕೂಲಕ್ಕಾಗಿ ರಿಜರ್ವ ಮತ್ತು ನಾನ್ ರಿಜರ್ವ ಟಿಕೆಟ್ ಗಳನ್ನು ಆನ್ ಲೈನ್ ನಲ್ಲಿ ಬುಕ್ ಮಾಡಲು ಆ್ಯಪ್ ಸಿದ್ಧಪಡಿಸಲಾಗಿದ್ದು ಪ್ರಯಾಣಿಕರು ಸರದಿಯಲ್ಲಿ ನಿಂತುಕೊಳ್ಳದೇ ಮನೆಯಲ್ಲಿ ಕಚೇರಿಯಲ್ಲಿ ಕುಳಿತುಕೊಂಡು ಟಿಕೆಟ್ ಬುಕ್ ಮಾಡಬಹುದು ಪೇಪರ್ ಲೆಸ್ ಟಿಕೆಟ್ ಮಾಡುವದೇ ಈ ಆ್ಯಪ್ ಉದ್ದೇಶವಾಗಿದೆ ಪ್ರಯಾಣಿಕರು ಇದರ ಲಾಭ ಪಡೆಯಬೇಕು ಎಂದು ರೇಲ್ವೆ ಸಚಿವ ಪಿಯುಶ್ ಗೋಯಲ್ ಹೇಳಿದರು