ಬೆಳಗಾವಿ- ನಾಳೆ ಮಂಗಳವಾರ ಬೆಳಗಾವಿ ತಾಲ್ಲೂಕಿನ ಪಿ ಎಲ್ ಡಿ ಬ್ಯಾಂಕಿನ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಡೆಯಲಿದ್ದು ಜಿಲ್ಲೆಯ ಒಂದೇ ಪಕ್ಷದ ಇಬ್ಬರು ರಾಜಕೀಯ ನಾಯಕರ ನಡುವೆ ಬಿಗ್ ಫೈಟ್ ನಡೆಯಲಿದ್ದು ಚುನಾವಣೆಯ ಸಂಧರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಡಿಸಿಪಿ ಕ್ರೈಂ ಸಂಪಗಾವಿ ಅವರನ್ನು ಬಂದೋಬಸ್ತಿಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ
ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರ ಚುನಾವಣೆ ಮುಗಿದಿದೆ 14 ಜನ ನಿರ್ದೇಶಕರು ಆಯ್ಕೆ ಆಗಿದ್ದಾರೆ ಸರ್ಕಾರ ಒಬ್ಬ ಸದಸ್ಯನನ್ನು ನಾಮ ನಿರ್ದೇಶನ ಮಾಡುತ್ತದೆ ಒಟ್ಟು 15 ಸದಸ್ಯರನ್ನು ಹೊಂದಿರುವ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷ ರಾಗಲು ಎರಡು ಗುಂಪುಗಳು ಎಲ್ಲಿಲ್ಲದ ಪೈಪೋಟಿ ನಡೆಸಿವೆ
ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿರುವ ಎರಡು ಗುಂಪುಗಳ ಹಿಂದೆ ಇಬ್ಬರು ಪ್ರಭಾವಿ ನಾಯಕರಿದ್ದು ಬ್ಯಾಂಕಿನ ನಿರ್ದೇಶಕರನ್ನು ಒಲಿಸಲು ಜಿದ್ದಾ ಜಿದ್ದಿ ನಡೆದಿದೆ
ಈ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿರುವ ಪೋಲೀಸ್ ಇಲಾಖೆ ಬಂದೋಬಸ್ತಿಗೆ ಡಿಸಿಪಿ ಯನ್ನು ನೇಮಿಸಿರುವದು ವಿಶೇಷ ವಿಷಿಷ್ಟ
ಲಕ್ಷ್ಮೀ ಹೆಬ್ಬಾಳಕರ ಬೆಂಬಲಿತ ಒಂದು ಗುಂಪು ರಮೇಶ ಜಾರಕಿಹೊಳಿ ಬೆಂಬಲಿತ ಇನ್ನೊಂದು ಗುಂಪು ಪ್ರತ್ಯೇಕವಾಗಿ ಕಸರತ್ತು ನಡೆಸಿವೆ ಎರಡೂ ಗುಂಪುಗಳ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ .ನಾಳೆ ನಡೆಯುವ ಚುನಾವಣೆ ಸಂಧರ್ಭದಲ್ಲಿ ಗದ್ದಲ ಗೊಂದಲ ಉಂಟಾದರೆ ಚುನಾವಣೆ ಮುಂದೂಡುವ ಸಾಧ್ಯತೆ ಇದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ