Breaking News

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುರಸೊತ್ತಿದ್ದರೆ ರೈತನ ಮಗನ ಅಳಲು ಕೇಳಲಿ

ಬೆಳಗಾವಿ –

ಅದೊಂದು ಬಡ ಕುಟುಂಬ. ತಮಗಿರುವ 5 ಎಕರೆ ಜಮೀನಿನಲ್ಲಿ ಬೆಳೆಯುವ ಕಬ್ಬನ್ನೆ ನೆಚ್ಚಿಕೊಂಡು ಇದುವರೆಗೆ ಜೀವನ ಸಾಗಿಸುತ್ತಿತ್ತು. ಆದರೇ ಈಗ ಸಕ್ಕರೆ ಕಾರ್ಖಾನೆಗಳ ಚೆಲ್ಲಾಟದಿಂದ ಈ ಕುಟುಂಬವನ್ನೇ ಸಂಕಷ್ಟಕ್ಕೆ ದುಡಿದೆ. ಇಂಜನಿಯರಿಂಗ್ ಓದುತ್ತಿರುವ ಕುಟುಂಬದ ಕಿರಿಯ ಮಗನ ಕಾಲೇಜು ಫೀ ಕಟ್ಟಲಾಗದೆ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ ಘಟನೆ ನಡೆದಿದಿ ಆದ್ರೆ ಪ್ರಧಾನಿ ಮೋದಿ ಸೂಪರ್ ಪಾವರ್ ಆಗೋದ್ರಲ್ಲಿ ಬ್ಯುಸಿ ಆಗಿದ್ದಾರೆ ಈ ಬಡಪಾಯಿಯ ಟ್ವಿಟ್ ಗೆ ರಿಸ್ಪಾನ್ಸ ಮಾಡಲು ಅವರಿಗೆ ಪುರಸೊತ್ತಿಲ್ಲ

“ಪ್ರಧಾನಿ ನರೇಂದ್ರ ಮೋದಿ ಅವರೇ, ನಾವು 28 ಟನ್ ಕಬ್ಬನ್ನು ಎಂ.ಕೆ. ಹುಬ್ಬಳ್ಳಿ ಗ್ರಾಮದ ಬಳಿ ಇರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪೂರೈಸಿದ್ದೇವೆ. ಆದರೇ ಈ ವರೆಗೆ ಬಾಕಿ ಹಣ ನಮ್ಮ ಸೇರಿಲ್ಲ. ನನಗೆ ಕಾಲೇಜು ಅಡ್ಮಿಷನ್ ಸಲುವಾಗಿ ಹಣ ಅವಶ್ಯಕತೆ ಇದೆ. ದಯಮಾಡಿ ಅವರಿಗೆ ತಾಕೀತು ಮಾಡಿ. ಇಲ್ಲವಾದಲ್ಲಿ ನಮ್ಮ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಿದೆ”

ಹೀಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿವರಿಗೆ ಆಗಷ್ಟ್ 12ರಂದು ಬೆಳಗಾವಿ ತಾಲೂಕಿನ ಗಜಪತಿ ಗ್ರಾಮದ ಇಂಜನಿಯರಿಂಗ್ ವಿದ್ಯಾರ್ಥಿ ಆಕಾಶ್ ಲಂಗೊಟಿ ಮನವಿ ಮಾಡಿಕೊಳ್ಳುವದರ ಜತೆಗೆ ತನ್ನ ಕಷ್ಟವನ್ನು ತೊಡಿಕೊಂಡಿದ್ದಾನೆ. ಇಷ್ಟಕ್ಕೂ ಈ ವಿದ್ಯಾರ್ಥಿಯ ಕುಟುಂಬಕ್ಕೆ ಇರುವುದು 5 ಎಕರೆ ಜಮೀನು ಮಾತ್ರ. ಕೃಷಿಯನ್ನೆ ನಂಬಿಕೊಂಡಿರೋ ಈ ಕುಟುಂಬದಲ್ಲಿ ನಾಲ್ವರ ಸದಸ್ಯರಿದ್ದಾರೆ. ಅದರಲ್ಲಿ ಕಿರಿಯ ಮಗನೆ ಈ ಆಕಾಶ ಲಂಗೋಟಿ. ಈತ ಬೆಳಗಾವಿಯ ಜೈನ್ ಇಂಜನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ವಿಭಾಗದಲ್ಲಿ ದ್ವೀತಿಯ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಸದ್ಯ ಈತನ ಅಡ್ಮಿಶನ ಗಾಗಿ 70 ಸಾವಿರ ರೂಪಾಯಿ ಹಣದ ಅವಶ್ಯಕತೆ ಇದೆ. ಆದರೇ ಅಷ್ಟೊಂದು ಹಣ ಇಲ್ಲದ ಕಾರಣ ಇಡೀ ಕುಟುಂಬ ಆತಂಕದಲ್ಲಿ ದಿನಗಳನ್ನು ಕಳೆಯುತ್ತಿದೆ. ಇದರ ನಡುವೆ ಜಮೀನಿನಲ್ಲಿ ಬೆಳೆದ 28 ಟನ್ ಕಬ್ಬು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಳುಹಿಸಿಕೊಡಲಾಗಿದೆ. ಆದರೇ ಸಕ್ಕರೆ ಕಾರ್ಖಾನೆ ಇದುವರೆಗೆ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಕುಟಂಬ ಅಸಹಾಯಕ ಸ್ಥಿತಿ ತಲುಪಿದೆ.
ಬೈಟ: ಆಕಾಶ, ಇಂಜನಿಯರಿಂಗ್ ವಿದ್ಯಾರ್ಥಿ

ಪ್ರತಿ ಭಾರಿ ಬೈಲಹೊಂಗಲ ತಾಲೂಕಿನ ಎಂ.ಕೆ. ಹುಬ್ಬಳ್ಳಿ ಬಳಿ ಇರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ತಾವು ಬೆಳದ ಕಬ್ಬನ್ನು ಪೂರೈಕೆ ಮಾಡುತ್ತಿದ್ದಾರೆ. ಇದೇ ರೀತಿ ಈ ವರ್ಷವು ತಾವು ಬೆಳೆದ 22 ಟನ್ ಕಬ್ಬನ್ನು ಜನೆವರಿ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗೆ ಪೂರೈಕೆ ಮಾಡಿದ್ದಾರೆ. ಮುಂಗಡವಾಗಿ 15 ಸಾವಿರ ರೂಪಾಯಿ ನೀಡಿದ್ದನು ಹೊರತು ಪಡಿಸಿದ್ರೆ. ಸಕ್ಕರೆ ಕಾರ್ಖಾನೆ ಈ ವರೆಗೆ ಉಳಿದ ಬಾಕಿ ಹಣವನ್ನು ಪಾವತಿಸುತ್ತಿಲ್ಲ. ರೈತರ ಜತೆಗೆ ಸೇರಿ ಕುಟುಂಬದ ಸದಸ್ಯರು ಹಲವಾರು ಬಾರಿ ಕಾರ್ಖಾನೆಗೆ ಮನವಿ ಮಾಡಿದ್ರು ಯಾವುದೇ ಪ್ರಯೋಜವಾಗಿಲ್ಲ. ಅನಿವಾರ್ಯವಾಗಿ ವಿದ್ಯಾರ್ಥಿ ಆಕಾಶ ಲಂಗೊಟಿ ಅನಿವಾರ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದಾರೆ. ಆದರೇ ಪ್ರಧಾನಿಯಿಂದಲು ಯಾವುದೇ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲವಾದ್ರು. ಸ್ಥಳೀಯ ಆಡಳಿತ ಇದರ ಬಗ್ಗೆ ಯಾವುದೇ ಕ್ರಮ ಜರುಗಿಸೇ ಇರೋದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಇದು ಕೇವಲ ಆಕಾಶ ಲಂಗೊಟಿ ಕುಟುಂಬದ ಸಮಸ್ಯೆ ಮಾತ್ರವಲ್ಲ. ಇಡೀ ಬೆಳಗಾವಿ ಜಿಲ್ಲೆಯಾದ್ಯಂತ ಇರುವ 22 ಸಕ್ಕರೆ ಕಾರ್ಖಾನೆಗಳು ರೈತರ ಬಾಕಿ ಹಣ ನೀಡಬೇಕಿದೆ. ಇದನ್ನು ಜಿಲ್ಲಾಢಳಿತ ಗಂಭೀರವಾಗಿ ಪರಿಗಣಿಸುವ ಮೂಲಕ ಬಾಕಿ ವಸೂಲಿಗೆ ಕ್ರಮ ಜರುಗಿಸಬೇಕು. ಈ ಮೂಲಕ ರೈತರ ಕುಟುಂಬಗಳ ಆತ್ಮಹತ್ಯೆಗೆ ಕಡಿವಾಣ ಹಾಕುವ ಅಶ್ಯಕತೆ ಇದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *