.ಬೆಚ್ಚಿಬಿದ್ದ ಪೋಲೀಸರು…!
ಬೆಳಗಾವಿ-
ಬೆಳಗಾವಿಯ ಪೊಲೀಸ್ ಕ್ವಾಟರ್ಸ್ ಗೆ ಇಂದು ಬೆಳ್ಳಂಬೆಳಿಗ್ಗೆ ವಿಶೇಷ ಅತಿಥಿ ಆಗಮಿಸಿದ್ದು, ಒಂದು ಕ್ಷಣ ಪೋಲಿಸರು ಮತ್ತು ಕುಟುಂಬ ಸ್ಥರು ಗಾಬರಿಗೊಂಡು ಕಕ್ಕಾಬಿಕ್ಕಿಯಾದ್ರು. ಬೆಳಗಾವಿ ನಗರದಲ್ಲಿ ಪೊಲೀಸರ ಕ್ವಾಟರ್ಸ್ ನಲ್ಲಿ ಅತಿಥಿಯಾಗಿ ಬಂದ ದೊಡ್ಡ ಹಾವು ಪ್ರತ್ಯೆಕ್ಷವಾಗಿದೆ. ಇದರಿಂದ ಬೆಚ್ಚಿ ಬಿದ್ದ ಪೊಲೀಸ್ ಕುಟುಂಬಗಳು ಮಕ್ಕಳ ಸಮೇತ ಹೋರಗಡೆ ಬಂದು ಚಿರಾಡತೋಡಗಿದ್ರು. ಈ ಕ್ವಾರ್ಟರ್ಸ್ ನಲ್ಲಿ ಆಗಾಗ ಹಾವು ಚೇಳುಗಳ ಕಾಟ ಹೆಚ್ಚಾಗಿದ್ದು, ಕಳೆದ ಒಂದು ವಾರದ ಹಿಂದೆಯಷ್ಟೆ ಕ್ವಾಟರ್ಸ್ ನಲ್ಲಿ ಹಾವು ಕಾಣಿಸಿಕೊಂಡಿತ್ತು. ಕಮಿಷನರ್ ಕಚೇರಿಯ ಬಳಿ ಇರುವ ಕ್ವಾಟರ್ಸ್ ನಂಬರ ೭ ರಲ್ಲಿ ಈ ದೊಡ್ಡ ಹಾವು ಕಾಣಿಸಿಕೊಂಡಿದ್ದು. ತಕ್ಷಣ ಉರಗ ತಜ್ಞ ಆನಂದ ಚಿಟ್ಟಿಗೆ ಪೋನ ಮಾಡಿದ್ರು. ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಆನಂದ ಚಿಟ್ಟಿ ಸುಮಾರು ೬ ಅಡಿ ಇರುವ ಕ್ಯಾರಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟದ್ದರಿಂದ ಪೊಲಿಸರು ನೆಮ್ಮದಿಯ ನಿಟ್ಡುಸಿರು ಬಿಟ್ರು. ಕ್ವಾಟರ್ಸ್ ಸುತ್ತಲೂ ಹುಲ್ಲು ಬೆಳೆದಿದ್ದು ಸ್ವಚ್ಚತೆ ಮರಿಚಿಕೆಯಾಗಿದೆ. ಹಾಗೂ ಇವು ತುಂಬಾ ಹಳೆಯ ಕ್ವಾಟರ್ಸ್ ಇರುವುದರಿಂದ ಈ ರೀತಿ ಪದೆ ಪದೆ ಹಾವು ಚೋಳುಗಳು ಆಗಮಿಸಿ ಪೊಲಿಸರಿಗೆ ಕಾಟ ಕೊಡುತ್ತಿದೆ. ಇನ್ನಾದರು ಕ್ವಾಟರ್ಸ್ ಸ್ವಚ್ಚತೆ ಬಗ್ಗೆ ಬೆಳಗಾವಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ.
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …