ಬೆಳಗಾವಿ- ಜಿಲ್ಲಾಡಳಿತ ಜಿಲ್ಲೆಯಲ್ಲಿ ಪಿ ಓ ಪಿ ಗಣೇಶ ಮೂರ್ತಿಗಳನ್ನು ನಿಷೇಧ ಮಾಡಿರುವದರಿಂದ ಮೂರ್ತಿಕಾರರಿಗೆ ತೊಂದರೆ ಆಗಿದ್ದು ಇದೊಂದು ಬಾರಿ ಪಿ ಓ ಪಿ ಗಣೇಶ ಮೂರ್ತಿಗಳನ್ನು ತಯಾರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ನೂರಾರು ಜನ ಮೂರ್ತಿಕಾರರು ಪ್ರತಿಭಟನೆ ನಡೆಸಿದರು
ನಗರದ ಶಿವಾಜಿ ಉದ್ಯಾನವನದಿಂದ ಬೃಹತ್ತ ಪ್ರತಿಭಟನಾ ರ್ಯಾಲಿ ಹೊರಡಿಸಿದ ಮೂರ್ತಿಕಾರರ ಹೋರಾಟದಲ್ಲಿ ಶಾಸಕ ಸಂಬಾಜಿ ಪಾಟೀಲ ,ಸಂಜಯ ಪಾಟೀಲ,ಅಭಯ ಪಾಟೀಲ ಪ್ರಕಾಶ ಶಿರೋಡ್ಕರ್ ಮತ್ತು ಶ್ರೀರಾಮ ಸೇನೆಯ ರಾಮಾಕಾಂತ ಕುಂಡಸ್ಕರ್ ಭಾಗವಹಿಸಿದ್ದರು
ಶಿವಾಜಿ ಗಾರ್ಡನ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಿದ ಮೂರ್ತಿಕಾರರು ಪಿ ಓ ಪಿ ಗಣೇಶ ಮೂರ್ತಿಗಳ ನಿಷೇಧದಿಂದ ತೊಂದರೆ ಆಗುತ್ತಿದೆ ಬೆಳಗಾವಿಯಲ್ಲಿ ನದಿ ಅಥವಾ ಸಮುದ್ರದಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡುವದಿಲ್ಲ ,ಇಲ್ಲಿ ಕೃತಕ ಹೊಂಡ ಮತ್ತು ಕುಂಡಗಳಲ್ಲಿ ಮೂರ್ತಿ ವಿಸರ್ಜನೆ ಮಾಡುವದರಿರಿಂದ ಪರಿಸರ ಮಾಲಿನ್ಯ ಆಗುವುದಿಲ್ಲ ಅದಕ್ಕಾಗಿ ಜಿಲ್ಲಾಡಳಿತ ಇದೊಂದು ಬಾರಿ ಪಿ ಓ ಪಿ ಗಣಪ ಮೂರ್ತಿಗಳ ತಯಾರಿಕೆಗೆ ಅವಕಾಶ ನೀಡುವಂತೆ ಕೋರಲಾಯಿತು
