Breaking News

ಪ್ರಭಾಕರ ಕೋರೆ, ರಾಜ್ಯಪಾಲ ಆಗೋದು ಬಹುತೇಕ ಖಚಿತ

ಬೆಳಗಾವಿ-ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ, ಕೆ.ಎಲ್ ಇ ಕಾರ್ಯಾಧ್ಕಕ್ಷರಾದ ಡಾ. ಪ್ರಭಾಕರ ಕೋರೆ ಅವರು ರಾಜ್ಯಪಾಲರಾಗಿ ನೇಮಕ ಆಗೋದು ಬಹುತೇಕ ಖಚಿತವಾಗಿದೆ.ಭಾರತ-ಪಾಕ್ ಮಧ್ಯೆ ಕದನ ಆರಂಭವಾಗದಿದ್ದರೆ ಇಷ್ಟೊತ್ತಿಗಾಗಲೇ ರಾಷ್ಟ್ರಪತಿಗಳಿಂದ ಆದೇಶ ಹೊರಬಿದ್ದು ಕೋರೆಯವರು ತಮ್ಮ ರಾಜಕೀಯ ಜೀವನದ 2ನೇ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಈಗ ಭಾರತ -ಪಾಕ್ ಮಧ್ಯೆ ಕದನ ವಿರಾಮ ಘೋಷಣೆ ಆಗಿದ್ದು, ಎರಡು ದಿನಗಳಲ್ಲಿ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಬಿಜೆಪಿಯಲ್ಲಿ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕರಾದ
ಪ್ರಭಾಕರ ಕೋರೆ ಅವರಿಗೆ ಮಹತವದ ಹುದ್ದೆ ನೀಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ.
1947 ಆಗಸ್ಟ್ 01ರಂದು ಅಂಕಲಿಯಲ್ಲಿ ಬಸವಪ್ರಭು-ಶಾರದಾದೇವಿ ದಂಪತಿಯ ಉದರದಲ್ಲಿ ಜನಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕೋರೆಯವರು ಶಿಕ್ಷಣ, ವೃದ್ಯಕೀಯ, ಸಹಕಾರ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾರೆ.
ತಮ್ಮ ಕಾರ್ಯತತ್ಪರತೆ, ಸಂಘಟನಾ ಚಾತುರ್ಯದಿಂದ
ಕೆ.ಎಲ್.ಇ ಸಂಸ್ಥೆಯನ್ನು ಹಳ್ಳಿಯಿಂದ ದಿಲ್ಲಿಗೆ, ದಿಲ್ಲಿಯಿಂದ ದುಬೈ ವರೆಗೆ ವಿಸ್ತರಿಸಿದ ಕೀರ್ತೀ ಡಾ. ಪ್ರಭಾಕರ್ ಕೋರೆ ಅವರಿಗೆ ಸಲ್ಲುತ್ತದೆ.
1984ರಲ್ಲಿ ಕೆ. ಎಲ್. ಇ ಕಾರ್ಯುಧ್ಯಕ್ಷರಾಗಿ ಕೋರೆ ಅವರು ಅಧಿಕಾರ ವಹಿಸಿಕೊಂಡಾಗ 38 ಅಂಗ ಸಂಸ್ಥೆಗಳನ್ನು ಹೊಂದಿತ್ತು. ಕೋರೆಯವರ ಪರಿಶ್ರಮದ ಫಲವಾಗಿ ಕೆ. ಎಲ್. ಇ ಈಗ 300 ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿದ್ದು ದುಬೈ ಸೇರಿದಂತೆ ವಿವಿಧ ದೇಶಗಳಲ್ಲಿ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿದೆ.
ರಾಜಕೀಯ ರಂಗದಲ್ಲೂ ತನ್ನದೇ ಆದ ಛಾಪು ಮೂಡಿಸಿರುವ ಕೋರೆ ಅವರು ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.
ಬಿಜೆಪಿಯ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕರಾಗಿ ಗುರುತಿಸಿಕೊಂಡಿರುವ ಕೋರೆಯವರಿಗೆ ಮಹತ್ವ ಹುದ್ದೆ ನೀಡುವ ಮೂಲಕ ಲಿಂಗಾಯತ ಮತಗಳ ಮತಗಳನ್ನು ಸೆಳೆಯುವ ಲೆಕ್ಕಾಚಾರ ಬಿಜೆಪಿ ವರಿಷ್ಠರದ್ದಾಗಿದೆ.

ಲಿಂಗಾಯತ ಸಮಾಜದ ಹಿರಿಯಣ್ಣ

ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕರಾಗಿರುವ ಡಾ. ಪ್ರಭಾಕರ ಕೋರೆ ಅವರು ರಾಜಕೀಯ ರಂಗದಲ್ಲಿ ಪ್ರಭಾವ ಹೊಂದಿದ್ದಾರೆ.ಲಿಂಗಾಯತ ಸಮಾಜದ ಒಳಪಂಗಡಗಳು ಒಂದಾಗಿ ಸಮಾಜ ಒಗ್ಗಟ್ಟಾಗಬೇಕು ಎನ್ನುವ ಕಳಕಳಿಹೊಂದಿರುವ ಕೋರೆಯವರು ಕೆಎಲ್ಇ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ್ದಾರೆ. ಶಿಕ್ಷಣ ಮತ್ತು ವೈದ್ಯಕೀಯ ಕ್ಷೃತ್ರದಲ್ಲಿ ಕ್ರಾಂತಿ ಮಾಡಿರುವ ಪ್ರಭಾಕರ ಕೋರೆ ಅವರು ಗೋವಾ ರಾಜ್ಯದ ರಾಜ್ಯಪಾಲರಾಗಿ ನೇಮಕ ಆಗೋದು ಖಚಿತ ಎನ್ನುವ ಮಾಹಿತಿ ಬೆಳಗಾವಿ ಸುದ್ದಿಗೆ ಲಭಿಸಿದೆ

ದಾಸೋಹಿ ಪ್ರಭಾಕರ್

ಡಾ ಪ್ರಭಾಕರ್ ಕೋರೆ ಅವರು ಬಸವ ಭಕ್ತರಾಗಿದ್ದು ದಾಸೋಹಿಯಾಗಿದ್ದಾರೆ. ತಾವು ಮಾಡುವ ಸೇವೆಗೆ ಪ್ರಚಾರ ಬಯಸದೇ ಸದ್ದಿಲ್ಲದೇ ಅನೇಕ ಕಡೆಗಳಲ್ಲಿ ದಾಸೋಹ ಮಾಡ್ತಾರೆ. ಇತ್ತೀಚಿಗೆ ಬೆಳಗಾವಿಯಲ್ಲಿ ಇದೇ ಮೊದಲಬಾರಿಗೆ ಜಗಜ್ಯೋತಿ ಬಸವೇಶ್ವರರ ಜಯಂತಿಯಲ್ಲಿ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳನ್ನು ಒಟ್ಟಿಗೆ ಸೇರಿಸಿ ಜಯಂತಿಯಲ್ಲಿ ಪಾಲ್ಗೊಂಡ ಸಹಸ್ರಾರು ಜನರಿಗೆ ಡಾ.ಪ್ರಭಾಕರ್ ಕೋರೆ ದಾಸೋಹ ವ್ಯವಸ್ಥೆ ಮಾಡಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.ಬೆಳಗಾವಿಯ ಕನ್ನಡ ಸಾಹಿತ್ಯ ಸಮ್ಮೇಳನ, ಬೆಳಗಾವಿಯಲ್ಲಿ ನಡೆದ ಪ್ರಥಮ ವಿಧಾನಮಂಡಲದ ಅಧಿವೇಶನ, ವಿಶ್ವಕನ್ನಡ ಸಮ್ಮೇಳನ ಸೇರಿದಂತೆ ಬೆಳಗಾವಿಯಲ್ಲಿ ನಡೆದ ಅನೇಕ ಐತಿಹಾಸಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ ಕೀರ್ತಿ ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ.

Check Also

ಹಿಂದೂಸ್ತಾನದ, ಆಪರೇಷನ್ ಸಿಂಧೂರ್ ದಾಳಿಯಿಂದ ಪಾಕಿಸ್ತಾನ ದಿವಾಳಿ….

:ನಿನ್ನೆಯಷ್ಟೇ ನಡೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಇಂದು ಬೆಳಗ್ಗೆಯಿಂದ ಮತ್ತೆ ಸೈರನ್ ಮೊಳಗುತ್ತಿದ್ದು, ಲಾಹೋರ್ …

Leave a Reply

Your email address will not be published. Required fields are marked *