ಬೆಳಗಾವಿ- ಪಕ್ಷದ ವರಿಷ್ಠರು ಸೂಚಿಸಿದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ದ ಟಿಕೆಟ್ ಕೊಟ್ರೆ ನಿಲ್ತೀನಿ ..ಗೆಲ್ತೀನಿ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ
ಭಾನುವಾರ ಬೆಳಗಾವಿಯಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ಕೊಡಲು ಪಕ್ಷದ ವರಿಷ್ಠರಿಗೆ ಕೇಳಿದ್ದೇನೆ. ಅವರು ಯಾರಿಗೆ ಕೊಡುತ್ತಾರೆ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಒಂದು ವೇಳೆ ನನಗೆ ನೀಡಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ದನಾಗಿದ್ದೇನೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಸುರೇಶ ಅಂಗಡಿ ಅವರೇ ಸ್ಪರ್ಧಿಸಲಿದ್ದಾರೆ. ಕೇಂದ್ರ ಸರಕಾರದ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಮಾಡಿರುವ ಅವರು ಈ ಸಲದ ಚುನಾವಣೆಯಲ್ಲಿಯೂ ಗೆಲವು ಸಾಧಿಸಲಿದ್ದಾರೆ ಅವರನ್ನು ಬದಲಾಯಿಸುವ ಪ್ರಸ್ತಾವನೆ ಇಲ್ಲ ಎಂದರು
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಮಂಡಿಸಿದ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ. ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಪ್ರಧಾನಿಯಾಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ನವರು ಪ್ರಧಾನಿ ಮೋದಿ ನನ್ನ ಬಜೆಟ್ ಕಾಫಿ ಮಾಡಿದ್ದಾರೆ ಎಂದು ಹೇಳುವ ಮುನ್ನ ನೋಡಿಕೊಂಡು ಮಾತನಾಡಬೇಕು. ಹಾಗೆ ಹೇಳಿಕೆ ನೀಡುವ ಅವರಿಗೆ ಶೋಭೆ ತರುವುದಲ್ಲ ಎಂದರು.
ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಜಗಳ ಆರಂಭವಾಗಿದೆ ಈ ಜಗಳ ರಾಜಿ ಮೂಲಕ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ ಗಂಡ ಹೆಂಡಿರ ಜಗಳದಂತಿರುವ ಸಮ್ಮಿಶ್ರ ಸರ್ಕಾರದ ಜಗಳ ಅಂತ್ಯ ಕಾಣಲು ಡೈವಸ್೯ ಒಂದೇ ಪರಿಹಾರ ಈ ಡೈವೋರ್ಸ
ಯಾವಗ ಆಗುತ್ತದೆ ಎನ್ನುವುದು ಹೇಳಲು ಸಾಧ್ಯವಿಲ್ಲ. ಬಿಜೆಪಿಯಿಂದ ಆಪರೇಷನ್ ಮಾಡುತ್ತಿಲ್ಲ. ಕುಮಾರಸ್ವಾಮಿ ಸರಕಾರದ ಶಾಸಕರ ಕಿತ್ತಾಟದಿಂದ ಸರಕಾರ ಪಥನವಾಗಲಿದೆ ಎಂದು ಹೇಳಿದರು.
ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ರಾಜಕಾರಣ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ ಈ ಬಾರಿಯೂ ಅರ್ಕಾರದ ಅಳಿವು ಮತ್ತು ಹೊಸ ಸರ್ಕಾರದ ರಚನೆಯಲ್ಲಿ ಬೆಳಗಾವಿ ರಾಜಕಾರಣ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಭಾಕರ ಕೋರೆ ರಾಜ್ಯ ಸರ್ಕಾರ ಪತನಗೊಳ್ಳುವ ಮುನ್ಸೂಚನೆ ನೀಡಿದರು