ಕೆಎಲ್ಇ ಗೂ ಚುನಾವಣೆಗೂ ಸಂಬಂಧವಿಲ್ಲ -ಕೋರೆ

ಬೆಳಗಾವಿ ಸುದ್ದಿ:

*ಬೆಳಗಾವಿ:-* ಮಾಜಿ ಸಚಿವ ರೆಬಲ್ ನಾಯಕ ರಮೇಶ್ ಜಾರಕಿಹೋಳಿ ಅವರಿಗೆ ಬಿಜೆಪಿಯ ಪರವಾಗಿ ಆಸಕ್ತಿ ಇದೆ ಈಗಾಗಲೇ ರಮೇಶ್ ಬೆಂಬಲಿತ ಕಾರ್ಯಕರ್ತರು ಬಿಜೆಪಿ ಜೋತೆ ಕೈ ಜೋಡಿಸಿ ಪಕ್ಷಕ್ಕಾಗಿ ಕೆಲಸಮಾಡುತ್ತಿದ್ದಾರೆ ಎಂದುರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಬೆಳಗಾವಿಯಲ್ಲಿ ಹೋಸ ಬಾಂಬ್ ಸಿಡಿಸುವುದರೋಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿಟ್ಟಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಕೋರೆ ಅವರು ನಾನು ಸುರೇಶ್ ಅಂಗಡಿ ಜೋಡೆತ್ತುಗಳಿದ್ದಂತೆ ನಮ್ಮ ಪಕ್ಷದ ಅಭ್ಯರ್ಥಿ ಅಂಗಡಿಯವರು ನಾಮಪತ್ರ ಸಲ್ಲಿಸಿದ ದಿನವೇ ಪುನ್ಹ ಮತ್ತೋಮ್ಮೇ ಸಂಸದರಾಗಿದ್ದಾರೆ ಎನ್ನುವ ಮೂಲಕ ಅಂಗಡಿಯವರು ಮತ್ತೇ ಸಂಸದರಾಗುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಬರುವ 18ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿಗೆ ಆಗಮಿಸಿ ಮತದಾರರನ್ನುದ್ದೆಶಿಸಿ ಭಾಷಣ ಮಾಡುವವರಿದ್ದಾರೆ ಎಂದು ಹೇಳಿದ್ದಲ್ಲದೆ ಅಂಗಡಿಯವರ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ವ್ಹಿ ಎಸ್ ಸಾಧುನವರ ಅವರು ಕೂಡಾ ಕೆ ಎಲ್ ಇ ಸಂಸ್ಥೆಯ ನಿರ್ದೇಶಕರಾಗಿದ್ದಾರೆ ಹಾಗಂತ ಈ ಲೋಕಸಭಾ ಚುನಾವಣೆಗೂ ಹಾಗೂ ನಮ್ಮ ಕೆ ಎಲ್ ಇ ಸಂಸ್ಥೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಮೇಲಾಗಿ ಅವರ ಪಕ್ಷದ ಸಿದ್ದಾಂತವೇ ಬೇರೆಯಾಗಿದೆ ಬಿಜೆಪಿ ಪಕ್ಷದ ಸಿದ್ದಾಂತಗಳು ವಿಭಿನ್ನವಾಗಿವೆ ಹಾಗೂ ಮುಖ್ಯವಾಗಿ ವಿಚಾರಗಳು ಸಹ ಬೇರೆ ಇವೆ ಎಂದು ಹೇಳಿದರು.
ಈ ಮೂಲಕ ಕೋರೆಯವರು ಕೆ ಎಲ್ ಇ ಗೂ ಹಾಗೂ ಲೋಕಸಭಾ ಚುನಾವಣೆಗೂ ಯಾವುದೇ ನಂಟಿಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದಾರೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *