Breaking News

ಪ್ರಭಾಕರ ಕೋರೆ ನೇತ್ರತ್ವದಲ್ಲಿ ಗೋಕಾಕಿನಲ್ಲಿ ಲಿಂಗಾಯತ ಸಮಾಜದ ಮುಖಂಡರ ಸಭೆ

ಪ್ರಭಾಕರ ಕೋರೆ ನೇತ್ರತ್ವದಲ್ಲಿ ಗೋಕಾಕಿನಲ್ಲಿ ಲಿಂಗಾಯತ ಸಮಾಜದ ಮುಖಂಡರ ಸಭೆ

ಬೆಳಗಾವಿ-ಗೋಕಾಕ್ ಉಪಚುನಾವಣೆ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ ಪ್ರಭಾಕರ ಕೋರೆ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಭೆ ನಡೆಯುತ್ತಿದೆ

ಗೋಕಾಕ್‌ನಲ್ಲಿ ಲಿಂಗಾಯತ ಮತ ಸೆಳೆಯಲು ಬಿಜೆಪಿ ಕಸರತ್ತು ನಡೆಸಿದ್ದು ಬೆಳಗಾವಿ ಪ್ರಮುಖ ಲಿಂಗಾಯತ ನಾಯಕರು, ಮುಖಂಡರು ಸಭೆಯಲ್ಲಿ ಉಪಸ್ಥಿತಿತರಿದ್ದಾರೆ

ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌
ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾಜಿ ಶಾಸಕ ವಿಶ್ವನಾಥ ಪಾಟೀಲ್, ಶಾಸಕ ಆನಂದ ಮಾಮನಿ ಭಾಗಿಯಾಗಿದ್ದಾರೆ

ಗೋಕಾಕ ತಾಲೂಕಿನ ಎಲ್ಲಾ ಲಿಂಗಾಯತ ಸಮಾಜದವರನ್ನು ಕರೆದು ಸಭೆ ಮಾಡುತ್ತಿರುವ ನಾಯಕರು ಗೋಕಾಕ್ ನಗರದ ಕೆ‌ಎಲ್‌ಇ ಸಂಸ್ಥೆಯ ಮಹಾದೇವಪ್ಪಣ್ಣ ಮುನವಳ್ಳಿ ಶಾಲೆಯ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಗೋಕಾಕ್ ಕ್ಷೇತ್ರದ ಪ್ರಮುಖ ಲಿಂಗಾಯತ ಸಮಾಜದ ಮುಖಂಡರು ಭಾಗಿಯಾಗಿದ್ದಾರೆ.

ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ ಲಿಂಗಾಯತ ಸಮುದಾಯ ಎಲ್ಲ ವರ್ಗದ ನಾಯಕರನ್ನು ಪೋಷಿಸಿ ಬೆಳೆಸಿದೆ,ರಮೇಶ್ ಜಾರಕಿಹೊಳಿ ಸರಳ ಸ್ವಭಾವದವರು ಯಡಿಯೂರಪ್ಪನವರ ಕೈ ಬಲ ಪಡಿಸಲು ನಿಮ್ಮ ಮತವನ್ನು ಬಿಜೆಪಿಗೆ ನೀಡಬೇಕು ಎಂದು ಮತಯಾಚಿಸಿದರು

ಗೋಕಾಕಿನಲ್ಲಿ ಕೆ ಎಲ್ ಇ ಸಂಸ್ಥೆಯ ಸಭಾಂಗಣದಲ್ಲಿ ನಡೆಯುತ್ತಿರುವ ಈ ಸಭೆ ಎಲ್ಲರ ಗಮನ ಸೆಳೆದಿದೆ.

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *