ಬೆಳಗಾವಿ- ಅಮೇರಿಕಾ ಫಿಲಾಡೆಲ್ಪಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ ಮೊದಲನೇಯ ಬಾರಿಗೆ ಭಾರತೀಯ ಸಾಧಕನಿಗೆ ಗೌರವ ಡಾಕ್ಟರೇಟ್ ನೀಡುತ್ತಿದ್ದು ಈ ವಿಶೇಷ ಗೌರವಕ್ಕೆ ಕೆಎಲ್ಇ ಸಂಸ್ಥೆಯ ಅಷ್ಠ ಋಷಿ ಡಾ ಪ್ರಭಾಕರ ಕೋರೆ ಪಾತ್ರರಾಗಿದ್ದಾರೆ
ರಾಜ್ಯಸಭಾ ಸದಸ್ಯ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಗೆ ಶಿಕ್ಷಣ, ಆರೋಗ್ಯ ಸೇವೆ, ವೈದ್ಯಕೀಯ ಸಂಶೋಧನೆಗಳ ಅಂತಾರಾಷ್ಟ್ರೀಯ ಸಹಯೋಗಗಳನ್ನು ಸಾಧಿಸಿ ಘೋಷಿಸಿದ ಸಾಧನೆಗಳಿಗಾಗಿ ಅಮೇರಿಕಾದ ಫಿಲಾಡೆಲ್ಪಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ ಮೇ.20 ರಂದು ಜೆಫರ್ಸನ್ ವಿವಿ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರಧಾನ ಮಾಡಲಿದ್ದಾರೆ ಎಂದು ಕೆಎಲ್ಇ ವಿವಿಯ ಉಪಕುಲಪತಿ ವಿವೇಕ ಸಾವೋಜಿ ಹೇಳಿದರು.
ದೇಶದಲ್ಲಿ ವಿವಿಧ ಭಾಗಗಳಲ್ಲಿ ಶಿಕ್ಷಣ, ವೈದ್ಯಕೀಯ ಸೇವೆ ಹಾಗೂ ಸಂಶೋಧನೆಗಳ ಮೂಲಕ ಸಮಾಜದ ಉನ್ನತೀಕರಣಕ್ಕಾಗಿ ಸಲ್ಲಿಸಿದ ಸೇವೆಗಳನ್ನು ಗುರುತಿಸಿ ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಈ ಪ್ರತಿಷ್ಟಿತ ಗೌರವ ದೊರೆತಿರುವುದು ಹೆಮ್ಮೆಯ ಸಂಗತಿ. ಅಮೇರಿಕೆಯ ಪ್ರತಿಷ್ಠಿತ ವಿದ್ಯಾಲಯಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಥಾಮಸ್ ಜೆಫರ್ಸನ್ ವಿವಿ ಈ ಗೌರವ ನೀಡುತ್ತಿರುವುದು ವಿಶೇಷವಾಗಿದೆ ಎಂದರು.
ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆ್ಯಂಡ್ ರಿಸಚ್೯ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ವಿವಿ ಹಾಗೂ ಸಂಸ್ಥೆಗಳೊಂದಿಗೆ ಹಲವಾರು ಸಹಯೋಗಗಳನ್ನು ಸ್ಥಾಪಿಸಿದೆ. ಅಮೇರಿಕಾ್ ಫಿಲಡೆಲ್ಫಿಯಾದ ಥಾಮಸ್ ಜೆಫರ್ಸನ್ ವಿವಿಯೊಂದಿಗೆ ಹೊಂದಿರುವ ಸಹಯೋಗ ದೀರ್ಘಕಾಲದ ಅರ್ಥಪೂರ್ಣ ಸಹಯೋಗವಾಗಿದೆ. ಈ ವಿದ್ಯಾಲಯ ಹಾಗೂ ಕೆಎಲ್ಇ ಜಂಟಿಯಾಗಿ ನಿರ್ವಹಿಸುತ್ತಿರುವ ಕೇಂದ್ರಿಕರಿಸಿದೆ ಎಂದರು.
ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಆಫ್ ಸೈನ್ಸ್ ಪದವಿ ಪಡೆದವರಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಲೆಕ್ಸ್ ಗೊರಸ್ಕಿ ಸೇರಿದಂತೆ ಮೂವರಿಗೆ ಡಾಕ್ಟರೇಟ್ ಆಫ್ ಸೈನ್ಸ್ ಗೌರವ ಪ್ರಧಾನ ಮಾಡಿದ್ದಾರೆ. ಈಗ ಆ ಸಾಲಿನಲ್ಲಿ ಡಾ. ಪ್ರಭಾಕರ ಕೋರೆ ಅವರಿಗೆ ಡಾಕ್ಟರೇಟ್ ಆಫ್ ಸೈನ್ಸ್ ಗೌರವ ನೀಡುತ್ತಿರುವುದು ದೇಶದ ಹೆಮ್ಮೆಯ ಸಂಗತಿ ಎಂದರು.