ಬೆಳಗಾವಿ- ವೈದ್ಯಕೀಯ ಕ್ಷೇತ್ರದಲ್ಲಿ ಜಾಗತಿಕ ಖ್ಯಾತಿ ಗಳಿಸಿರುವ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆಯ ಚಿಕಿತ್ಸೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡ ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಆಸ್ಪತ್ರೆಯ ವಿರುದ್ದ ಆತಂಕಕಾರಿ ಆರೋಪ ಮಾಡಿದ್ದಾರೆ
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಮುನವಳ್ಳಿ ಮೂತ್ರಪಿಂಡದ ತೊಂದರೆ ನಿವಾರಣೆಗೆ ಚಿಕಿತ್ಸೆ ಪಡೆಯಲು ಕೆಎಲ್ಇ ಆಸ್ಪತ್ರೆಗೆ ದಾಖಲಾದ ತಮಗೆ ರೋಗವಿಲ್ಲದಿದ್ದರೂ ಭಯಪಡಿಸಿ ಶಸ್ತ್ರ ಚಿಕಿತ್ಸೆ ಮಾಡಿ ತಮ್ಮ ಮೂತ್ರಪಿಂಡ (ಕಿಡ್ನಿ) ಬೇರೊಬ್ಬ ರೋಗಿಗೆ ಅಳವಡಿಸಿದ್ದಾರೆ ಕೆಎಲ್ಇ ಆಸ್ಪತ್ರೆಯಲ್ಲಿ ಕಳ್ಳ ವೈದ್ಯರಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡಿದ್ದಾರೆ
ಕೆಎಲ್ಇ ವೈದ್ಯರಾದ ಡಾ ಸಿದ್ಧಲಿಂಗೇಶ್ವರ ನೀಲಿ ಮತ್ತು ಡಾ ಮಲ್ಲಿಕಾರ್ಜುನ ಕರಿಶಟ್ಟಿ ( ಖಾನಪೇಟ) ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಡಾ ಜಾಲಿ ಸೇರಿಕೊಂಡು ತಮಗೆ ರೋಗವಿಲ್ಲದಿದ್ದರೂ ಶಸ್ತ್ರ ಚಿಕಿತ್ಸೆ ಮಾಡಿ ತಮ್ಮ ಕಿಡ್ನಿಯನ್ನು ಮತ್ತೊಬ್ಬ ರೋಗಿಗೆ ಕಸಿ ಮಾಡಿರಬಹುದು ಎನ್ನುವ ಅನುಮಾನ ನನಗಿದ್ದು ಈ ಪ್ರಕರಣದ ಕುರಿತು ಡಾ ಪ್ರಭಾಕರ ಕೋರೆ ಆಸ್ಪತ್ರೆಯ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ದಾಖಲು ಮಾಡುವದಾಗಿ ಶಂಕರ ಮುನವಳ್ಳಿ ತಿಳಿಸಿದ್ದಾರೆ
ಕೆಎಲ್ಇ ಯ ಡಾ ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಕಳ್ಳ ವೈದ್ಯರು ತುಂಬಿಕೊಂಡಿದ್ದಾರೆ ಇಲ್ಲಿ ನುರಿತ ವೈದ್ಯರಿಲ್ಲ ಲಕ್ಷಾಂತರ ರೂ ಡೋನೇಶನ್ ಕೊಟ್ಟು ನಕಲು ಮಾಡಿ ಡಿಗ್ರಿ ಪಡೆದ ವೈದ್ಯರೇ ತುಂಬಿಕೊಂಡಿದ್ದು ರೋಗ ವಿಲ್ಲದಿದ್ದರೂ ರೋಗ ಇದೆ ಎಂದು ಬಡವರಿಗೆ ಹೆದರಿಸಿ ಬಡವರ ಸುಲಿಗೆ ನಡೆಯುತ್ತಿದ್ದು ಈ ಆಸ್ಪತ್ರೆಯಲ್ಲಿ ಸರ್ಕಾರದ ನಿಯಂತ್ರಣ ಇಲ್ಲವೇ ಇಲ್ಲ ಎಂದು ಶಂಕರ ಮುನವಳ್ಳಿ ಕಿಡಿಕಾರಿದ್ದಾರೆ
ಕೆಎಲ್ಇ ಆಸ್ಪತ್ರೆಯಲ್ಲಿ ತಾವು ದಾಖಲಾಗಿ ಶಸ್ತ್ರ ಚಿಕಿತ್ಸೆ ಪಡೆಯುತ್ತಿರುವಾಗ ನನಗೆ ಪ್ರಜ್ಞೆ ಇರುವಾಗ ಮಾಜಿ ಸಚಿವ ಶಿವಾನಂದ ಕೌಜಲಗಿ ಆಪರೇಶನ್ ಥೇಟರ್ ಗೆ ಬಂದು ನನ್ನ ಪಕ್ಕದ ರೋಗಿಗೆ ಭೇಟಿಯಾಗಿದ್ದರು ಕೆಎಲ್ಇ ಆಸ್ಪತ್ರೆಯ ಕಳ್ಳ ವೈದ್ಯರು ನನ್ನ ಮೂತ್ರಪಿಂಡ ತಗೆದು ಅದೇ ರೋಗಿಗೆ ಕಸಿ ಮಾಡಿರಬಹುದು ಎನ್ನುವ ಅನುಮಾನ ಬಂದಿದೆ ಏಕೆಂದರೆ ಈ ಕುರಿತು ಕೆಎಲ್ಇ ಆಸ್ಪತ್ರೆಯ ವೈದ್ಯರು ದಾಖಲೆ ನೀಡಿಲ್ಲ ಎನ್ನುವದು ಶಂಕರ ಮುನವಳ್ಳಿ ಅವರ ಆರೋಪವಾಗಿದೆ
ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ತಮ್ಮ ಪ್ರಭಾವ ಬೆಳೆಸಿ ಈ ಸುದ್ಧಿ ಮಾದ್ಯಮಗಳಲ್ಲಿ ಪ್ರಕಟವಾಗದಂತೆ ಮಾದ್ಯಮಗಳ ಮಾಲೀಕರ ಮೇಲೆ ಒತ್ತಡ ಹೇರಬಹುದು ಅದಕ್ಕಾಗಿ ಈ ಪ್ರಕರಣದ ಕುರಿತು ರಾಜಧಾನಿ ಬೆಂಗಳೂರಿನಲ್ಲಿ ಮತ್ತು ದೆಹಲಿಯಲ್ಲಿ ಮುಂದಿನವಾರ ಪತ್ರಿಕಾಗೋಷ್ಠಿ ಕರೆದ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕೆಎಲ್ಇ ಪ್ರಭಾಕರ ಕೋರೆ ಆಸ್ಪತ್ರೆಯ ಕಳ್ಳ ದಂಧೆಯನ್ನು ಬಯಲಿಗೆಳೆಯುತ್ತೇನೆ ಎಂದು ಶಂಕರ ಮುನವಳ್ಳಿ ಎಚ್ಚರಿಕೆ ನೀಡಿದ್ದಾರೆ
ಈ ಕುರಿತು ಬೆಳಗಾವಿ ಎಪಿಎಂಸಿ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದರೂ ಠಾಣೆಯ ಸಿಪಿಐ ಕಾಳಿಮಿರ್ಚಿ ದೂರು ದಾಖಲಿಸಿಕೊಳ್ಳಲಿಲ್ಲ ನಗರ ಪೋಲೀಸ್ ಆಯುಕ್ತ ಡಾ ರಾಜಪ್ಪ ಕೂಡಾ ಈ ಕುರಿತು ಕ್ರಮಕೈಗೊಳ್ಳಲಿಲ್ಲ ಇವರ ವಿರುದ್ಧವೂ ಹರಿಹಾಯ್ದ ಶಂಕರ ಮುನವಳ್ಳಿ ಡಾ ರಾಜಪ್ಪನವರ ಐಪಿಎಸ್ ಪದವಿಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಳ್ಳಲಿ ಎಂದು ಒತ್ತಾಯಿಸಿದರು
ದುಡ್ಡಿಗಿಂತ ಮಾನವೀಯತೆ ದೊಡ್ಡದು ಎಷ್ಟೇ ದುಡ್ಡು ಗಳಿಸಿದರೂ ಇಲ್ಲೇ ಬಿಟ್ಟು ಹೋಗಬೇಕು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ರೋಗದ ಭಯ ಹುಟ್ಟಿಸಿ ಅಮಾಯಕರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಬಡವರ ಶಾಪ ಅವರಿಗೆ ತಟ್ಟುತ್ತದೆ ಅವರು ನರಕಕ್ಕೆ ಹೋಗುತ್ತಾರೆ ಎಂದು ಶಂಕರ ಮುನವಳ್ಳಿ ಕೋರೆ ವಿರುದ್ಧ ಕಿಡಿ ಕಾರಿದ್ದಾರೆ