ಬಿಜೆಪಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಹೋಗಲು ಕತ್ತಿ ಸಾಹುಕಾರ್ ರೆಡಿ.ಬೆಳಗಾವಿಯಲ್ಲಿ ಗಡಿಬಿಡಿ….!!!!!
ಬೆಳಗಾವಿ – ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕಗ್ಗಂಟು ಬೆಳಗಾವಿ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ ಚಿಕ್ಕೋಡಿ ಪಾಲಿಟಿಕ್ಸ ಬೆಳವಣಿಗೆ ಮೇಲೆ ನಿಗಾ ಇಟ್ಟಿರುವ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಘೋಷಣೆಗೆ ತಡೆ ಹಿಡಿದಿದೆ
ಚಿಕ್ಕೋಡಿ ಕ್ಷೇತ್ರದಿಂದ ರಮೇಶ್ ಕತ್ತಿಗೆ ಟಿಕೆಟ್ ಕೊಡಬಾರ್ದು ಅಂತ RSS ಪಟ್ಟು ಹಿಡಿದಿರುವ ಹಿನ್ನಲೆಯಲ್ಲಿ ಕತ್ತಿ ಸಾಹುಕಾರ್ ಬಿಜೆಪಿ ವಿರುದ್ಧ ಸೆಡ್ಡು ಹೊಡೆದಿದ್ದಾರೆ
ಬಿಜೆಪಿ ಹಲಾವಾರು ರೀತಿಯ ಸಮೀಕ್ಷೆಗಳನ್ನು ಮಾಡಿದೆ ಎಲ್ಲ ಸಮೀಕ್ಷೆಗಳಲ್ಲಿ ನನ್ನ ಹೆಸರು ಆಗ್ರಸ್ಥಾನದಲ್ಲಿದೆ ಶೇ 97/; ರಷ್ಡು ಜನ ನನ್ನ ಪರವಾಗಿ ಓಟ್ ಮಾಡಿದ್ದಾರೆ ಮೇಜಾರ್ಟಿ ನನ್ನ ಪರವಾಗಿದೆ ಶೇ 3/: ರಷ್ಟು ಓಟ್ ಪಡೆದಿರುವ ಜೊಲ್ಲೆಗೆ ಟಿಕೆಟ್ ಕೊಡಲು RSS ಪ್ರಯತ್ನ ಮಾಡುತ್ತಿದೆ ಮೇರಿಟ್ ಆಧಾರದ ಮೇಲೆ ಟಿಕೆಟ್ ನನಗೆ ಸಿಗಬೇಕು ಅಂತಾ ವಾದ ಮಂಡಿಸಿದ್ದೇನೆ ಬಿಜೆಪಿ ವರಿಷ್ಠರ ನಿರ್ಧಾರ ಏನಾಗುತ್ತೆ ಅಂತಾ ಕಾಯ್ತಾ ಇದ್ದೇನೆ ಅವರ ನಿರ್ಧಾರ ಪ್ರಕಟ ಆದ ನಂತರ ನನ್ನ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ರಮೇಶ್ ಸಾಹುಕಾರ್ ಬೆಳಗಾವಿ ಸುದ್ಧಿಗೆ ಮಾಹಿತಿ ನೀಡಿದ್ದಾರೆ
ಒಂದು ವೇಳೆ ರಮೇಶ್ ಕತ್ತಿಗೆ ಟಿಕೆಟ್ ನೀಡಲು ಬಿಜೆಪಿ ಹಿಂದೇಟು ಹಾಕಿದಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ರಮೇಶ್ ಕತ್ತಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟು ಪ್ರಕಾಶ ಹುಕ್ಕೇರಿ ಮೀಸೆ ಮಾವನನ್ನು ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದ್ದು ಸಾಧುನವರ ಅವರ ಹೆಸರು ಘೋಷಣೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ ಎಂದು ತಿಳಿದು ಬಂದಿದೆ
ಚಿಕ್ಕೋಡಿಯಿಂದ ಕತ್ತಿ ಸಾಹುಕಾರ್ ಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಕೆಎಲ್ಇ ಗಡಗಡ ಆದ್ರೆ ಕೋರೆ ಸಾಹುಕಾರ್ ಗೆ ಕತ್ತಿ ಸಹೋದರರು ಕ್ಯಾರೆ ಎನ್ನುವ ಕಾಲ ಈಗ ಕೂಡಿ ಬಂದಿದ್ದು ಕತ್ತಿಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಇವರು ಕೋರೆ ವಿರುದ್ಧ ಬಿಜೆಪಿ ವಿರುದ್ಧ ಬಂಡಾಯ ಏಳುವ ಸಾಧ್ಯತೆ ಇದೆ
ಕತ್ತಿ ಸಾಹುಕಾರ್ ಅವರಿಗೆ ಬಿಜೆಪಿ ಕೈ ಕೊಟ್ಟರೆ ಕತ್ತಿ ಗ್ಯಾಂಗ್ ಕೆಎಲ್ಇ ಗೆ ಲಗ್ಗೆ ಇಡೋದು ಗ್ಯಾರಂಟಿ