Breaking News

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕಾಶ ಅಂಬೇಡ್ಕರ್ ಟೀಕಾ ಪ್ರಹಾರ.

ಬೆಳಗಾವಿ- 70 ವರ್ಷಗಳ ನಂತರವೂ ಸಂವಿಧಾನ ಬಚಾವೋ ಎಂಬ ಮತ್ತೆ ಕೇಳಿಬರುತ್ತಿದೆ ಈ ದೇಶದಲ್ಲಿ ಭಗವಾನ ಬುದ್ಧನಿಂದ ಹಿಡಿದು ಸಂತ ತುಕಾರಮ ವರೆಗೆ ಅನೇಕ ಸಂತರು ಬಂದು ಹೋಗಿದ್ದಾರೆ ಎಲ್ಲರೂ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಕ್ರಾಂತಿ ಮತ್ತು ಪ್ರತಿ ಕ್ರಾಂತಿಯ ಮೂಲಕ ದೇಶದ ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡಿದರು ಆದರೆ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ರಾಂತಿಗೆ ಪ್ರತಿಯಾಗಿ ಸಂವಿಧಾನ ಬಚಾವೋ ಚಳುವಳಿ ನಡೆಸುವದು ಅನಿವಾರ್ಯವಾಗಿದೆ ಎಂದು ಬಾಬಾಸಾಹೇಬರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಅಭಿಪ್ರಾಯ ಪಟ್ಟರು

ಬೆಳಗಾವಿಯ ಗಾಂಧೀ ಭವನದಲ್ಲಿ ಸಂವಿಧಾನ ಬಚಾವೋ ದೇಶ ಬಚಾವೋ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು ಬಾಬಾಸಾಹೇಬರು ಸಂವಿಧಾನದ ಮೂಲಕ ಪರಸ್ಪರ ಒಬ್ಬರನ್ನು ಇನ್ನೊಬ್ಬರು ಗೌರವಿಸುವ ಸಂದೇಶ ನೀಡಿದರು ಬುದ್ಧ ಬಸವ ಕಬೀರ ಮಹಾವೀರ ತುಕಾರಾಮ ಸೇರಿದಂತೆ ಅನೇಕ ಸಂತರು ಸಹೋದರತ್ವ ಭಾವನೆಗಳನ್ನು ಬಿತ್ತುವ ಕೆಲಸ ಮಾಡಿದರೂ ದೇಶದಲ್ಲಿ ಇನ್ನುವರೆಗೆ ಒಬ್ಬರನ್ನು ಇನ್ನೊಬ್ಬರು ದ್ವೇಷಿಸುವ ವಾತಾವರಣ ಬೆಳೆಯುತ್ತಿದೆ ಇದಕ್ಕೆ ದೇಶದ RSS ಮತ್ತು BJP ಕಾರಣವಾಗಿದೆ ಎಂದು ಪ್ರಕಾಶ ಅಂಬೇಡ್ಜರ್ ಆರೋಪಿಸಿದರು

ಸಂವಿಧಾನ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯ ವರೆಗೆ ದೇಶದಲ್ಲಿ ಮಾನ ಮತ್ತು ಸನ್ಮಾನ ಸಿಗುತ್ತದೆ ಸಂವಿಧಾನ ಇಲ್ಲದಿದ್ದರೇ ದೇಶದಲ್ಲಿ ಮಾನ ಮತ್ತು ಸನ್ಮಾನ ಸಿಗುವದಿಲ್ಲ ದೇಶದಲ್ಲಿ ಒಬ್ಬ ವ್ಯೆಕ್ತಿ ನಮ್ಮ ಬದುಕಿನ ಮೇಲೆ ನಿಯಂತ್ರಣ ತರಲು ಹೊರಟಿದ್ದಾನೆ ನಮ್ಮ ಬದುಕಿನ ಮೇಲೆ ನಿಯಮ ತರಲು ಹೊರಟಿದ್ದಾರೆ ಪ್ರಧಾನಿ ಮೋದಿ ತಾನೊಬ್ಬ ಹಿಂದುಳಿದವ ಎಂದು ಹೇಳಿಕೊಳ್ಳುತ್ತಿದ್ದಾರೆ ಯಾವತ್ತಿನವರೆಗೆ ನರೇಂದ್ರ ಮೋದಿ OBC ಜನಾಂಗಕ್ಕೆ ವಿಶೇಷ ಮೀಸಲಾತಿ ಮತ್ತು ವಿಶೇಷ ಸವಲತ್ತುಗಳನ್ನು ನೀಡುವದಿಲ್ಲೋ ಅಲ್ಲಿಯವರೆಗೆ ಮೋದಿಯನ್ನು OBC ಎಂದು ಹೇಳಲು ಸಾಧ್ಯವೇ ಇಲ್ಲ ಅವರೊಬ್ಬ ಭಾಡಿಗೆಯ ಭಂಟ ಎಂದು ಹೇಳಬಹುದು ಎಂದು ಪ್ರಕಾಶ ಅಂಬೇಡ್ಕರ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು

ಸಂವಿಧಾನ ಉಳಿಯಬೇಕೆಂದರೆ 2019 ರ ಲೋಕಸಭೆ ಚುನಾವಣೆಯಲ್ಲಿ  ಬಿಜೆಪಿ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವದು ಎಲ್ಲರ ಜವಾಬ್ದಾರಿಯಾಗಿದೆ ಸಂವಿಧಾನ ಉಳಿಸಲು ಇದೊಂದೇ ದಾರಿ ಉಳಿದಿದೆ ಸಂವಿಧಾನ ಬದಲಿಸುವ ಮಾತನ್ನು ಕೇವಲ ಬಿಜೆಪಿ ಮತ್ತು ಆರ್ ಎಸ್ಎಸ್ ಹೇಳುತ್ತಿದೆ ಕಾಂಗ್ರೆಸ್ ನಲ್ಲಿ ನಾಯಕತ್ವದ ಪರ್ವ ಮುಗಿದುಹೋಗಿದೆ ಮೋದಿ ವಿರುದ್ಧ ಮಾತನಾಡುವ ಶಕ್ತಿಯನ್ನು ಕಾಂಗ್ರೆಸ ಕಳೆದುಕೊಂಡಿದೆ ಎಂದು ಪ್ರಕಾಶ ಅಂಬೇಡ್ಕರ್ ಲೇವಡಿ ಮಾಡಿದರು

ದಲಿತ ಸ್ವಾಭಿಮಾನಿ ಸಂಘರ್ಷ ಸಮೀತಿಯ ರಾಜ್ಯಾಧ್ಯಕ್ಷ ಆರ್ ಮೋಹನ್ ರಾಜು ಮಾತನಾಡಿ  ದಲಿತ ಸಮಾಜ ರಾಜ್ಯದಲ್ಲಿ ವಿವಿಧ ಸಂಘಟನೆಗಳಲ್ಲಿ ಹರಿದು ಹಂಚಿ ಹೋಗಿದೆ ಎಲ್ಕರನ್ನು ಒಗ್ಗೂಡಿಸಿ ಸಮಾಜವನ್ನು ಬಲಿಷ್ಠಗೊಳಿಸಲು ಪ್ರಕಾಶ ಅಂಬೇಡ್ಕರ್ ಅವರು ಸಂವಿಧಾನ ಬಚಾವೋ ದೇಶ ಬಚಾವೋ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ ದೇಶದಲ್ಲಿ ಕೋಮುವಾದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ದಲಿತರ ಮೀಸಲಾತಿಯನ್ನು ಕಸಿದುಕೊಳ್ಳು ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಆರೋಪಿಸಿದ ಮೋಹನ್ ರಾಜು ಸಂಘ ಪರಿವಾರದ ವಿರುದ್ಧ ಕಿಡಿ ಕಾರಿದರು

ಸತೀಶ ವಿರುದ್ಧ ರಮೇಶ್ ಟಾಂಗ್

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಗಂಡಾಂತರದಲ್ಲಿದೆ ಅದಕ್ಕಾಗಿ ದಲಿತ ಸಂಘಟನೆಗಳಲ್ಲಿ ಪರಸ್ಪರ ವೈಷಮ್ಯ ಹೆಚ್ಚಾಗಿ ದಲಿತ ಸಮಾಜವೂ ಗಂಡಾಂತರದಲ್ಲಿದ್ದು ಸಂವಿಧಾನ ಬಚಾವೋ ಚಳವಳಿಯ ಜೊತೆಗೆ ದಲಿತ ಬಚಾವೋ ಚಳುವಳಿ ನಡೆಸಿ ಎಲ್ಲ ದಲಿತ ಸಂಘಟನೆಗಳನ್ನು ಒಗ್ಗೂಡಿಸುವ ಕಾರ್ಯ ಆಗಬೇಕು ಎಂದು ರಮೇಶ ಜಾರಕಿಹೊಳಿ ಸಲಹೆ ನೀಡಿದರು

ಕೆಲವರು ಬುದ್ಧ ಬಸಬ ಹಾಗು ಅಂಬೇಡ್ಕರ್ ಅವರ ಹೆಸರು ಬಳಿಸಿಕೊಂಡು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ದಲಿತ ಸಮಾಜಕ್ಕೆ ಅವರು ಮಾಡಿದ್ದಾದರೂ ಏನು ಎಂಬುವದನ್ನು ದಲಿತ ಸಮುದಾಯ ಮನವರಿಕೆ ಮಾಡಿಕಳ್ಳಬೇಕೆಂದು ಹೇಳಿದ ರಮೇಶ ಜಾರಕಿಹೊಳಿ ಪರೋಕ್ಷವಾಗಿ ಸಹೋದರ ಸತೀಶ್ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದರು

ವಿಧಾನ ಪರಿಷತ್ತ ಸದಸ್ಯ ವಿವೇಕರಾವ ಪಾಟೀಲ ಜಯಶ್ರೀ ಮಾಳಗಿ ಮಲ್ಲೇಶ ಚೌಗಲೆ, ಅಶೋಕ ಐನಾವರ ಜಯಶ್ರೀ ಮಾಳಗಿ ಸೇರಿದತೆ ವಿವಿಧ ದಲಿತ ಸಂಘಟನೆಗಳ ನಾಯಕರು ಭಾಗವಹಿಸಿದ್ದರು

ಬೆಳಗಾವಿಯಲ್ಲಿ ಅಂಬೇಡ್ಕರ್ ಪರ್ವ

ಭಾರತ ರತ್ನ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ  ಮೊಮ್ಮಗ ಪ್ರಕಾಶ ಅಂಬೇಡ್ಕರ್ ಅವರು ಬೆಳಗಾವಿ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಧಾನ ಬಚಾವೋ ದೇಶ ಬಚಾವೋ ಆಂದೋಲನಕ್ಕೆ ಚಾಲನೆ ನೀಡುವದರ ಮೂಲಕ ಗಡಿಯಲ್ಲಿ ದಲಿತ ಸಮಾಜದ ಸಂಘಟನೆಗೆ ನಾಂದಿ ಹಾಡಿದರು

ಬೆಳಗಾವಿಯ ಅಂಬೇಡ್ಕರ್ ಉದ್ಯಾನವನದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ಗೌರವ ಸಲ್ಲಿಸಿದ ಪ್ರಕಾಶ ಅಂಬೇಡ್ಕರ್ ಗಾಂಧೀ ಭವನಕ್ಕೆ ಆಗಮಿಸಿದಾಗ ಸಭಿಕರು ಅವರನ್ನು ಅದ್ಧೂರಿಯಾಗಿ ಬರ ಮಾಡಿಕೊಂಡರು ಕಾರ್ಯಕ್ರಮದ ಆರಂಭದಲ್ಲಿ ಕ್ರಾಂತಿ ಗೀತೆಗಳು ಎಲ್ಲರ ಗಮನ ಸೆಳೆದರು

ಗೌರವದ ಸನ್ಮಾದ

ಬೆಳಗಾವಿ ನಗರದಲ್ಲಿ ಸಂವಿಧಾನ ಬಚಾವೋ ದೇಶ ಬಚಾವೋ ಆಂದೋಲನಕ್ಕೆ ಚಾಲನೆ ನೀಡಿದ ಪ್ರಕಾಶ ಅಂಬೇಡ್ಕರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಹಾಗು ಗಣ್ಯರು ಸತ್ಕರಿಸಿ ಗೌರವಿಸಿದರೆ ಬೆಳಗಾವಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಸಚಿವ ರಮೇಶ ಜಾರಕಿಹೊಳಿ ಅವರನ್ನು ಪ್ರಕಾಶ ಅಂಬೇಡ್ಕರ್ ಅವರು ಸತ್ಜರಿಸಿ ಗೌರವಿಸಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *