ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣ ಅದಲ್ ಬದಲ್ ಕೈಂಚಿ ಕದಲ್ ಇವರ್ನ ಬಿಟ್ಟು ಇನ್ಯಾರು ಎನ್ನುವ ರೀತಿಯಲ್ಲಿ ನಡೆಯುತ್ತದೆ ಘಟಾನು ಘಟಿ ನಾಯಕರು ತಮ್ಮ ಕ್ಷೇತ್ರಗಳನ್ನು ಬಿಟ್ಟು ಬೇರೆ ಕ್ಷೇತ್ರಗಳಿಗೆ ವಲಸೆ ಹೋಗುವ ಗುದ್ದಾಟ ನಡೆಸಿದ್ದಾರೆ
ಮಾಜಿ ಸಂಸದ ರಮೇಶ ಕತ್ತಿ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಟುಕೆಟ್ ಗಾಗಿ ಅರ್ಜಿ ಹಾಕಿದ ಬೆನ್ನಲ್ಲಿಯೇ ನಿಪ್ಪಾನಿ ಕ್ಷೇತ್ರದಿಂದ ಸ್ಪರ್ದಿಸಲು ಪ್ರಕಾಶ ಹುಕ್ಕೇರಿ ಕಾಂಗ್ರೆಸ್ ಟಿಕೆಟ್ ಗಾಗಿ ದೆಹಲಿಯಲ್ಲಿ ಲಾಭಿ ನಡೆದಿದ್ದಾರೆಂದು ತಿಳಿದು ಬಂದಿದೆ
ನಿಪ್ಪಾನಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಅವರ ಯಜಮಾನ ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಾಗಿ ಲಾಭಿ ನಡೆಸಿರುವ ಹಿನ್ನಲೆಯಲ್ಲಿ ಜೊಲ್ಲೆ ಕುಟುಂಬಕ್ಕೆ ಟಾಂಗ್ ಕೊಡಲು ಮೀಸೆ ಮಾವ ಎಂದೇ ಚಿರಪರಿಚಿತರಾಗಿರುವ ಪ್ರಕಾಶ ಹುಕ್ಕೇರಿ ನಿಪ್ಪಾನಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಲು ಎಲ್ಲಿಲ್ಲದ ಕಸರತ್ತು ನಡೆಸಿದ್ದು ನಿಪ್ಪಾನಿ ಕಾಂಗ್ರೆಸ್ ಟಿಕೆಟ್ ತಮಗೆ ನೀಡಬೇಕೆಂದು ಪಟ್ಟು ಹಿಡಿದಿರುವ ಹಿನ್ನಲೆಯಲ್ಲಿ ಈ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಕಂಗಾಲಾಗಿದ್ದಾರೆ
ಬೈಲಹೊಂಗಲ ಮತಕ್ಷೇತ್ರದಲ್ಲಿ ಬಿಜೆಪಿ ವಲಯದಲ್ಲಿ ಭಿನ್ನಮತ ಸ್ಪೋಟಗೊಂಡಿದೆ ಮಾಜಿ ಶಾಸಕ ಜಗದೀಶ ಮೆಟಗುಡ್ ಅಸಮಾಧಾನಗೊಂಡಿದ್ದು ಅವರೂ ಬಿಜೆಪಿ ತೊರೆದು ಅನ್ಯ ಪಕ್ಷದಿಂದ ಸ್ಪರ್ದಿಸುವ ಲಕ್ಷಣಗಳು ಕಂಡುಬಂದಿವೆ
ಜಿಲ್ಲೆಯಲ್ಲಿ ಪ್ರಬಲ ಸ್ಪರ್ದೆ ನಡೆಯುವ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಭ್ಯರ್ಥಿ ಗಳ ಪಟ್ಟಿಯನ್ನು ಇನ್ನುವರೆಗೆ ಬಿಡುಗಡೆ ಮಾಡಿಲ್ಲ ಪಟ್ಟಿ ಬಿಡುಗಡೆ ಯಾದ ನಂತರ ನಿಜವಾದ ಇಲೆಕ್ಷನ್ ಆಖಾಡಾ ಸಿದ್ಧಗೊಳ್ಳಲಿದೆ