ಬೆಳಗಾವಿ-ಪ್ರಕಾಶ್ ಹುಕ್ಕೇರಿಯವರಿಗೆ ಈ ವಯಸ್ಸಿನಲ್ಲೂ ಅವರಲ್ಲಿರುವ ಚೈತನ್ಯ,ಛಲಗಾರಿಕೆ ನೋಡಿದ್ರೆ ನಿಜವಾಗಿಯೂ ಅಚ್ಚರಿ ಆಗುತ್ತೆ, ಶಿಕ್ಷಕರ ಕ್ಷೇತ್ರದಿಂದ ಎಂಎಎಲ್ಸಿ ಆಗಿರುವ ಪ್ರಕಾಶ್ ಹುಕ್ಕೇರಿ ಅವರು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಯಾದಾಗಿನಿಂದ ಅವರಲ್ಲಿನ ಹುಮ್ಮಸ್ಸು ಇಮ್ಮಡಿಯಾಗಿದೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಇವತ್ತು ಮಾದ್ಯಮಗಳ ಜೊತೆ ಮಾತನಾಡುತ್ತ ಪ್ರಕಾಶ್ ಹುಕ್ಕೇರಿಯವರ ಕುರಿತು ಅಚ್ಚರಿಯ ಸಂಗತಿಯೊಂದನ್ನು ಹೇಳಿದ್ದಾರೆ.ಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿ ಎರಡೂ ಕ್ಷೇತ್ರದಿಂದ ಟಿಕೆಟ್ ಕೇಳಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಪ್ರಕಾಶ್ ಹುಕ್ಕೇರಿ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸಲು ಸೈ ಚಿಕ್ಕೋಡಿಯಿಂದಲೂ ಸ್ಪರ್ದೆ ಮಾಡಲು ಸೈ ಎನ್ನುವ ಪ್ರಸ್ತಾವನೆಯನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಸಲ್ಲಿಸಿದ್ದಾರೆ.
ಈ ಹಿಂದೆ ಮಂತ್ರಿಯಾಗಿದ್ದಾಗ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು 2014 ಮೋದಿ ಅಲೆಯಲ್ಲೂ ಗೆಲುವು ಸಾಧಿಸಿದ್ದ ಪ್ರಕಾಶ್ ಹುಕ್ಕೇರಿ ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ದಿಸಲು ಟಿಕೆಟ್ ಕೊಡಿ ಎನ್ನುವ ಧೈರ್ಯ ಛಲಗಾರಿಕೆ ನಿಜಕ್ಕೂ ಮಾದರಿಯಾಗಿದೆ.
ಕಾಂಗ್ರೆಸ್ಸಿನ ನಿಷ್ಠಾವಂತ, ನಾಯಕರಾಗಿರುವ ಪ್ರಕಾಶ್ ಹುಕ್ಕೇರಿ, ಮಲ್ಲಿಕಾರ್ಜುನ್ ಖರ್ಗೆ ಅವರ ಪರಮಾಪ್ತರು,ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರಕಾಶ್ ಹುಕ್ಕೇರಿ ಅವರು ಕೇಂದ್ರದ ಮಂತ್ರಿ ಆಗೋದರಲ್ಲಿ ಅನುಮಾನವೇ ಇಲ್ಲ.