Breaking News

ಧ್ವನಿ ವರ್ದಕಗಳಲ್ಲಿ ಆಜಾನ್ ಬಂದ್, ಮಾಡದಿದ್ರೆ ಅದಕ್ಕೆ ಪ್ರತಿಯಾಗಿ ಒಂದು ಸಾವಿರ ದೇವಸ್ಥಾನಗಳಲ್ಲಿ ಭಜನೆ

ಬೆಳಗಾವಿ: ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿನ ಧ್ವನಿವರ್ಧಕ ತೆರವು ಮಾಡಬೇಕು. ಇಲ್ಲವಾದರೆ ಮೇ 9 ರಂದು ರಾಜ್ಯದ 1 ಸಾವಿರ ದೇವಸ್ಥಾನಗಳಲ್ಲಿ ಭಜನೆ, ಸುಪ್ರಭಾತ ಪಠಣ ಮಾಡಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಜಾನ್ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದೇವೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೂ ಮನವಿ ನೀಡಿದ್ದೇವೆ. ಆದರೆ ಶಬ್ದ ಮಾತ್ರ ಇನ್ನೂ ನಿಂತಿಲ್ಲ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ನಿರಂತರವಾಗಿದೆ. ತಹಶಿಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಕೊಟ್ಟರೂ ಯಾವುದೇ ಕ್ರಮವಾಗಿಲ್ಲ. ಕೇವಲ ನೋಟಿಸ್ ಕೊಡುವ ಕೆಲಸ ಆಗಿದೆ. ಆದರೆ ಶಬ್ದದಿಂದ ಆಗುವ ದೊಡ್ಡ ತೊಂದರೆ ನಿಂತಿಲ್ಲ. ಹೀಗಾಗಿ ಮೇ 9ರಂದು ಓಂಕಾರ, ಭಜನೆ ಹಾಕುತ್ತೇವೆ. ಸರ್ಕಾರ, ಮುಸ್ಲಿಂ ಮಾನಸಿಕತೆ ವಿರುದ್ಧ ನಮ್ಮ ಹೋರಾಟ ನಡೆಯಲಿದೆ. ನಮ್ಮ ವಿರುದ್ಧ ಕ್ರಮಕ್ಕೆ ಮುಂದಾದ್ರೆ ಸಂಘರ್ಷ ಆಗಲಿದೆ. ಆಜಾನ್, ಭಜನೆ ವಿರುದ್ಧ ನಮ್ಮ ಹೋರಾಟ ಅಲ್ಲ, ಶಬ್ಧದ ವಿರುದ್ಧ ನಮ್ಮ ಹೋರಾಟ. ಸರ್ಕಾರ ಕೂಡಲೇ ಯುಪಿ ಮಾದರಿಯಲ್ಲಿ ಮೈಕ್ ಕೆಳಗೆ ಇಳಿಸಿಬೇಕು. ಸಿಎಂ ದೈರ್ಯ ತೆಗೆದುಕೊಂಡು ಮೈಕ್ ನಿಲ್ಲಿಸಬೇಕು. ಈ ರೀತಿ ದೌರ್ಬಲ್ಯ ತೋರಿದ್ರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸೀಟ್ ಬರಲ್ಲ. ಬಿಜೆಪಿ ಸರ್ಕಾರಕ್ಕೆ ಮುಸ್ಲಿಂರ ಒಂದೂ ಮತ ಬೀಳಲ್ಲ‌. ಹೀಗಾಗಿ ಬಿಜೆಪಿ ಸರ್ಕಾರ ಗಂಡಸ್ತನ ಪ್ರದರ್ಶಿಸಬೇಕು ಎಂದರು. ರಾಜ್ ಠಾಕ್ರೆ ಕಾರ್ಯಕ್ಕೆ ನಮ್ಮ ಬೆಂಬಲವಿದೆ. ಆದರೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಬಂಧಿಸುವ ಕೆಲಸ ಮಾಡುತ್ತಿದ್ದಾರೆ. ಉದ್ಧವ್ ಠಾಕ್ರೆ ಅಪ್ಪನಂತಿಲ್ಲ ಎಂದು‌ ಆಕ್ರೋಶ ವ್ಯಕ್ತಪಡಿಸಿದರು

.ದ್ರೋಹಿಗಳನ್ನು ಬಂಧಿಸಿ:

ಮೈಸೂರು ಜಿಲ್ಲೆ ಕೌಲಂದೆ ಗ್ರಾಮ ಛೋಟಾ ಪಾಕಿಸ್ತಾನ ಎಂಬ ಘೋಷಣೆ ವಿಚಾರಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕೌಲಂದೆಯ ದೇಶದ್ರೋಹಿ ಮುಸ್ಲಿಮರನ್ನು ಅರೆಸ್ಟ್ ಮಾಡಬೇಕು. ಇಲ್ಲವಾದ್ರೆ ನಾವು ‘ಕೌಲಂದೆ ಚಲೋ’ ಘೋಷಣೆ ಮಾಡಿ ಅವರನ್ನ ಒದ್ದು ಓಡಿಸಬೇಕಾಗುತ್ತದೆ. ಉದ್ಧಟತನದಿಂದ ಮುಸ್ಲಿಮರು ಕೌಲಂದಾ ಛೋಟಾ ಪಾಕಿಸ್ತಾನ ಎಂಬ ಘೋಷಣೆ ಈಗಾಗಲೇ ವೈರಲ್ ಆಗಿದೆ. ಈವರೆಗೂ ಯಾರನ್ನು ಬಂಧಿಸದೇ ಇರುವುದು ಸರ್ಕಾರದ ನಿರ್ಲಕ್ಷ್ಯ ಧೋರಣೆ ತೋರಿಸುತ್ತದೆ. ಈ ರೀತಿಯ ದೇಶದ್ರೋಹ ಪ್ರಕ್ರಿಯೆ ಆಗ್ತಿರೋದು ಮೊದಲನೇ ಬಾರಿ ಏನಲ್ಲ. ಪಾಕಿಸ್ತಾನ ಮೇಲೆ ಪ್ರೀತಿ ಇರುವವರು ಪಾಕಿಸ್ತಾನಕ್ಕೆ ಹೋಗಲಿ. ಅಲ್ಲಿ ಏನು ಪರಿಸ್ಥಿತಿ ಇದೇ ಗೊತ್ತಾಗಲಿ, ನರಕ ಇದೆ. ಪ್ರತಿನಿತ್ಯ ಮಸೀದಿಗಳಲ್ಲಿ ಗುಂಡು, ಬಾಂಬ್‌ಗಳು ಬೀಳುತ್ತೀವೆ. ನಮ್ಮ ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿರುವಿರಾ ನೀವು? ಅದು ಎಂದೂ ಯಾವತ್ತಿಗೂ ಸಾಧ್ಯವಿಲ್ಲ ಎಂದರು.

ಎಂಡಿಎಫ್ ವಿರುದ್ಧ ತನಿಖೆಯಾಗಲಿ:
ಮಂಗಳೂರಲ್ಲಿ ಎಂಡಿಎಫ್ ಸಂಘಟನೆ ಸಕ್ರಿಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಮುಸ್ಲಿಂ ಡಿಫೆನ್ಸ್ ಫೋರ್ಸ್ ಮಾಡಿದ್ದಾರೆ. ಅದರಿಂದ ಖಟ್ಟರ್ ಮುಸ್ಲಿಮರನ್ನು ತಯಾರಿಸುವ ಪ್ರಕ್ರಿಯೆ ನಡೆದಿದೆ. ಮೆಸೇಜ್ ಮೂಲಕ, ಒತ್ತಾಯ ಮೂಲಕ ಮಾಡುವ ಮಾಹಿತಿ ಬಂದಿದೆ. ಪಿಎಫ್ಐ, ಸಿಎಫ್‌ಐ, ಎಸ್‌ಡಿಪಿಐ, ಎಐಎಂಐಎಂ ಈ ಸಂಘಟನೆಗಳ ಜೊತೆ ಎಂಡಿಎಫ್ ಸಂಘಟನೆ ಹುಟ್ಟುಹಾಕಿದ್ದಾರೆ. ಈ ಎಲ್ಲ ಸಂಘಟನೆ ಹದ್ದುಬಸ್ತಿನಲ್ಲಿಟ್ಟು ಕ್ರಮ ಕೈಗೊಳ್ಳಬೇಕು. ಎಂಡಿಎಫ್ ಚಟುವಟಿಕೆ ಗಮನಿಸಿ ಸರ್ಕಾರ ಹದ್ದುಬಸ್ತಿನಲ್ಲಿಡ‌ಬೇಕು. ಪಿಎಫ್ಐ ಬ್ಯಾನ್ ಆಗಲೇಬೇಕು ಅದರ ವಿರುದ್ಧ ಹೋರಾಟ ಮಾಡುತ್ತೇವೆ. ಎಂಡಿಎಫ್ ಚಿಹ್ನೆ, ಮೆಸೇಜ್ ನೋಡಿದ್ರೆ ಅಲ್‌ಖೈದಾ ಮಾದರಿ ವರ್ತನೆ, ಲಕ್ಷಣಗಳು ಕಾಣುತ್ತಿವೆ. ಈಗ ಹೊಸದಾಗಿ ಹುಟ್ಟು ಹಾಕಿದ್ದಾರೋ ಮೊದಲು ಇತ್ತೋ? ಗೊತ್ತಿಲ್ಲ. ಕೂಡಲೇ ಸರ್ಕಾರ ಎಂಡಿಎಫ್ ಬಗ್ಗೆ ತನಿಖೆ ಮಾಡಿ ಅದು ಏನು ಅಂತಾ ಬಹಿರಂಗಪಡಿಸಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *