ಬೆಳಗಾವಿ- ಮಹಾರಾಷ್ಟ್ರದ ಶಿವಸೇನೆ ಜೊತೆ ಕೈಜೋಡಿಸಿ ಶ್ರೀರಾಮ ಸೇನೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು ತಯಾರಿ ನಡೆಸಿದೆ ಮುಂಬೈಗೆ ತೆರಲಿದ ಪ್ರಮೋದ ಮುತಾಲಿಕ ಶಿವಸೇನೆಯ ನಾಯಕ ಉದ್ಧವ ಠಾಖ್ರೆ ಜೊತೆಗೆ ಮಾತುಕತೆ ನಡೆಸಿದ್ದಾರೆ
ಪ್ರಮೋದ ಮುತಾಲಿಕ ಶ್ರೀರಾಮ ಸೇನೆ ಸಂಸ್ಥಾಪಕರಾಗಿದ್ದು ಶಿವಸೇನೆಯನ್ನ ಕರ್ನಾಟಕಕ್ಕೆ ತರುವುದಕ್ಕಾಗಿ ಮುತಾಲಿಕ ಮುಂಬೈಗೆ ತೆರಳಿದ್ದು ಮುಂಬೈನಲ್ಲಿ ಶಿವ ಸೇನೆ ನಾಯಕರನ್ನ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ
ಉದ್ಧವ ಠಾಕ್ರೆ ಸೇರಿ ವಿವಿಧ ಶಿವಸೇನೆ ನಾಯಕರನ್ನ ಭೇಟಿಯಾಗಲಿರುವ ಮುತಾಲಿಕ 2018 ರ ಚುನಾವಣೆಯಲ್ಲಿ ಕರ್ನಾಟಕಕ್ಕೆ ಶಿವ ಸೇನೆ ಎಂಟ್ರಿ ಆಗುತ್ತಾ ಎನ್ನುವದರ ಬಗ್ಗೆ ಚರ್ಚೆ ಮಾಡಿ ಉದ್ದವ ಠಾಕ್ರೆಯಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಕರ್ನಾಟಕದ ಗಡಿ ಪ್ರದೇಶ ಸೇರಿ 100 ಕಡೆ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಪ್ರಮೋದ ಮುತಾಲಿಕ ಚಿಂತನೆ ನಡೆಸಿದ್ದಾರೆ
ಬೆಳಗಾವಿ, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಯಾವುದಾದರು ಒಂದು ಮತಕ್ಷೇತ್ರದಿಂದ ಪ್ರಮೋದ ಮುತಾಲಿಕ ಸ್ಪರ್ಧೆ ಮಾಡಲು ನಿರ್ಧರಿಸಿದ್ದು ಶಿವಸೇನೆ ಗಡಿಯಲ್ಲಿ ಚುನಾವಣೆಗೆ ಶ್ರೀರಾಮ ಸೇನೆ ಜೊತೆ ಕೈಜೋಡಿಸಿದರೆ ಗಡಿಭಾಗದ ಬೆಳಗಾವಿಯಲ್ಲಿ ಬಿಜೆಪಿ ಮೇಲೆ ಪರಿಣಾಮ ಬೀರಲಿದೆ