Breaking News

ಡ್ರಗ್ಸ್ ಕುರಿತು,ಸ್ಯಾಂಡಲ್ ವುಡ್ ನಡುಗಿಸಿದ ಸಂಬರಗಿ ರಾಣಿ ಚನ್ನಮ್ಮನ ಮರಿ ಮೊಮ್ಮಗನಂತೆ….!

ಬೆಳಗಾವಿ- ಡ್ರಗ್ಸ್ ಮಾಫಿಯಾ ಬಯಿಲೆಗೆಳೆದು ಸ್ಯಾಂಡಲ್ ವುಡ್ ರಂಗವನ್ನೇ ನಡುಗಿಸಿದ ಸಮಾಜ ಸೇವಕ ಪ್ರಶಾಂತ ಸಂಬರಗಿ ಮೂಲತಹ ಬೆಳಗಾವಿ ಜಿಲ್ಲೆಯವರು ಎನ್ನುವದು ಹೆಮ್ಮೆಯ ಸಂಗತಿಯಾಗಿದೆ.

ಸಮಾಜ ಸೇವಕ ಪ್ರಶಾಂತ ಸಂಬರಗಿ ಅವರು,ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಮುನವಳ್ಳಿ ಗ್ರಾಮದವರಾಗಿದ್ದು,ನಾನು ಕಿತ್ತೂರು ರಾಣಿ ಚನ್ನಮ್ಮನ ವಂಶಸ್ಥ,ಚನ್ನಮ್ಮನ ಮರಿ ಮೊಮ್ಮಗ ಎಂದು ಪ್ರಶಾಂತ ಸಂಬರಗಿ ಅವರು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಆರಂಭವಾದಾಗ ಫೇಸ್ ಬುಕ್ ಮೂಲಕ ಡ್ರಗ್ಸ್ ಮಾಪಿಯಾ ಜೊತೆ ಇರುವ ಲಿಂಕ್ ಕುರಿತು ಪ್ರಮುಖ ವಿಷಯಗಳನ್ನು ಪೋಸ್ಟ್ ಮಾಡಿ ಡ್ರಗ್ಸ್ ಗಲಾಟೆಗೆ ಹೊಸ ತಿರುವು ಕೊಟ್ಟ ಹಿರೋ ಪ್ರಶಾಂತ ಸಂಬರಗಿ ಅವರು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಹಿರೇ ಮುನವಳ್ಳಿ ಗ್ರಾಮದವರು ಅನ್ನೋದು ವಿಶೇಷವಾಗಿದೆ

ಮಾಜಿ ಮಂತ್ರಿ ಜಮೀರ ಅಹ್ಮದ,ಮತ್ತು ಸಂಜನಾ ಇಬ್ಬರೂ ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದರು,ಸಂಜನಾ ಕ್ಯಾಸಿನೊ ಗೆ ಹೋಗಿರುವ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ,ಬೆಂಗಳೂರು ಪೋಲೀಸರಿಗೆ ಪ್ರಮುಖ ಸಾಕ್ಷಾಧಾರಗಳನ್ನು ಒದಗಿಸಿದ್ದು,ಡ್ರಗ್ಸ್ ಮಾಫಿಯಾಗೂ ಸ್ಯಾಂಡಲ್ ವುಡ್ ಗೂ ಇರುವ ನಂಟಿನ ಬಗ್ಗೆ ಬಿರುಗಾಳಿ ಎಬ್ಬಿಸಿದವರಲ್ಲಿ ಪ್ರಶಾಂತ ಸಂಬರಗಿ ಅವರು ಪ್ರಮುಖರಾಗಿದ್ದಾರೆ.

ನಟಿ ಸಂಜನಾ ಪ್ರಶಾಂತ ಸಂಬರಗಿ ಅವರ ಬಗ್ಗೆ ಅವಹೇಳನಕಾರಿಯಾಗಿ,ಮಾತಾಡಿದ್ದರು,ಜಮೀರ ಅಹ್ಮದ ಮತ್ತು ಸಂಜನಾ ಶ್ರೀಲಂಕಾದ ಕ್ಯಾಸಿನೊ ಗೆ ಹೋಗಿರುವ ವಿಷಯವನ್ನು ಬಹಿರಂಗ ಪಡಿಸಿದ ಪ್ರಶಾಂತ ಸಂಬರಗಿ ವಿರುದ್ಧ ಮಾಜಿ ಮಂತ್ರಿ ಜಮೀರ ಅಹ್ಮದ ದೂರು ದಾಖಲಿಸಿದ್ದಾರೆ.

ಜಮೀರ ಅಹ್ಮದ್ ಮತ್ತು ಸಂಜನಾ ಕುರಿತು ಹಲವಾರು ವಿಷಯಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಚಿತ್ರರಂಗವನ್ನೇ ಅಲ್ಲಾಡಿಸಿದ್ದು ಬೆಳಗಾವಿ ಜಿಲ್ಲೆಯವರು ಅನ್ನೋದು ವಿಶೇಷ ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿರುವ ಸಂಬರಗಿ ನಾನು ರಾಣಿ ಚನ್ನಮ್ಮನ ಮರಿ ಮೊಮ್ಮಗ ಅಂತಾ ಅವರೇ ಹೇಳಿಕೊಂಡಿದ್ದಾರೆ ಅವರು ಮಾತನಾಡಿರುವ ವಿಡಿಯೋ ಕೇಳಲು ಕೆಳಗಿನ ಲಿಂಕ್ ಒತ್ತಿ

https://m.facebook.com/story.php?story_fbid=10158966745040712&id=771630711

 

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *