ಪರೀಕ್ಷೆ ಕ್ಯಾನ್ಸಲ್…1ರಿಂದ 6 ತರಗತಿಗಳಿಗೆ ನಾಳೆಯಿಂದಲೇ ರಜೆ
ಬೆಳಗಾವಿ- ಕರೋನಾ ವೈರಸ್ ಹರಡದಂತೆ ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು ಪರೀಕ್ಷೆಗಳು ನಡೆಯುತ್ತಿದ್ದರೂ ಅದನ್ನು ರದ್ದುಗೊಳಿಸಿ 1ನೇಯ ತರಗತಿಯಿಂದ 6ನೇಯ ತರಗತಿಗಳಿಗೆ ನಾಳೆಯಿಂದಲೇ ಬೇಸಿಗೆ ರಜೆ ನೀಡಲಾಗಿದೆ
1ರಿಂದ 6ನೇಯ ತರಗತಿಗಳ ಪರೀಕ್ಷೆ ನಡೆಯುತ್ತಿದ್ದರೂ ಪರೀಕ್ಷೆ ರದ್ದು ಪಡಿಸಿ ನಾಳೆಯಿಂದಲೇ ಬೇಸಿಗೆ ರಜೆ ನೀಡುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ
7 ಮತ್ತು 10 ತರಗತಿಯ ಪರೀಕ್ಷೆಗಳು ನಿಗದಿತ ಅವಧಿಯಲ್ಲಿ ನಡೆಯುತ್ತವೆ ಆದ್ರೆ ಈ ತರಗತಿಳ ವಿಧ್ಯಾರ್ಥಿಗಳಿಗೆ ನಾಳೆಯಿಂದಲೇ ಅಭ್ಯಾಸದ ರಜೆ ನೀಡುವಂತೆ ಆದೇಶಿಸಲಾಗಿದೆ
8 ಮತ್ತು 9 ನೇಯ ತರಗತಿಗಳ ಪರೀಕ್ಷೆಯನ್ನು ಮಾರ್ಚ 23 ರೊಳಗಾಗಿ ಮುಗಿಸುವಂತೆ ಪರೀಕ್ಷಾ ದಿನಾಂಕದ ವರೆಗೆ ಈ ಎರಡೂ ತರಗತಿಗಳ ವಿಧ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ ರಜೆ ನೀಡುವಂತೆ ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ